Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಿಮಿಷಗಳಲ್ಲಿ ಊಟಕ್ಕೆ ಬಾಂಬೆ ಸಾಗು ರೆಡಿ ಮಾಡಿ..! ಮಾಡೋದು ಬಹಳ ಸುಲಭ!
ನೀವು ಊಟಕ್ಕೆ ಸಾರು, ಸಾಂಬಾರ್ ಮಾಡುವುದು ಸಾಮಾನ್ಯ, ಹಾಗೆ ಸಾಗು ಕೂಡ ಮಾಡುತ್ತೀರಿ. ತಿಂಡಿಗೂ ಕೂಡ ಸಾಗು ಮಾಡುವುದು ಇದೆ. ಚಪಾತಿ, ಪೂರಿ ಸೇರಿ ಕೆಲವೊಂದು ತಿಂಡಿಯ ಜೊತೆಗೆ ಸಾಗು ಮಾಡಲೇಬೇಕಿದೆ. ಹಾಗೆ ಊಟಕ್ಕೆ ಕೂಡ ಈ ಸಾಗು ಇದ್ದರೇನೆ ರುಚಿ ದುಪ್ಪಟ್ಟಾಗುತ್ತೆ. ನಾವು ಹೋಟೆಲ್‌ನಲ್ಲಿ ರುಚಿ ರುಚಿಯ ಸಾಗು ಸವಿದಿರುತ್ತೇವೆ. ಅದೇ ರುಚಿಯಲ್ಲಿ ಮನೆಯಲ್ಲೂ ಮಾಡಲು ಮುಂದಾಗುತ್ತೇವೆ.
ಊಟದ ಜೊತೆಗೆ ಕೆಲವರು ಸಾಗು ಸವಿಯಲು ಇಷ್ಟಪಡುತ್ತಾರೆ, ಹಾಗೆ ಇಡ್ಲಿ, ದೋಸೆಗೂ ಸಾಗು ಇದ್ದರೆ ರುಚಿ ಹೆಚ್ಚಾಗುತ್ತದೆ. ಆದ್ರೆ ಮನೆಯಲ್ಲಿ ಸುಲಭವಾಗಿ ಮಾಡೋದು ಹೇಗೆ ಎಂಬುದು ನಿಮಗೆ ಗೊತ್ತಾ? ಅದರಲ್ಲೂ ಬಾಂಬೆ ಸಾಗು ಎಂದು ಕರೆಯುವ ಹೋಟೆಲ್ ರುಚಿಯ ಸಾಗು ಎಂದಾದ್ರು ಮಾಡಿ ಸವಿದಿದ್ದೀರಾ?

ರುಚಿಕರ ಸಾಗುಗಳಲ್ಲಿಯೂ ಹಲವು ಬಗೆ ಇದೆ. ಅದರಲ್ಲಿ ಒಂದು ಈ ಬಾಂಬೆ ಸಾಗು. ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ರುಚಿ ರುಚಿಯಾಗಿ ಬಾಂಬೆ ಸಾಗು ಮಾಡಬಹುದು. ಹಾಗಾಧ್ರೆ ನಾವಿಂದು ಈ ಬಾಂಬೆ ಸಾಗು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಬಾಂಬೆ ಸಾಗು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಬಾಂಬೆ ಸಾಕು ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾಂಬೆ ಸಾಗು ಮಾಡಲು ಬೇಕಾಗುವ ವಸ್ತುಗಳು ಇವು
- ಈರುಳ್ಳಿ
- ಟೊಮೆಟೋ
- ಉದ್ದಿನ ಬೇಳೆ
- ಕಡಲೆ ಬೇಳೆ
- ಸಾಸಿವೆ
- ಜೀರಿಗೆ
- ಇಂಗು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕರಿಬೇವು
- ಅರಶಿಣ ಪುಡಿ
- ಕಡಲೆ ಹಿಟ್ಟು - 1 ಕಪ್
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಬಾಂಬೆ ಸಾಗು ಮಾಡುವುದು ಹೇಗೆ?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣ ಹಾಕಿಕೊಂಡು ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಇಂಗು ಹಾಕಿಕೊಳ್ಳಿ. ಹಾಗೆ ಇದಕ್ಕೆ ಇರುಳ್ಳಿ, ಹಸಿ ಮೆಣಸು ಕೂಡ ಕಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಫೇಸ್ಟ್ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಕರಿಬೇವು, ಅರಶಿಣ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಟೊಮೆಟೋ ಹಾಕಿಕೊಂಡು ಬೇಯಲು ಬಿಟ್ಟು ಮಿಕ್ಸ್ ಮಾಡುತ್ತಾ ಇರಿ. ಟೊಮೆಟೋ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. 2 ನಿಮಿಷ ಬೇಯಲು ಬಿಡಬೇಕು.
ಈಗ ಒಂದು ಬೌಲ್‌ಗೆ 1 ಕಪ್ ಕಡಲೆ ಹಿಟ್ಟು ಹಾಕಿಕೊಳ್ಳಿ. ಅದೇ ಕಪ್‌ನಲ್ಲಿ ಮೂರು ಕಪ್ ನೀರು ತೆಗೆದುಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಗಂಟು ಇಲ್ಲದಂತೆ ಮಿಶ್ರಣ ಮಾಡಿಟ್ಟುಕೊಳ್ಳಿ. ಈಗ ಒಲೆ ಮೇಲಿನ ಬಾಣಲೆಯಲ್ಲಿ ಎಲ್ಲಾ ವಸ್ತುಗಳು ಬೆಂದ ಬಳಿಕ ಅದಕ್ಕೆ ಈ ಮಿಶ್ರಣ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಮುಚ್ಚಳ ಮುಚ್ಚಿಕೊಂಡು 5 ನಿಮಿಷ ಕುದಿಬರಲು ಬಿಡಿ. ಆಗಾಗ ತಿರಿಗಿಸುತ್ತಾ ಇರಿ. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಒಲೆ ಆಫ್ ಮಾಡಿಕೊಂಡು ಕೆಳಗೆ ಇಳಿಸಿಕೊಳ್ಳಿ. ಇಷ್ಟಾದರೆ ಬಾಂಬೆ ಸಾಗು ರೆಡಿಯಾಗುತ್ತದೆ. ಇದರ ರುಚಿಯಲ್ಲಿ ಯಾವ ತಿಂಡಿಯನ್ನಾದರು ಕೂಡ ನೀವು ಸವಿಯಬಹುದು. ಒಮ್ಮೆ ಮನೆಯಲ್ಲಿ ಈ ವಸ್ತುಗಳ ಬಳಸಿಕೊಂಡು ಬಾಂಬೆ ಸಾಗು ಮಾಡಿ ನೋಡಿ.



Click it and Unblock the Notifications
