Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಂಜೆ ಸಮಯದಲ್ಲಿ ತಂಪಾಗಿಸುವ ಸೋರೆಕಾಯಿ ಪಕೋಡ: ಮಾಡುವ ಸುಲಭದ ವಿಧಾನವಿದು!
ನೀವು ಸಂಜೆ ಸಮಯದಲ್ಲಿ ಯಾವುದಾದರು ಸ್ನ್ಯಾಕ್ಸ್ ಸವಿಯು ಅಭ್ಯಾಸ ನೀವು ಇಟ್ಟುಕೊಂಡಿರಬಹುದು. ಅದ್ರಲ್ಲೂ ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿ, ಬಜ್ಜಿ, ಬೋಂಡಾ, ಪಕೋಡ ಸವಿಯೋದು ಕಾಮನ್. ಎಲ್ಲರ ಬಾಯಲ್ಲಿ ನೀರು ತರಿಸುವ ಈ ಸ್ನ್ಯಾಕ್ಸ್ ಅನ್ನು ಮನೆಯಲ್ಲಿಯೂ ಮಾಡಿ ಸವಿಯುತ್ತಾರೆ. ಹಾಗೆ ಬೋಂಡಾ, ಬಜ್ಜಿ ಮಾಡಿ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಸಹ ಮನೆಯಲ್ಲಿ ಯಾವುದಾದರು ಸ್ನ್ಯಾಕ್ಸ್ ಮಾಡುವ ಆಲೋಚನೆಯಲ್ಲಿದ್ದರೆ ನಾವಿಂದು ಹೊಸ ರೀತಿಯ
ನಾವಿಂದು ಸೋರೆಕಾಯಿಯಿಂದ ಮಾಡುವ ಪಕೋಡ ಕುರಿತಾಗಿ ತಿಳಿದುಕೊಳ್ಳೋಣ. ಸೋರೆಕಾಯಿಯಿಂದ ಹಲವು ರೀತಿಯ ಸ್ನ್ಯಾಕ್ಸ್, ರೆಸಿಪಿಗಳ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲೇ ಮಾಡುವ ರುಚಿ ರುಚಿಯಾದ ಸೋರೆಕಾಯಿ ಪಕೋಡ ಮಾಡಿ ಸವಿಯುವ ಕುರಿತು ತಿಳಿಯೋಣ. ಈ ಸೋರೆಕಾಯಿ ಪಕೋಡ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಸೋರೆಕಾಯಿ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮ. ಹೀಗಾಗಿ ಸೋರೆಕಾಯಿ ಬಳಸಿ ಮಾಡುವಂತಹ ಈ ರುಚಿ ರುಚಿಯ ಸ್ನ್ಯಾಕ್ಸ್ ಅನ್ನು ನಾವಿಂದು ಮನೆಯಲ್ಲಿ ಮಾಡುವ ಕುರಿತಾಗಿ ತಿಳಿಯೋಣ. ಸೋರೆಕಾಯಿ ಪಕೋಡ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೋರೆಕಾಯಿ ಪಕೋಡ ಮಾಡಲು ಬೇಕಾಗುವ ವಸ್ತುಗಳು
ಸೋರೆಕಾಯಿ
ಜೀರಿಗೆ
ಇಂಗು
ಬೆಳ್ಳುಳ್ಳಿ
ಈರುಳ್ಳಿ
ಚಿರೋಟಿ ರವೆ ಅಥವಾ ಅಕ್ಕಿ ಹಿಟ್ಟು
ಖಾರದ ಪುಡಿ
ಕೊತ್ತಂಬರಿ ಸೊಪ್ಪು
ಕರಿಬೇವು
ಕಡಲೆ ಹಿಟ್ಟು
ಉಪ್ಪು
ಎಣ್ಣೆ
ಸೋರೆಕಾಯಿ ಪಕೋಡ ಮಾಡುವ ವಿಧಾನವೇನು?
ಮೊದಲಿಗೆ ಸೋರೆಕಾಯಿಯನ್ನು ತುರಿದುಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಈ ಬೌಲ್ಗೆ 4 ಈರುಳ್ಳಿ ಕತ್ತರಿಸಿಕೊಂಡು ಹಾಕಿಕೊಳ್ಳಿ. ಹಾಗೆ ಇದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಕೊತ್ತಂಬರಿ, ಕರಿಬೇವು, ಇಂಗು, ಜೀರಿಗೆ, ಜಜ್ಜಿರುವ ಬೆಳ್ಳುಳ್ಳಿ, 2 ಸ್ಪೂನ್ ಚಿರೋಟಿ ರವೆ ಅಥವಾ ಅಕ್ಕಿ ಹಿಟ್ಟು, ಖಾರದ ಪುಡಿ, ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ಈ ಎಲ್ಲಾ ವಸ್ತುಗಳ ಹಾಕಿ ಒಮ್ಮೆ ಡ್ರೈ ಮಿಕ್ಸ್ ಮಾಡಿ. ಸೋರೆಕಾಯಿಯಲ್ಲಿ ನೀರಿನ ಅಂಶ ಇರಲಿದೆ. ಈಗ ಕಡಲೆ ಹಿಟ್ಟು ಸಹ ಹಾಕಿಕೊಳ್ಳಿ. ಹಾಕದೆ ಮಿಕ್ಸ್ ಮಾಡಿ. ಒಮ್ಮೆ ಮಿಕ್ಸ್ ಮಾಡಿದ ಬಳಿಕ ಸ್ವಲ್ಪ ಸ್ವಲ್ಪ ನೀರುಹಾಕಬೇಕು. ಈ ಹಿಟ್ಟು ನಿಧಾನವಾಗಿ ಕಲಸಿಕೊಳ್ಳುತ್ತಾ ಇರಬೇಕು. ಹಾಗೆ ಹಿಟ್ಟು ಬಹಳ ತೆಳುವಾಗಿ ಮಾಡಿಕೊಳ್ಳಬೇಡಿ, ಹಾಗೆ ಗಟ್ಟಿಯಾಗಿಯೂ ಮಾಡಬೇಡಿ.
ಹಿಟ್ಟು ರೆಡಿಯಾದ ಬಳಿಕ ಹಾಗೆ ಇಟ್ಟು ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದಾಗ ಇದಕ್ಕೆ ಸ್ವಲ್ಪ ಸ್ವಲ್ಪ ಹಿಟ್ಟನ್ನು ಹಾಕಿಕೊಂಡು ಕರಿದುಕೊಳ್ಳಬೇಕು. ಸಾಮಾನ್ಯ ಪಕೋಡದಂತೆಯೇ ಇದನ್ನು ಕೂಡ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಸೋರೆಕಾಯಿ ಪಕೋಡ ಸಿದ್ದವಾಗುತ್ತೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ.



Click it and Unblock the Notifications
