Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಹೊಸ ರುಚಿಯ ಬಿಸಿ ಬೇಳೆ ಬಾತ್ ಕುಕ್ಕರ್ನಲ್ಲಿ ಮಾಡಿ ನೋಡಿ..! ಕೆಲವೇ ನಿಮಿಷದಲ್ಲಿ ರೆಡಿ!
ಬೆಳಗ್ಗೆಯ ತಿಂಡಿಗೆ ಎಷ್ಟೆಲ್ಲಾ ಖಾದ್ಯ ಮಾಡಿ ಸವಿದಿರುತ್ತೀರಿ.. ಆದ್ರೆ ನಿತ್ಯ ಏನು ಸವಿಯಬೇಕು ಎನ್ನುವುದು ಯಾವಾಗಲು ಒಂದು ಪ್ರಶ್ನೆಯಾಗಿರುತ್ತೆ. ತಿಂಡಿಗೆ ಏನು ಮಾಡಬೇಕು? ಯಾವ ತಿಂಡಿ ಹೆಚ್ಚು ರುಚಿ ನೀಡುತ್ತೆ. ಯಾವ ತಿಂಡಿ ಕಡಿಮೆ ಸಮಯದಲ್ಲಿ ಮಾಡಬಹುದು ಎಂಬುದೇ ಪ್ರಶ್ನೆ.
ಅದರಲ್ಲೂ ನಿತ್ಯ ಒಂದೇ ರೀತಿ ತಿಂಡಿ ಮಾಡಿದ್ರೆ ಎಲ್ಲರಿಗೂ ಬೇಸರವಾಗುತ್ತೆ. ಹಾಗಾದ್ರೆ ಬೆಳಗ್ಗೆ ತಿಂಡಿಗೆ ವಿಶಿಷ್ಟ ರುಚಿಯ ತಿಂಡಿ ಮಾಡಿ ನೋಡಿ. ಬೆಳಗ್ಗೆ ತಿಂಡಿಗೆ ವಿಭಿನ್ನ ರೀತಿಯ ಬಿಸಿ ಬೇಳೆ ಬಾತ್ ಮಾಡಿ ಸವಿಯಿರಿ. ಬಿಸಿ ಬೇಳೆ ಬಾತ್ ಮಾಡೋದು ಸುಲಭ ಹಾಗೆ ಇದಕ್ಕೆ ತರಕಾರಿಗಳ ಹಾಕಿ ಮಾಡೋದ್ರಿಂದ ಅದರ ರುಚಿಯಂತು ಫಸ್ಟ್ ಕ್ಲಾಸ್ ಆಗಿರುತ್ತೆ.

ಹಾಗಾದ್ರೆ ಬೆಳಗ್ಗೆ ತಿಂಡಿಗೆ ವಿಭಿನ್ನ ರುಚಿಯ ಬಿಸಿ ಬೇಳೆ ಬಾತ್ ಮಾಡುವುದು ಹೇಗೆ?, ಬಿಸಿ ಬೇಳೆ ಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಯಾವೆಲ್ಲಾ ತರಕಾರಿ ಹಾಕಬೇಕು? ಎಂಬುದನ್ನು ನಾವಿಂದು ನೋಡೋಣ.
ಬಿಸಿ ಬೇಳೆ ಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 200 ಗ್ರಾಂ
- ತೊಗರಿ ಬೇಳೆ - 100 ಗ್ರಾಂ
- ಸಾಸಿವೆ - 1/4 ಟೀಸ್ಪೂನ್
- ಜೀರಿಗೆ - 1/4 ಟೀಸ್ಪೂನ್
- ನೆಲ ಕಡಲೆ - 2 ಟೀಸ್ಪೂನ್
- ಒಣ ಮೆಣಸಿನಕಾಯಿ-3
- ಕರಿಬೇವಿನ ಎಲೆಗಳು - 2 tbs
- ಈರುಳ್ಳಿ-2
- ಬಟಾಣಿ - 1/2 ಕಪ್
- ಟೊಮೆಟೋ- 2
- ಹುಣಸೆಹಣ್ಣು
- ಬೀನ್ಸ್
- ಕ್ಯಾರೆಟ್-1
- ನವಲು ಕೋಸು
- ಕ್ಯಾಪ್ಸಿಕಂ-1
- ಖಾರದ ಪುಡಿ - 1 ಟೀಸ್ಪೂನ್
- ಬಿಸಿ ಬೇಳೆ ಬಾತ್ ಪುಡಿ - 2 tbs
- ತುಪ್ಪ - 1 tbs
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಬಿಸಿ ಬೇಳೆ ಬಾತ್ ಮಾಡುವ ವಿಧಾನ
ಯಾವ ಗ್ಲಾಸ್ನಲ್ಲಿ ಅಕ್ಕಿ ತೆಗೆದುಕೊಂಡಿದ್ದೀರೋ ಅದೇ ಗ್ಲಾಸ್ನಲ್ಲಿ ಅರ್ಧ ಗ್ಲಾಸ್ ತೊಗರಿ ಬೇಳೆ ತೆಗೆದುಕೊಳ್ಳಬೇಕು. ಈಗ ಒಂದು ಕುಕ್ಕರ್ನಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೀಜ, ಮೆಣಸು, ಕರಿಬೇವು, ಈರುಳ್ಳಿ, ಹಸಿ ಬಟಾಣಿ, ಟೊಮೆಟೋ, ಹುಣಸೆ ಹುಳಿ ಎಲ್ಲವನ್ನು ಒಂದೊಂದಾಗಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಉತ್ತರ ಕರ್ನಾಟಕ ಶೈಲಿಯ ಹೆಸರು ಕಾಳಿನ ಪಲ್ಯ..! ಒಮ್ಮೆ ರುಚಿ ನೋಡಿ..!
1 ನಿಮಿಷದ ಬಳಿಕ ಒಂದೊಂದೇ ತರಕಾರಿ ಹಾಕಿಕೊಳ್ಳಿ. ಬೀನ್ಸ್, ಕ್ಯಾರೆಟ್, ನವಿಲು ಕೋಸು, ಕ್ಯಾಪ್ಸಿಕಂ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಖಾರದ ಪುಡಿ, ಬಿಸಿ ಬೇಳೆ ಬಾತ್ ಪೌಡರ್ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ. ಇದು ಗೊಜ್ಜಿನ ರೀತಿ ಬದಲಾಗುವವರೆಗೂ ಫ್ರೈ ಮಾಡಿ.
ಈಗ ಚೆನ್ನಾಗಿ ತೊಳೆದು ಇಟ್ಟಿರುವ ಅಕ್ಕಿ ಮತ್ತು ತೊಗರಿ ಬೇಳೆಯನ್ನು ಹಾಕಿಕೊಳ್ಳಿ. ಒಂದೂವರೆ ಲೋಟ ಅಕ್ಕಿ ಮತ್ತು ತೊಗರಿ ಬೇಳೆಗೆ ಅದೇ ಗ್ಲಾಸ್ನಲ್ಲಿ 4 ಲೋಟ ನೀರು ಹಾಕಿಕೊಳ್ಳಿ. ಚೆನ್ನಾಗಿ ತಿರುಗಿಸಿ ಕುಕ್ಕರ್ ಮುಚ್ಚಳ ಹಾಕಿಕೊಳ್ಳಿ.
ಉಳಿದ ಅನ್ನದಿಂದ ಮೃದುವಾದ ವಡೆ ಮಾಡಿ ನೋಡಿ..! 10 ನಿಮಿಷ ಸಾಕು..!
ಒಟ್ಟು 4 ಸೀಟಿ ಹೊಡೆದ ಬಳಿಕ ಎಲ್ಲಾ ಗ್ಯಾಸ್ ಹೊರಹೋದಾಗ ಮುಚ್ಚಳ ತೆಗೆಯಿರಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ಬಿಸಿ ಬೇಳೆ ಬಾತ್ ರೆಡಿಯಾಗಿರುತ್ತದೆ. ಈ ಬಿಸಿ ಬೇಳೆ ಬಾತ್ ಜೊತೆಗೆ ಖಾರ ಮಿಕ್ಸರ್ ಇದ್ದರೆ ಹಾಕಿಕೊಂಡು ಸವಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ.



Click it and Unblock the Notifications