Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕುಕ್ಕರ್ನಲ್ಲಿ ಮಾಡಿ ಬದನೆಕಾಯಿ ಗ್ರೇವಿ; ತಿಂಡಿ-ಊಟ ಎಲ್ಲದಕ್ಕೂ ಇದು ಬೆಸ್ಟ್
ಊಟದೊಂದಿಗೆ ಹಾಗೆ ತಿಂಡಿಯೊಂದಿಗೆ ಹಲವು ರೀತಿಯ ಖಾದ್ಯಗಳನ್ನು ನೀವು ಬಯಸುತ್ತೀರಿ. ಅದ್ರಲ್ಲು ತಿಂಡಿಗೆ ಹಾಗೆ ಊಟಕ್ಕೂ ಸೇರಿ ಒಂದೇ ಖಾದ್ಯ ಇದ್ದರೆ ಬಹಳ ಉತ್ತಮ ಎಂದು ಆಲೋಚಿಸುವವರೇ ಹೆಚ್ಚು. ಹೀಗಾಗಿ ಬೆಳಗ್ಗೆ ತಿಂಡಿಗೆ ಚಪಾತಿ, ರೊಟ್ಟಿ, ದೋಸೆ, ಪರೋಟ ಸೇರಿ ವಿವಿಧ ಬಗೆಯ ಖಾದ್ಯ ಮಾಡಿದ್ರೆ ಅದರೊಂದಿಗೆ ಸವಿಯಲು ಯಾವುದಾದರು ಚಟ್ನಿ, ಪಲ್ಯ, ಗ್ರೇವಿ ಮಾಡುತ್ತೀರಿ.
ಆದ್ರೆ ಈ ಗ್ರೇವಿ ಮಧ್ಯಾಹ್ನದ ಅಥವಾ ರಾತ್ರಿ ಊಟಕ್ಕೂ ರುಚಿ ನೀಡುವುದಾದರೆ ಬಹಳ ಉತ್ತಮ. ಹೀಗಾಗಿ ನಾವಿಂದು ಸುಲಭವಾಗಿ ಮಾಡುವ ಬದನೆಕಾಯಿ ಮಸಾಲ ಗ್ರೇವಿ ಕುರಿತಾಗಿ ನಾವಿಲ್ಲಿ ತಿಳಿದುಕೊಳ್ಳೋಣ. ನೀವು ರೊಟ್ಟಿ, ಚಪಾತಿ ಸವಿಯಲು ಈ ಬದನೆಕಾಯಿ ಮಸಾಲ ಗ್ರೇವಿ ಮಾಡಿರುತ್ತೀರಿ. ಎಣ್ಣೆಗಾಯಿಯ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುವುದು ಸಹಜ.

ಆದ್ರೆ ಊಟದೊಂದಿಗೆ ಹಾಗೆ ತಿಂಡಿಗೂ ಈ ಬದನೆಕಾಯಿ ಮಸಾಲ ಗ್ರೇವಿ ಬಹಳ ರುಚಿ ತರಲಿದೆ. ನಾವಿಂದು ತಿಂಡಿಯೊಂದಿಗೆ ಹಾಗೆ ಊಟಕ್ಕೂ ರುಚಿ ತರುವ ಈ ಬದನೆಕಾಯಿ ಗ್ರೇವಿ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಈ ಬದನೆಕಾಯಿ ಗ್ರೇವಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬದನೆಕಾಯಿ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ
- ಕಡಲೆ ಬೀಜ
- ಗೋಡಂಬಿ
- ಧನಿಯಾ ಕಾಳು
- ಗಸೆ ಗಸೆ
- ಬಿಳಿ ಎಳ್ಳು
- ಜೀರಿಗೆ
- ಚಕ್ಕೆ
- ಏಲಕ್ಕಿ
- ಲವಂಗ
- ಸೋಂಪು ಕಾಳು
- ಕರಿಬೇವು
- ಎಣ್ಣೆ
- ಉಪ್ಪು
- ಅರಶಿಣ
- ತೆಂಗಿನಕಾಯಿ ತುರಿ
- ಹಸಿ ಮೆಣಸು
- ಈರುಳ್ಳಿ
- ಟೊಮೆಟೋ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
ಬದನೆಕಾಯಿ ಗ್ರೇವಿ ಮಾಡುವ ವಿಧಾನವೇನು?
ಮೊದಲು ಬದನೆಕಾಯಿಯನ್ನು ತೊಳೆದುಕೊಂಡು ಮಧ್ಯದಲ್ಲಿ ಸಿಗಿದುಕೊಂಡು ನೀರಿನಲ್ಲಿ ಹಾಕಿಡಿ. ಒಂದು ಬದನೆಯಲ್ಲಿ 4 ಭಾಗ ಮಾಡಿ ಕತ್ತರಿಸದೆ ಸಿಗಿದು ಇಡಿ. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಕಡಲೆ ಬೀಜ, ಗೋಡಂಬಿ, ಧನಿಯಾ ಕಾಳು, ಗಸೆ ಗಸೆ, ಬಿಳಿ ಎಳ್ಳು, ಜೀರಿಗೆ, ಚಕ್ಕೆ, ಏಲಕ್ಕಿ, ಲವಂಗ, ಸೋಂಪು ಕಾಳು ಹಾಕಿ ಹುರಿದುಕೊಳ್ಳಬೇಕು. ಕೊನೆಯಲ್ಲಿ ಕರಿಬೇವು ಸಹ ಸೇರಿಸಿ ಬಿಸಿ ಮಾಡಿ ಇಳಿಸಿಕೊಳ್ಳಿ.
ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್ಗೆ ಹಾಕಿಕೊಂಡು ಪುಡಿ ಪುಡಿಯಾಗಿ ರುಬ್ಬಬೇಕು. ನಂತರ ನೀರು ಸೇರಿಸಿ ಹಸಿ ತೆಂಗಿನಕಾಯಿ ತುರಿ ಸೇರಿಸಿ, ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಚಟ್ನಿ ರೀತಿಯ ಮಸಾಲೆಯನ್ನು ತೆಗೆದಿಡಿ.
ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು, ಇದಕ್ಕೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು ಹಾಕಿ ಫ್ರೈ ಮಾಡಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಬೇವು ಸೇರಿಸಿ. ಹಾಗೆ ಅರಶಿಣ ಸೇರಿಸಿ ಬಳಿಕ ನೀರಿನಲ್ಲಿದ್ದ ಬದನೆಕಾಯಿಯನ್ನು ಇದಕ್ಕೆ ಹಾಕಿ ಚೆನ್ನಾಗಿ 2ರಿಂದ 3 ನಿಮಿಷ ಫ್ರೈ ಮಾಡಬೇಕು.
ಈಗ ಇದಕ್ಕೆ ದನಿಯಾ ಪುಡಿ, ಖಾರದ ಪುಡಿ, ನಂತರ ಇದಕ್ಕೆ ರುಬ್ಬಿಕೊಂಡಿದ್ದ ಮಸಾಲೆಗಳನ್ನು ಸಹ ಹಾಕಿಕೊಳ್ಳಬೇಕು. ಹಾಗೆ ಟೊಮೆಟೋ ಸೇರಿಸಿಕೊಂಡು ಮಿಕ್ಸ್ ಮಾಡಿ. ಗ್ರೇವಿ ದಪ್ಪವಿರುವ ಕಾರಣ ಇದಕ್ಕೆ ಸ್ವಲ್ಪ ನೀರು ಸೇರಿಸಿ. ಕಾಯಿಗಳು ಮುಕ್ಕಾಲು ಭಾಗ ಮುಳುಗುವಷ್ಟು ನೀರು ಹಾಕಿ. ಹಾಗೆ ಉಪ್ಪು ಸೇರಿಸಿಕೊಂಡು ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ.
ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಗ್ರೇವಿ ಸಿದ್ದವಾಗುತ್ತೆ.



Click it and Unblock the Notifications
