Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮನೆಯಲ್ಲೇ ಮಾಡಿ ಬಿಡದಿ ತಟ್ಟೆ ಇಡ್ಲಿ..! ಮಾಡೋದು ತುಂಬಾನೆ ಸುಲಭ..!
ಎಲ್ಲರಿಗೂ ಇಡ್ಲಿ ಅಂದ್ರೆ ಇಷ್ಟವಾಗುತ್ತೆ. ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡಿ ಸವಿಯೋದು ಅಂದ್ರೆ ಹಲವರಿಗೆ ಇಷ್ಟವಾಗುತ್ತೆ. ಎಣ್ಣೆ ಕಡಿಮೆ ಹಾಕಿ ಮಾಡುವುದರಿಂದ ಆರೋಗ್ಯಕ್ಕೂ ಉತ್ತಮ. ಹಾಗೆ ಮಾಡುವುದು ಸಹ ತುಂಬಾನೆ ಸುಲಭ. ಹಿಂದಿನ ದಿನ ಹಿಟ್ಟು ರೆಡಿ ಮಾಡಿ ಮಾರನೆ ದಿನ ಇಡ್ಲಿ ಮಾಡಿ ಸವಿಯುತ್ತಾರೆ. ಈ ಇಡ್ಲಿ ಮಾಡುವುದರಲ್ಲೂ ಹಲವು ರೀತಿಯ ವಿಧಗಳಿವೆ.
ಇನ್ನು ಇಡ್ಲಿಯಲ್ಲಿ ನೀವು ಬಿಡದಿ ಇಡ್ಲಿ ಹೆಸರು ಕೇಳಿರುತ್ತೀರಿ. ಬಿಡದಿ ಬಳಿಯ ಹೋಟೆಲ್ವೊಂದರಲ್ಲಿ ಸಿಗುವ ಇಡ್ಲಿ ಸಿಕ್ಕಾಪಟ್ಟೆ ಫೇಮಸ್. ಆ ರಸ್ತೆ ಮಾರ್ಗವಾಗಿ ತೆರಳುವ ಮಂದಿ ಈ ತಟ್ಟೆ ಇಡ್ಲಿ ಸವಿಯಲು ಮುಂದಾಗುತ್ತಾರೆ. ಬಿಡದಿ ತಟ್ಟೆ ಇಡ್ಲಿ ಅಂದ್ರೆ ಎಲ್ಲಾ ಕಡೆಯೂ ಫೇಮಸ್, ಅದ್ರಲ್ಲೂ ಬೆಂಗಳೂರು ಮೈಸೂರು ಮಾರ್ಗದಲ್ಲಿ ಇದಕ್ಕಿಂತ ಫೇಮಸ್ ತಿಂಡಿ ಮತ್ತೊಂದಿಲ್ಲ.

ಕೆಲವರು ಈ ತಟ್ಟೆ ಇಡ್ಲಿ ಸವಿಯಬೇಕಂತಲೇ ಬಿಡದಿ ಕಡೆ ಪ್ರಯಾಣ ಬೆಳೆಸುತ್ತಾರೆ. ಹಾಗಾದ್ರೆ ಈ ಬಿಡದಿ ತಟ್ಟೆ ಇಡ್ಲಿ ಮಾಡುವುದು ಹೇಗೆ?, ಬಿಡದಿ ತಟ್ಟೆ ಇಡ್ಲಿ ಮನೆಯಲ್ಲಿಯೇ ಮಾಡಬಹುದು. ಹಾಗಾದ್ರೆ ಬಿಡದಿ ತಟ್ಟೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವು ನೋಡೋಣ.
ಬಿಡದಿ ತಟ್ಟೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 3 ಗ್ಲಾಸ್
- ಉದ್ದಿನಬೇಳೆ - 1 ಗ್ಲಾಸ್
- ಅವಲಕ್ಕಿ- ಅರ್ಧ ಗ್ಲಾಸ್
- ಸಾಬುದಾನ/ ಸಬ್ಬಕ್ಕಿ - 1/4 ಗ್ಲಾಸ್
- ಮೆಂತ್ಯ - 1 ಟೀಸ್ಪೂನ್
- ಅಡುಗೆ ಎಣ್ಣೆ - 1 tbsp
- ಅಡುಗೆ ಸೋಡಾ - ಸ್ವಲ್ಪ
- ರುಚಿಗೆ ಉಪ್ಪು
ಬಿಡದಿ ತಟ್ಟೆ ಇಡ್ಲಿ ಮಾಡುವುದು ಹೇಗೆ?
ಮೊದಲು ಹಿಟ್ಟು ರೆಡಿ ಮಾಡಿಕೊಳ್ಳುವುದು ಹೇಗೆ ನೋಡೋಣ. ಮೊದಲಿಗೆ 3 ಗ್ಲಾಸ್ ಅಕ್ಕಿಗೆ ಒಂದು ಗ್ಲಾಸ್ ಉದ್ದಿನ ಬೇಳೆ ಬೆರೆಸಿಕೊಳ್ಳಿ. ಇದನ್ನು ಒಂದು ಬೌಲ್ಗೆ ಹಾಕಿಕೊಳ್ಳಿ. ಇದಕ್ಕೆ ಮೆಂತ್ಯ ಸಹ ಹಾಕಿಕೊಂಡು ಚೆನ್ನಾಗಿ ಮೂರು ಬಾರಿ ತೊಳೆದುಕೊಳ್ಳಿ. ನಂತರ ನೀರು ಹಾಕಿಟ್ಟುಕೊಳ್ಳಿ.
ಈಗ ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿ ಹಾಗೂ ಸಬಕ್ಕಿ ಸೇರಿಸಿ ತೊಳೆದುಕೊಂಡು ಅದನ್ನು ನೆನೆಯಲು ಇಟ್ಟಿರುವ ಅಕ್ಕಿ, ಉದ್ದಿನ ಬೇಳೆಗೆ ಹಾಕಿ. ಇದನ್ನು 5 ಗಂಟೆಗಳ ಕಾಲ ನೆನೆಯಲು ಬಿಡಿ. 5 ಗಂಟೆಯ ಬಳಿಕ ಈ ನೀರಿನಿಂದ ಪದಾರ್ಥಗಳನ್ನು ತೆಗೆದುಕೊಂಡು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
ನುಣ್ಣಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಹಿಟ್ಟು ನುಣ್ಣಗಾಗಬೇಕು. ಈಗ ರುಬ್ಬಿಕೊಂಡಿರುವ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ರುಚಿಕೆ ತಕ್ಕಷ್ಟು ಉಪ್ಪು ಹಾಕಿ ಕೈನಲ್ಲಿ ಚೆನ್ನಾಗಿ ಕಲಸಿಕೊಳ್ಳಿ. ಇದಾದ ಬಳಿಕ ಪಾತ್ರೆಯನ್ನು ಮುಚ್ಚಿ ಮತ್ತೆ ಒಂದು ರಾತ್ರಿ ಬಿಡಬೇಕು. ಸುಮಾರು 8 ಗಂಟೆ ಇಡಬೇಕು.
ಮಾರನೇ ದಿನ ಮುಚ್ಚಳ ತೆಗೆದು ಮತ್ತೆ ಚೆನ್ನಾಗಿ ಕಲಸಿಕೊಳ್ಳಿ. ಈಗ ಅದಕ್ಕೆ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ತಟ್ಟೆಗಳ ತೆಗೆದುಕೊಂಡು ಆ ತಟ್ಟೆಗೆ ಎಣ್ಣೆ ಸವರಿಕೊಳ್ಳಿ. ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಸ್ಟೀಲ್ ತಟ್ಟೆಗಳೇ ಸಾಕಾಗುತ್ತದೆ. ತಟ್ಟೆಗೆ ಇಡ್ಲಿ ಹಿಟ್ಟು ಸುರಿದ ಬಳಿಕ ಅವುಗಳನ್ನು ಇಡ್ಲಿ ಪಾತ್ರೆ ಅಥವಾ ಕುಕ್ಕರ್ ಗಳ ಒಳಗೆ ಇಟ್ಟು 10 ನಿಮಿಷಗಳ ಕಾಲ ಬೇಯಿಸಬೇಕು. ಇಷ್ಟಾದರೆ ನಿಮ್ಮ ಮುಂದೆ ಬಿಡದಿ ರುಚಿಯ ತಟ್ಟೆ ಇಡ್ಲಿ ರೆಡಿಯಾಗುತ್ತದೆ.
ಇದರ ಜೊತೆಗೆ ತೆಂಗಿನಕಾಯಿ ಚಟ್ನಿ ಇದ್ದೆ ಅದರ ರುಚಿ ದುಪ್ಪಟ್ಟಾಗುತ್ತದೆ.



Click it and Unblock the Notifications
