Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
1 ಕಪ್ ಗೋಧಿ ಹಿಟ್ಟಲ್ಲಿ ಮಾಡಿ ರುಚಿ ರುಚಿ ಬಿಸ್ಕೆಟ್: ಮಕ್ಕಳ ಪಾಲಿನ ಇಷ್ಟದ ತಿಂಡಿ!
ನೀವು ಟೀ ಕಾಫಿಯೊಂದಿಗೆ ಬಿಸ್ಕೆಟ್ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಇಲ್ಲವೆ ಮನೆಗೆ ಯಾರಾದರು ಬಂದಾಗ ಅವರಿಗೆ ಟೀ , ಕಾಫಿ ನೀಡಿದಾಗಲು ಜೊತೆಗೆ ಬಿಸ್ಕೆಟ್ ನೀಡುವುದು ನೋಡಿದ್ದೇವೆ. ಹಾಗೆ ಬೇಕರಿಯಲ್ಲಿ ಅಂಗಡಿಯಲ್ಲಿ ವಿವಿಧ ರೀತಿಯ ಅದ್ರಲ್ಲೂ ಬಗೆ ಬಗೆಯ ಬಿಸ್ಕೆಟ್ಗಳು ಸಿಗುತ್ತವೆ. ಹಾಗೆ ಇದನ್ನು ನೀವು ಟೀ ಕಾಫಿಯ ಸಮಯದಲ್ಲಿ, ಸಂಜೆಯ ಸ್ನ್ಯಾಕ್ಸ್ ಜೊತೆಯಾಗಿಯೂ ಸವಿಯೋದು ನೋಡಿರುತ್ತೀರಿ.
ಹಾಗೆ ಮಕ್ಕಳಿಗೂ ಕೂಡ ಬಿಸ್ಕೆಟ್ಗಳು ಅಂದ್ರೆ ಬಹಳ ಇಷ್ಟವಾಗುತ್ತವೆ. ಆದ್ರೆ ಈ ಬಿಸ್ಕೆಟ್ಗಳನ್ನು ಮೈದಾ ಹಿಟ್ಟಿನಿಂದ ಮಾಡಲಾಗಿರುತ್ತದೆ. ಮೈದಾ ಆರೋಗ್ಯಕ್ಕೆ ಉತ್ತಮ ಅಂಶವಲ್ಲ. ಹಾಗೆ ಮಕ್ಕಳಿಗೆ ಇದು ಉತ್ತಮ ಆಗಿರುವುದಿಲ್ಲ. ಹೀಗಾಗಿ ಹಲವರು ಮೈದಾ ರಹಿತ ಬಿಸ್ಕೆಟ್ಗಳ ಸವಿಯೋಕೆ ಮುಂದಾಗೋದು ನೋಡಬಹುದು. ಆದ್ರೆ ಎಂದಾದ್ರು ನೀವು ಮನೆಯಲ್ಲೇ ಬಿಸ್ಕೆಟ್ ಮಾಡಿ ಸವಿದಿದ್ದೀರಾ?

ನಾವಿಂದು ಗೋಧಿ ಹಿಟ್ಟನ್ನು ಬಳಸಿಕೊಂಡು ಮನೆಯಲ್ಲೇ ಸುಲಭವಾಗಿ ಬಿಸ್ಕೆಟ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ವಿಶೇಷ ರುಚಿಯ ಹಾಗೆ ಬಹಳ ಸುಲಭವಾಗಿ ಮಾಡಿ ಮುಗಿಸಬಹುದಾದ ಈ ರುಚಿ ರುಚಿಯ ಬಿಸ್ಕೆಟ್ ಕುರಿತು ತಿಳಿಯೋಣ. ಕೇವಲ ಒಂದು ಕಪ್ ಹಿಟ್ಟು ಬಳಸಿಕೊಂಡು ಇದನ್ನು ಮಾಡಬಹುದು.
ಗೋಧಿ ಬಿಸ್ಕೆಟ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ಬಿಸ್ಕೆಟ್ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು
- ಒಣ ಕೊಬ್ಬರಿ ತುರಿ ಪುಡಿ
- ಬಿಳಿ ಎಳ್ಳು
- ಏಲಕ್ಕಿ ಪುಡಿ
- ಉಪ್ಪು
- ಎಣ್ಣೆ
- ತುಪ್ಪ
- ಸಕ್ಕರೆ
ಗೋಧಿ ಬಿಸ್ಕೆಟ್ ಮಾಡುವ ಸುಲಭವ ವಿಧಾನವಿದು
ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಕಪ್ ಸಕ್ಕರೆ ಹಾಕಿಕೊಂಡು ಬಳಿಕ ಇದಕ್ಕೆ ನೀರು ಹಾಕಿಕೊಂಡು ಕರಗಿಸಿಕೊಳ್ಳಬೇಕು. ಪಾಕ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನಂತರ ಈ ಸಕ್ಕರೆ ಪಾಕವನ್ನು ತೆಗೆದು ಬದಿಗಿಟ್ಟುಕೊಳ್ಳಿ. ಹಾಗೆ ಒಂದು ಪಾತ್ರೆಗೆ ಸಕ್ಕೆ ಹಾಕಿದ ಅಳತೆ ಕಪ್ನಲ್ಲಿ 4 ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ.
ಹಾಗೆ ಇದಕ್ಕೆ ಒಣ ಕೊಬ್ಬರಿ ತುರಿಯ ಪುಡಿಯನ್ನು ಹಾಕಿ. ಅರ್ಧ ಕಪ್ ಬಳಸಿಕೊಂಡರೆ ಸಾಕು. ಹಾಗೆ ಇದಕ್ಕೆ ಬಿಳಿ ಎಳ್ಳು, ಏಲಕ್ಕಿ ಪುಡಿ, ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿ. ಹಾಗೆ ಇದಕ್ಕೆ ಅರ್ಧ ಕಪ್ ತುಪ್ಪ ಹಾಕಿ ಮಿಶ್ರಣ ಮಾಡಬೇಕು. ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಬೇಕು. ಕೈಯಿಂದ ಒತ್ತಿದಾಗ ಗಟ್ಟಿಯಾಗಬೇಕು. ಈಗ ಈ ಮಿಶ್ರಣಕ್ಕೆ ಸಕ್ಕರೆ ಪಾಕ ಹಾಕಬೇಕು.
ಸ್ವಲ್ಪ ಸ್ವಲ್ಪ ಪಾಕ ಹಾಕುತ್ತಾ ಮಿಶ್ರಣ ಮಾಡಬೇಕು. ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಈ ಹಿಟ್ಟನ್ನು ಹದ ಮಾಡಿಕೊಳ್ಳಬೇಕು. ಹಿಟ್ಟು ಪದರ ಪದರವಾಗಿ ಬರಬೇಕು. ಈಗ ಹಿಟ್ಟನ್ನು ದಪ್ಪವಾಗಿ ಮೊದಲು ಚಪಾತಿ ಲಟ್ಟಿಸುವಂತೆ ಲಟ್ಟಿಸಿಕೊಳ್ಳಬೇಕು. ರೊಟ್ಟಿಯಂತೆ ಲಟ್ಟಿಸಿಕೊಳ್ಳಿ, ಆದ್ರೆ ಸ್ವಲ್ಪ ದಪ್ಪವಾಗಿ ಇರಲಿ. ಈಗ ಯಾವುದಾದರು ಬಾಟಲಿಯ ಮುಚ್ಚಳ ಬಳಸಿ ಬಿಸ್ಕೆಟ್ ಕತ್ತರಿಸಿಕೊಳ್ಳಿ.
ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಒಂದೇ ರೀತಿ ಕತ್ತರಿಸಿಕೊಂಡ ಬಳಿಕ. ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಬಿಸಿಯಾಗಲು ಬಿಡಿ. ಅನಂತರ ಬಿಸ್ಕೆಟ್ಗಳನ್ನು ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ ಕರಿದುಕೊಳ್ಳಬೇಕು. ಎರಡೂ ಭಾಗ ಚೆನ್ನಾಗಿ ಬೇಯಬೇಕು. ಬ್ರೌನ್ ಕಲರ್ಗೆ ಬರುವವರೆಗೂ ಕರಿದುಕೊಳ್ಳಿ. ಇಷ್ಟಾದರೆ ನೀವು ಸವಿಯಲು ಮನೆಯಲ್ಲೇ ಮಾಡಿದ ಬಿಸ್ಕೆಟ್ ಸಿದ್ದವಾಗುತ್ತೆ.



Click it and Unblock the Notifications