Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮನೆಯಲ್ಲೇ ಬಿಸಿ ಬೇಳೆ ಬಾತ್ ಪುಡಿ ಮಾಡಿಕೊಳ್ಳೋದು ಹೇಗೆ? ಇಲ್ಲಿದೆ ಸಿಂಪಲ್ ವಿಧಾನ
ಬೆಳಗ್ಗೆ ಎದ್ದಾಗ ನಿಮಗೆ ಮೊದಲು ಟೀ-ಕಾಫಿ ಮಾಡುವ ಅಭ್ಯಾಸ ವಿರುತ್ತೆ. ಆದ್ರೆ ಇದಾದ ಬಳಿಕ ಇಂದು ತಿಂಡಿಗೆ ಯಾವ ಖಾದ್ಯ ಮಾಡುವುದು ಅನ್ನೋದೆ ನಿಮ್ಮ ಯೋಚನೆ ಆಗಿರುತ್ತೆ. ನಿತ್ಯ ಒಂದೇ ರೀತಿ ತಿಂಡಿ ಮಾಡಿದರೆ ನಿಮಗೂ ತಿಂದವರಿಗೂ ಅದ ಬೇಸರ ತರಿಸುತ್ತೆ.
ಹೀಗಾಗಿ ನೀವು ಹೊಸದೇನಾದರು ಮಾಡಲು ಮುಂದಾಗುತ್ತೀರಿ. ನೀವು ಬೆಳಗ್ಗೆಯ ತಿಂಡಿಗೆ ಬಿಸಿಬೇಳೆ ಬಾತ್ ಮಾಡಲು ಮುಂದಾದರೆ ಅದಕ್ಕೆ ಮೊದಲೇ ಮಸಾಲೆ ಪುಡಿಯನ್ನು ರೆಡಿ ಮಾಡಿಕೊಳ್ಳಿ. ಬಿಸಿ ಬೇಳೆ ಬಾತ್ ಮಾಡಲು ಮಸಾಲೆ ಪುಡಿಗಳ ಅಗತ್ಯವಿರುತ್ತದೆ.

ಹೀಗಾಗಿ ನಾವು ಬಿಸಿ ಬೇಳೆ ಬಾತ್ ಮಾಡಲು ಮೊದಲು ಅದರ ಮಸಾಲೆ ಪುಡಿ ರೆಡಿ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ. ಬಿಸಿ ಬೇಳೆ ಬಾತ್ ಪುಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಬಳಸುವುದು ಹೇಗೆ ಎಂಬ ಕುರಿತು ಮಾಹಿತಿ ತಿಳಿದುಕೊಳ್ಳೋಣ.
ಬಿಸಿ ಬೇಳೆ ಬಾತ್ ಪುಡಿ ಮಾಡಲು ಬೇಕಾಗುವ ಪದಾರ್ಥಗಳು
- ಒಣ ಮೆಣಸು - 100 ಗ್ರಾಮ್
- ಕೊತ್ತಂಬರಿ ಕಾಳು - ಅರ್ಧ ಕಪ್ (50 ಗ್ರಾಮ್)
- ಗಸಗಸೆ - 1 Tbsp
- ಜೀರಿಗೆ
- ಮೆಂತ್ಯ -1 Tbsp
- ಇಂಗು
- ಕಡಲೆ ಬೇಳೆ- 2 Tbsp
- ಉದ್ದಿನ ಬೇಳೆ- 1 Tbsp
- ಚಕ್ಕೆ
- ಲವಂಗ
- ಏಲಕ್ಕಿ
- ಕರಿ ಮೆಣಸು
- ಬಿಳಿ ಎಳ್ಳು
- ಕಲ್ಲು ಉಪ್ಪು
- ಕರಿ ಬೇವು
ಬಿಸಿ ಬೇಳೆ ಬಾತ್ ಪುಡಿ ಮಾಡುವ ವಿಧಾನ
ಮೊದಲು ಪಾತ್ರೆಯನ್ನು ಒಲೆ ಮೇಲಿಟ್ಟು ಅದಕ್ಕೆ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆ ಹಾಕಿ 2ರಿಂದ 3 ನಿಮಿಷಗಳ ಕಾಲ ಹುರಿದುಕೊಳ್ಳಿ. ಇದು ಬ್ರೌನ್ ಕಲರ್ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಎರಡನ್ನು ತೆಗೆದಿಟ್ಟುಕೊಳ್ಳಿ. ಮತ್ತೆ ಅದೇ ಪಾತ್ರೆಗೆ ಮೆಂತ್ಯ, ಜೀರಿಗೆ, ಲವಂಗ, ಎಳ್ಳು, ಚಕ್ಕೆ, ಕರಿಮೆಣಸು ಎಲ್ಲವನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
2 ನಿಮಿಷ ಫ್ರೈ ಆದ ಮೇಲೆ ಎಲ್ಲವನ್ನು ತೆಗೆದಿಟ್ಟುಕೊಳ್ಳಿ. ಮತ್ತೆ ಇದೇ ಪಾತ್ರೆಗೆ ಒಣ ಮೆಣಸು ಹಾಕಿ ಪ್ರೈ ಮಾಡಿ. ಫ್ರೈ ಮಾಡುವಾಗ 1 ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಕರಿಬೇವು ಹಾಕಿ ಹುರಿದುಕೊಳ್ಳಿ. ಸುಮಾರು 2 ನಿಮಿಷ ಫ್ರೈ ಮಾಡಿದರೆ ಸಾಕು.
ಇದನ್ನು ಹುರಿದ ಬಳಿಕ ತೆಗೆದಿಟ್ಟು ತಣ್ಣಗಾಗಲು ಇಡಿ. ಎಲ್ಲ ವಸ್ತುಗಳು ತಣ್ಣಗಾದ ಬಳಿಕ ಅದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ಈ ವೇಳೆ ನೀರು ಬಳಸದೆ ನುಣುಪಾಗಿ ಪುಡಿಯಾಗುವಂತೆ ರುಬ್ಬಿಕೊಳ್ಳಿ. ಈ ರೀತಿ ರುಬ್ಬುವಾಗಲೇ ನೀವು ಕಲ್ಲು ಉಪ್ಪು ಮಿಕ್ಸ್ ಮಾಡಿಕೊಳ್ಳಿ, ಕಲ್ಲುಪ್ಪು ಬಳಸುವುದರಿಂದ ಈ ಪುಡಿ ಹಾಳಾಗದಂತೆ ತುಂಬ ದಿನಗಳ ಕಾಲ ಇಡಬಹುದು. ಇಷ್ಟಾದರೆ ನಿಮ್ಮ ಮುಂದೆ ಬಿಸಿ ಬೇಳೆ ಬಾತ್ ಮಾಡಲು ಪುಡಿ ರೆಡಿಯಾಗುತ್ತದೆ.
ಬಿಸಿ ಬೇಳೆ ಬಾತ್ ಮಾಡಲು ಸಮಯ ಇಲ್ಲದೇ ಇದ್ದಾಗ ಈ ಪುಡಿಯನ್ನು ಬಳಸಿಕೊಂಡು ತಕ್ಷಣವೇ ಬಾತ್ ಮಾಡಬಹುದು. ಇದಕ್ಕೆ ಪೂರ್ವ ತಯಾರಿಯ ಅಗತ್ಯವಿರುವುದಿಲ್ಲ. ರೆಡಿಯಾಗಿರುವ ಮಸಾಲೆಯನ್ನು ಹಾಕಿ ತಕ್ಷಣವೇ ಬಿಸಿ ಬೇಳೆ ಬಾತ್ ಮಾಡಬಹುದು, ಇದರಿಂದ ಸಮಯ ಉಳಿತಾಯದ ಜೊತೆ ನಿಮ್ಮ ಶ್ರಮವೂ ಸಹ ಉಳಿತಾಯವಾಗಲಿದೆ.
ಈ ಪುಡಿಯನ್ನು ನೀರು ಸ್ಟೀಲ್ ಅಥವ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳ ಕಾಲ ಬಳಸಬಹುದು. ಬೇಗ ಹಾಳಾಗುವುದಿಲ್ಲ.



Click it and Unblock the Notifications
