Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
5 ನಿಮಿಷದಲ್ಲಿ ರೆಡಿಮಾಡಿ ಈ ಬಿಸ್ಕೇಟ್ ಬೋಂಡಾ..! ಸಿಂಪಲ್ ರೆಸಿಪಿ
ನೀವು ಮನೆಯಲ್ಲಿ ಫ್ರೀ ಟೈಮ್ ಸಿಕ್ಕಾಗ ಏನು ಮಾಡುತ್ತೀರಿ? ಮೊಬೈಲ್ ಬಳಸಬಹುದು ಇಲ್ಲವೆ ಸಣ್ಣಪುಟ್ಟ ಹೊಸ ಹೊಸ ಅಡುಗೆ ಪ್ರಯೋಗಕ್ಕೆ ಮುಂದಾಗಬಹುದು. ನಾವಿಂದು ಈ ರೀತಿ ಫ್ರೀ ಟೈಮ್‌ನಲ್ಲಿ ಮಾಡಬಹುದುದಾದ ರೆಸಿಪಿ ಬಗ್ಗೆ ತಿಳಿದುಕೊಳ್ಳೋಣ.
ಫ್ರೀ ಟೈಮ್ ಅನ್ನೋದಕ್ಕಿಂತಲು ಕಾಫಿ-ಟೀ ಜೊತೆ ಸವಿಯಲು ನೀವು ಹೊಸದೇನಾದರು ತಿಂಡಿ ಮಾಡುವ ಆಲೋಚನೆಯಲ್ಲಿದ್ದರೆ ಈ ಲೇಖನ ನಿಮಗೆ ಸಹಕಾರಿಯಾಗಬಹುದು.
ಟೀ-ಕಾಫಿ ಕುಡಿಯುವಾಗ ಬಹಳಷ್ಟು ಮಂದಿ ಯಾವುದಾದರು ತಿಂಡಿ ಇದ್ದರೆ ಉತ್ತಮ ಎಂದು ಭಾವಿಸುತ್ತಾರೆ. ಮತ್ತೆ ಕೆಲವರು ಟೀ ಜೊತೆ ಬಿಸ್ಕೇಟ್ ಸೇವಿಸುತ್ತಾರೆ. ಅವರು ಟೀ ಜೊತೆ ಏನಾದರು ಇದ್ದರಷ್ಟೇ ಟೀ ಕುಡಿಯಲು ಮುಂದಾಗುತ್ತಾರೆ.

ಯಾಕಂದ್ರೆ ಟೀ ಜೊತೆ ಏನಾದರು ತಿಂದರೆ ಅದರ ರುಚಿ ಡಬಲ್ ಆಗುತ್ತದೆ. ಇನ್ನು ಟೀ ಜೊತೆ ಮೆಣಸಿನಕಾಯಿ ಬಜ್ಜಿ, ಆಲೂ ಬಜ್ಜಿ, ಸಮೋಸಾ, ಈರುಳ್ಳಿ ಬಜೆ, ಬಿಸ್ಕೇಟ್, ರಸ್ಕ್, ಹೀಗೆ ಹತ್ತಾರು ರೀತಿಯ ಖಾದ್ಯ ಸವಿಯಬಹುದು. ಇದು ಟೀ ಸಮಯವನ್ನು ಮತ್ತಷ್ಟು ರಸಮಯವಾಗಿಸುತ್ತೆ.
ಟೀ-ಕಾಫಿ ಜೊತೆಗೆ ಸವಿಯಲೆಂದೇ ಕೆಲವರು ಕೆಲ ತಿಂಡಿಗಳ ಮಾಡುತ್ತಾರೆ. ಅದರಲ್ಲಿ ಈ ಬಿಸ್ಕೇಟ್‌ನಲ್ಲಿ ಮಾಡುವ ಬಜ್ಜಿ ಅಥವಾ ಬಿಸ್ಕೇಟ್ ಬೋಂಡಾ. ಈ ರೆಸಿಪಿ ಮಾಡೋದು ಸಿಕ್ಕಾಪಟ್ಟೆ ಸುಲಭ ಜೊತೆಗೆ ರುಚಿಯೂ ಹೆಚ್ಚು, ಟೀ ಕಾಫಿ ಜೊತೆಯಂತು ಇದಕ್ಕಿಂತ ಒಳ್ಳೆಯ ರುಚಿ ನೀಡುವ ಇನ್ನೊಂದು ಸ್ನ್ಯಾಕ್ಸ್ ಸಿಗಲಾರದು.
ಹಾಗಾದ್ರೆ ಮನೆಯಲ್ಲಿ ಬಿಸ್ಕೇಟ್ ಬಳಸಿ ಈ ಬೋಂಡಾ ಮಾಡೋದು ಹೇಗೆ? ಅದನ್ನು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬಿಸ್ಕೇಟ್ ಬೋಂಡಾ ಮಾಡಲು ಬೇಕಾಗುವ ವಸ್ತುಗಳು
- ಕಡಲೆ ಹಿಟ್ಟು - 1 ಕಪ್
- ಬಿಸ್ಕೇಟ್ - 1 ಪ್ಯಾಕ್
- ಓಂಕಾಳು- 1/2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 tbsp
- ಮೆಣಸಿನ ಪುಡಿ - 1 ಟೀಸ್ಪೂನ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಕರಿಬೇವಿನ ಎಲೆಗಳು - 1 tbs
- ಅಡುಗೆ ಸೋಡಾ - 1/4 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಬಿಸ್ಕೇಟ್ ಬೋಂಡಾ ಮಾಡುವ ವಿಧಾನ
ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ಸೋಡದ ಪುಡಿ, ಓಂಕಾಳು, ಕೊತ್ತಂಬರಿ ಸೊಪ್ಪು, ಅರಶಿನ ಪುಡಿ, ಖಾರದ ಪುಡಿ, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈ ವೇಳೆ ನೀರು ಹಾಕದೆ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿದ ಮೇಲೆ ಸ್ವಲ್ಪ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈ ಹಿಟ್ಟು ಸ್ವಲ್ಪ ದಪ್ಪವಾಗಿರಬೇಕು. ದೋಸೆ ಹಿಟ್ಟು ಇರುವಂತೆ ಈ ಹಿಟ್ಟನ್ನು ಸಹ ರೆಡಿ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟುಕೊಳ್ಳಿ. ಬಳಿಕ ಬಿಸ್ಕೇಟ್‌ಗಳಿಗೆ ಹಿಟ್ಟನ್ನು ಚೆನ್ನಾಗಿ ಎರಡೂ ಕಡೆಗಳಲ್ಲಿ ಹಚ್ಚಿಕೊಂಡು ಅದನ್ನು ಎಣ್ಣೆಯಲ್ಲಿ ಹಾಕಿ.
ಬಿಸ್ಕೇಟ್ ಎರಡೂ ಕಡೆ ಗೋಲ್ಡನ್ ಕಲರ್ ಬರುವವರೆಗೂ ಚೆನ್ನಾಗಿ ಕಾಯಿಸಿಕೊಳ್ಳಿ. ಎರಡು ನಿಮಿಷಗಳ ಕಾಲ ಕಾಯಿಸಿದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಬಿಸ್ಕೇಟ್ ಬೋಂಡಾ ರೆಡಿಯಾಗಿರುತ್ತೆ. ಇದನ್ನು ಟೀ-ಕಾಫಿ ಜೊತೆ ಸವಿಯಲು ನೀಡಿದರೆ ಬಹಳ ರುಚಿ ನೀಡುತ್ತದೆ.
ಗಮನಿಸಿ: ಈ ಬಿಸ್ಕೇಟ್ ಬೋಂಡಾ ಮಾಡಲು ನೀವು ಸಾಲ್ಟ್ ಬಿಸ್ಕೇಟ್ ತೆಗೆದುಕೊಳ್ಳಿ. ಸಿಹಿ ಬಿಸ್ಕೇಟ್‌ನಲ್ಲಿ ಮಾಡಬೇಡಿ. 50:50 ರೀತಿಯ ಬಿಸ್ಕೇಟ್‌ನಲ್ಲಿ ಈ ಬೋಂಡಾ ಮಾಡಿದರೆ ಚೆನ್ನಾಗಿ ಬರುತ್ತದೆ.



Click it and Unblock the Notifications
