Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಒಂದೇ ಬದನೆಕಾಯಿಯಲ್ಲಿ ಅದ್ಭುತ ರುಚಿಯ ಗೊಜ್ಜು ಸವಿಯಿರಿ..! ಮಾಡುವ ವಿಧಾನ ಇಲ್ಲಿದೆ..!
ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಇಲ್ಲವೆ ಊಟಕ್ಕೆ ಯಾವುದಾದರು ತರಕಾರಿಯ ಗೊಜ್ಜು ಮಾಡಿ ಸವಿಯೋದು ಕಾಮನ್. ಅದರಲ್ಲೂ ಬದನೆಕಾಯಿಯಿಂದ ಮಾಡುವಂತಹ ಗೊಜ್ಜು ನೀವೆಲ್ಲಾ ಸವಿದಿರಬಹುದು. ಬದನೆಕಾಯಿಯ ಚಟ್ನಿ ಹಾಗೂ ಗೊಜ್ಜು ಸವಿಯಲು ಬಹಳ ರುಚಿಕರ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ ಇದಾಗಿರುತ್ತೆ. ಊಟ ತಿಂಡಿಗೆ ಒಳ್ಳೆಯ ರುಚಿ ತರುವುದು ಈ ಬದನೆಕಾಯಿ ಚಟ್ನಿ ಹಾಗೂ ಗೊಜ್ಜು ಆಗಿದೆ.
ಬದನೆಕಾಯಿಯನ್ನು ಸುಟ್ಟು ಮಾಡುವಂತಹ ಚಟ್ನಿಯು ಅತ್ಯಂತ ರುಚಿಕರವಾಗಿರುತ್ತೆ. ಇದು ಎಲ್ಲಾ ತಿಂಡಿ, ಊಟಕ್ಕೂ ರುಚಿಕರವಾಗಿರುತ್ತೆ, ಎಲ್ಲರಿಗೂ ಈ ಚಟ್ನಿ ಸವಿಯುವುದು ಇಷ್ಟವಾಗುತ್ತೆ. ಆದ್ರೆ ನಾವಿಂದು ಈ ಬದನೆಕಾಯಿಯ ಗೊಜ್ಜು ಮಾಡುವ ಕುರಿತು ತಿಳಿದುಕೊಳ್ಳೋಣ. ಒಂದೇ ಒಂದು ಬದನೆಕಾಯಿ ಇದ್ದರೂ ಕೂಡ ಈ ರುಚಿಕರ ಗೊಜ್ಜು ಮಾಡಬಹುದು.

ಬದನೆಕಾಯಿಯಿಂದ ಈ ಗೊಜ್ಜು ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಬದನೆಕಾಯಿ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಈ ಗೊಜ್ಜು ಮಾಡಲು ಎಷ್ಟು ಸಮಯ ಹಿಡಿಯಲಿದೆ? ರುಚಿ ಹೇಗಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬದನೆಕಾಯಿ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬದನೆಕಾಯಿ - ದೊಡ್ಡದು ಒಂದು
- ಟೊಮೆಟೋ-1
- ಈರುಳ್ಳಿ- 1
- ಹಸಿ ಮೆಣಸು
- ಕರಿಬೇವು
- ಹುಣಸೆ ಹಣ್ಣು
- ಬೆಳ್ಳುಳ್ಳಿ
- ಜೀರಿಗೆ
- ಸಾಸಿವೆ
- ಕೊತ್ತಂಬರಿ
- ಉಪ್ಪು
- ಎಣ್ಣೆ
ಬದನೆಕಾಯಿ ಗೊಜ್ಜು ಮಾಡುವುದು ಹೇಗೆ?
ಬದನೆಕಾಯಿಯನ್ನು ಹಲವು ವಿಧಾನದಲ್ಲಿ ಗೊಜ್ಜು ಮಾಡಬಹುದು. ಆದ್ರೆ ನಾವಿಂದು ಬೇಯಿಸಿಕೊಂಡು ಮಾಡುವ ವಿಧಾನದಲ್ಲಿ ಗೊಜ್ಜು ಮಾಡೋಣ. ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಬಿಸಿ ಆಗಲು ಬಿಡಿ. ಬೀರು ಬಿಸಿ ಆದಾಗ ಹೆಚ್ಚಿಕೊಂಡಿರುವ ಬದನೆಕಾಯಿ, ಟೊಮೆಟೋ, ಹಸಿ ಮೆಣಸು ಹಾಕಿಕೊಳ್ಳಿ. 10 ನಿಮಿಷ ಇದನ್ನು ಬೇಯಿಸಿಕೊಳ್ಳಬೇಕು. ಇದಕ್ಕೆ ಹುಣಸೆ ಹಣ್ಣು , ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಬೇಯಿಸಿಕೊಳ್ಳಿ.
10 ನಿಮಿಷ ಬೇಯಿಸಿದ ಬಳಿಕ ಒಲೆ ಆಫ್ ಮಾಡಿಕೊಂಡು ಎಲ್ಲಾ ಪದಾರ್ಥಗಳ ಎತ್ತಿಟ್ಟುಕೊಳ್ಳಿ. ಈಗ ಜೀರಿಗೆಯನ್ನು ಕುಟ್ಟಾಣಿಗೆ ಹಾಕಿ ಕುಟ್ಟಿಕೊಳ್ಳಿ. ಕುಟ್ಟಾಣಿ ಇಲ್ಲದಿದ್ದರೆ ಚಪಾತಿ ಲಟ್ಟಿಸುವ ಮಣೆ ಮೇಲೆ ಇಟ್ಟು ಯಾವುದಾದರು ವಸ್ತುವಿನಿಂದ ಕುಟ್ಟಿಕೊಳ್ಳಬಹುದು. ಇಲ್ಲವೆ ಪುಡಿ ಮಾಡಬಹುದು. ಈಗ ಅದೇ ಕುಟ್ಟಾಣಿಗೆ ಬೇಯಿಸಿರುವ ಹಸಿ ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಹಾಕಿ ಕುಟ್ಟಿಕೊಳ್ಳಿ.
ಈಗ ಬದನೆಕಾಯಿಯನ್ನು ಬೇಯಿಸಿದ ಪಾತ್ರೆಯಲ್ಲಿ ಸ್ವಲ್ಪ ಜಜ್ಜಿಕೊಳ್ಳಬೇಕು. ಟೊಮೆಟೋ ಹಸಿ ಮೆಣಸು ಎಲ್ಲಾ ಸೇವಿಸಿ ಮಿಶ್ರಣ ಮಾಡಬೇಕು. ಅದು ಜಜ್ಜಿ ಪುಡಿ ಪುಡಿಯಾಗಬೇಕು. ನಂತರ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಸಾಸಿವೆ ಹಾಕಿ ಅನಂತರ ಕರುಬೇವು, ಈರುಳ್ಳಿ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಪಾತ್ರೆಯಲ್ಲಿ ಪುಡಿ ಮಾಡಿ ಇಟ್ಟಿರುವ ಬದನೆಕಾಯಿ ಗೊಜ್ಜಿಗೆ ಈ ಒಗ್ಗರಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುಟ್ಟಾಣಿಯಲ್ಲಿ ಪುಡಿ ಮಾಡಿದ ಮಸಾಲೆಗಳನ್ನು ಕೂಡ ಹಾಕಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸುವಾಸನೆಯುಕ್ತ ಬದನೆಕಾಯಿ ಗೊಜ್ಜು ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
