Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಸೋರೆಕಾಯಿ ಮಜ್ಜಿಗೆ ಹುಳಿ ಮಾಡಿದ್ರೆ ತಟ್ಟೇಲಿ ಅನ್ನ ಉಳಿಯೋದಿಲ್ಲ..! ಮಾಡೋದು ಹೇಗೆ?
ಕೆಲವೊಂದು ತರಕಾರಿಗಳಲ್ಲಿ ಅಡಗಿರುವ ವಿಶೇಷವಾದ ಹಾಗೆ ವಿಭಿನ್ನ ಆರೋಗ್ಯಕಾರಿ ಅಂಶಗಳ ಕುರಿತು ನಮಗೆ ತಿಳಿದಿರುವುದಿಲ್ಲ. ಅದರಲ್ಲೂ ನಾವು ದೇಹಕ್ಕೆ ತಂಪು ನೀಡುವಂತಹ ಹಲವು ತರಕಾರಿಗಳಿಂದ ಸಾರು, ರಸಂ ಮಾಡಿ ಸವಿದಿರುವುದು ನೋಡಿದ್ದೇವೆ. ಅದರಲ್ಲೂ ನಾವಿಂದು ಸೋರೆಕಾಯಿಯ ಮಜ್ಜಿಗೆ ಹುಳಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಈ ಸೋರೆಕಾಯಿ ನಮ್ಮ ದೇಹಕ್ಕೆ ಬಹಳ ಉತ್ತಮ. ಸೋರೆಕಾಯಿ ದೇಹದ ಉಷ್ಣಾಂಶ ಹತೋಟಿಲ್ಲಿಡಲಿದೆ. ವಾತ, ಪಿತ್ತವನ್ನು ಸಮತೋಲನದಲ್ಲಿಡಲಿದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ ಲಿವರ್‌ನ ಆರೋಗ್ಯ ಉತ್ತಮವಾಗಿರುತ್ತದೆ. ಚಿಕ್ಕ ಗ್ಲಾಸ್‌ನಲ್ಲಿ 2 ಸ್ಪೂನ್ ರಸ ಕುಡಿದರೆ ಸಾಕಾಗುತ್ತದೆ.

ತಾಜಾ ಸೋರೆಕಾಯಿ ಜ್ಯೂಸ್ ಸೇರಿ ಈಗ ಸೋರೆಕಾಯಿಯ ಹಲವು ಖಾದ್ಯಗಳನ್ನು ಕೂಡ ಮಾಡಿ ಸವಿಯಬಹುದಾಗಿದೆ. ಹಾಗೆ ನಾವಿಂದು ಈ ಸೋರೆಕಾಯಿಯ ಮಜ್ಜಿಗೆ ಸಾರು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ನೋಡೋಣ. ಈ ಸೋರೆಕಾಯಿ ನಿಮ್ಮ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ಇನ್ನು ಈ ಆರೋಗ್ಯಕರ ಸೋರೆಕಾಯಿ ಮಜ್ಜಿಗೆ ಸಾರು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೋರೆಕಾಯಿ ಮಜ್ಜಿಗೆ ಸಾರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸೋರೆಕಾಯಿ
- ಗಟ್ಟಿ ಮಜ್ಜಿಗೆ
- ಸಾಸಿವೆ
- ಜೀರಿಗೆ
- ಕರಿಬೇವು
- ತೆಂಗಿನಕಾಯಿ
- ಶುಂಠಿ
- ಕಡಲೆ ಬೇಳೆ
- ಕೊತ್ತಂಬರಿ ಕಾಳು
- ಒಣ ಮೆಣಸು
- ಹಸಿ ಮೆಣಸು
- ಅರಶಿಣ
- ಉಪ್ಪು
- ಎಣ್ಣೆ ಅಥವಾ ತುಪ್ಪ
ಸೋರೆಕಾಯಿ ಮಜ್ಜಿಗೆ ಸಾರು ಮಾಡುವುದು ಹೇಗೆ?
ಮೊದಲು ಸೋರೆಕಾಯಿಯನ್ನು ಚೆನ್ನಾಗಿ ಕತ್ತರಿಸಿಕೊಳ್ಳಿ. ಅದರ ಬೀಜಗಳ ತೆಗೆದು ಸಾಂಬಾರ್‌ಗೆ ಹೆಚ್ಚಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಬರುವಾಗ ಕತ್ತರಿಸಿಕೊಂಡಿರುವ ಈ ಸೋರೆಕಾಯಿಯನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಅರಶಿಣ ಪುಡಿ, ಉಪ್ಪು ಹಾಕಿ ಬೇಯಿಸಿಕೊಳ್ಳಿ. 10 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ನಂತರ ಒಲೆ ಆಫ್ ಮಾಡಿ ಇಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ, ಕೊತ್ತಂಬರಿ ಕಾಳು, ಜೀರಿಗೆ, ಶುಂಠಿ, ನೆನೆಸಿಟ್ಟಿದ್ದ ಕೆಡಲಬೇಳೆ 2 ಸ್ಪೂನ್ ಹಾಕಿ, ಹಾಗೆ ಹಸಿ ಮೆಣಸು, ಅರಶಿಣ ಪುಡಿ, ಕೊತ್ತಂಬರಿ ಸೊಪ್ಪು, ನೀರು ಹಾಕಿ ಚಟ್ನಿಯಂತೆ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದ ಈ ಮಸಾಲೆ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಇಟ್ಟಿರುವ ಸೋರೆಕಾಯಿಯನ್ನು ಮತ್ತೆ ಒಲೆ ಹೊತ್ತಿಸಿ ಇದಕ್ಕೆ ರುಬ್ಬಿರುವ ಮಸಾಲೆಗಳನ್ನು ಹಾಕಿಕೊಳ್ಳಬೇಕು. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿ ಬೇಯಲು ಬಿಡಿ. ಈಗ ಉಪ್ಪು ರುಚಿ ನೋಡಿ ಹಾಕಿಕೊಂಡು 5 ನಿಮಿಷ ಬೇಯಿಸಿಕೊಳ್ಳಿ. ಕೊನೆಯದಾಗಿ ಇದಕ್ಕೆ ಅರ್ಧ ಕಪ್ ಗಟ್ಟಿ ಮಜ್ಜಿಗೆ ಹಾಕಿ ಸಣ್ಣ ಉರಿಯಲ್ಲಿ 1 ನಿಮಿಷ ಬಿಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿಕೊಂಡು ಬಿಸಿ ಮಾಡಿ ಈ ಸೋರೆಕಾಯಿಯ ಸಾರಿಗೆ ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸೋರೆಕಾಯಿ ಮಜ್ಜಿಗೆ ಸಾರು ರೆಡಿಯಾಗುತ್ತದೆ. ಊಟದ ಜೊತೆಗೆ ಘಮ ಘಮ ಎನ್ನುವಂತಹ ರುಚಿಕರ ಸಾರು ರೆಡಿಯಾಗುತ್ತದೆ. ನೀವು ಮನೆಯಲ್ಲಿ ಈ ಸಾರು ಒಮ್ಮೆ ಮಾಡಿ ನೋಡಿ.



Click it and Unblock the Notifications
