Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬಿರಿಯಾನಿಗಿಂತ ಬೆಸ್ಟ್..ಪಲಾವ್‌ಗಿಂತ ಟೇಸ್ಟ್.! ಈ ರೀತಿ ವೆಜ್ ಕುಷ್ಕ ಮಾಡಿ ನೋಡಿ..!
ನೀವು ವೆಜ್ ಪ್ರಿಯರಾಗಿದ್ದರೆ, ವೆಜ್ ಬಿರಿಯಾನಿ, ವೆಜ್ ಕುಷ್ಕದಂತಹ ಖಾದ್ಯ ಸವಿಯಲು ಯಾವಾಗಲು ಇಷ್ಟಪಡುತ್ತಿರಿ. ಅದರಲ್ಲೂ ವೆಜ್ ಕುಷ್ಕ ಎಲ್ಲರ ಪಾಲಿನ ಅದ್ಭುತ ರುಚಿ ನೀಡುವ ಖಾದ್ಯ. ಮನೆಯಲ್ಲಿ ಅಥವಾ ಹೋಟೆಲ್‌ನಲ್ಲಿ ಈ ರುಚಿ ಸವಿದು ಮನೆಯಲ್ಲೂ ಮಾಡಿ ಸವಿಯುವ ಇಚ್ಛೆ ಹೊಂದಿರುತ್ತೀರಿ. ಆದ್ರೆ ಹೇಗೆ ಮಾಡಬೇಕು ಅನ್ನೋದು ನಿಮಗೆ ಗೊತ್ತಾ?
ವೆಜ್ ಕುಷ್ಕ ಅತ್ಯಂತ ರುಚಿಕರವಾಗಿ ಮಾಡಲು ಹಲವು ವಿಧಾನಗಳಿವೆ. ಅದರಲ್ಲೂ ಹಲವು ರುಚಿ, ಹಲವು ವಿಧಾನದಲ್ಲಿ ಮಾಡಬಹುದು. ನಾವಿಂದು ಬಿರಿಯಾನಿ ಸ್ಟೈಲ್‌ನಲ್ಲಿ ಈ ವೆಜ್ ಕುಷ್ಕ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಅದರಲ್ಲೂ ವಿಶೇಷವಾಗಿ ಈ ಉಷ್ಕ ಯಾವ ರೀತಿ ಮಾಡಿದರೆ ರುಚಿ ಹೆಚ್ಚಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ.

ಕಡಿಮೆ ವಸ್ತುಗಳ ಬಳಸಿ ಕಡಿಮೆ ಸಮಯದಲ್ಲಿ ಮನೆ ಮಂದಿ ಎಲ್ಲರು ಕುಳಿತು ಸವಿಯುವಂತಹ ಕುಷ್ಕ ಇದಾಗಿದೆ. ನೀವು ಹೋಟೆಲ್‌ಗಳಲ್ಲಿಯೂ ಕೂಡ ಇಂತಹ ಕುಷ್ಕ ಸವಿದಿರುತ್ತೀರಿ. ಹಾಗಾದ್ರೆ ನಾವಿಂದು ಈ ಕುಷ್ಕ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.
ರುಚಿ ರುಚಿಯ ಕುಷ್ಕ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಈ ಕುಷ್ಕ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಈ ಮೂಲಕ ತಿಳಿದು ಮನೆಯಲ್ಲಿ ಈ ವಿಧಾನ ಬಳಸಿ ಮಾಡಿ ಸವಿಯೋಣ.
ಮನೆಯಲ್ಲಿ ಕುಷ್ಕ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ - 250 ಗ್ರಾಂ
- ಪಲಾವ್ ಎಲೆ
- ಚಕ್ರ ಮೊಗ್ಗು
- ದಾಲ್ಚಿನ್ನಿ
- ಲವಂಗ
- ಏಲಕ್ಕಿ
- ಜೀರಿಗೆ
- ಈರುಳ್ಳಿ - 4
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಪುದೀನ ಎಲೆಗಳು
- ಕೊತ್ತಂಬರಿ ಸೊಪ್ಪು
- ಹಸಿರು ಮೆಣಸಿನಕಾಯಿ - 4
- ಕೆಂಪು ಮೆಣಸಿನ ಪುಡಿ
- ಅರಿಶಿನ ಪುಡಿ
- ಧನಿಯಾ ಪುಡಿ
- ಟೊಮೆಟೋ - 1
- ಮೊಸರು
- ಬಿರಿಯಾನಿ ಪುಡಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮನೆಯಲ್ಲಿ ಕುಷ್ಕ ಮಾಡುವ ವಿಧಾನ
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಅದು ನೀರಿನಲ್ಲಿ 20 ನಿಮಿಷ ನೆನೆಯಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಬಳಿಕ ಇದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ, ಚಕ್ರಮೊಗ್ಗು, ಮರಾಠಿ ಮೊಗ್ಗು, ಏಲಕ್ಕಿ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. 30 ಸೆಕೆಂಡ್ ಬಳಿಕ ಇದಕ್ಕೆ ಸಣ್ಣ ದಾಗಿ ಸ್ಲೈಸ್ ಮಾಡಿದ ಈರುಳ್ಳಿಯನ್ನು ಹಾಕಿಕೊಳ್ಳಿ.
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸಣ್ಣ ಉರಿಯಲು ಫ್ರೈ ಆಗಲು ಬಿಡಿ. ಈಗ ಇನ್ನೊಂದು ಕಡೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಉಪ್ಪು, ಹಸಿ ಮೆಣಸು, ನೀರು ಹಾಕಿಕೊಂಡು ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಇರುವ ಈರುಳ್ಳಿ ಜೊತೆಗೆ ಈ ಮಸಾಲೆಯನ್ನು ಕೂಡ ಹಾಕಿ.
ನಂತರ ಇದಕ್ಕೆ ಖಾರದ ಪುಡಿ, ಅರಶಿಣ, ಧನಿಯಾ ಪುಡಿ ಹಾಗೆ ಒಂದು ಟೊಮೆಟೋ ಕತ್ತರಿಸಿಕೊಂಡು ಇದಕ್ಕೆ ಹಾಕಿ ಫ್ರೈ ಮಾಡಿ. ನಂತರ 2 ಸ್ಪೂನ್ ಮೊಸರು, ಬಿರಿಯಾನಿ ಪೌಡರ್, ಹಾಕಿಕೊಂಡು ಸ್ವಲ್ಪ ನೀರು ಹಾಕಿ 3 ನಿಮಿಷ ಫ್ರೈ ಮಾಡಿ. ಅನಂತರ ನೀವು ಅಕ್ಕಿ ತೆಗೆದುಕೊಂಡ ಕಪ್‌ನಲ್ಲಿಯೆ ಒಂದೂವರೆ ಕಪ್ ನೀರು ತೆಗೆದುಕೊಂಡು ಇದಕ್ಕೆ ಹಾಕಿಕೊಂಡು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಕುದಿಯಲು ಬಿಡಿ. ಕುದಿಯಲು ಆರಂಭಿಸಿದಾಗ ನೆನೆಸಿಟ್ಟ ಅಕ್ಕಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಕುಕ್ಕರ್‌ನಲ್ಲಿ ಮಾಡುತ್ತಿದ್ದರೆ 2 ಸೀಟಿ ಹೊಡೆಸಿದರೆ ಸಾಕು. ಪಾತ್ರೆಯಲ್ಲಾದರೆ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ, ಮುಚ್ಚಳ ತೆಗೆದು 10 ನಿಮಿಷ ಬೇಯಿಸಬೇಕು. 10 ನಿಮಿಷದ ಬಳಿಕ ಮುಚ್ಚಳ ಮುಚ್ಚಿ 5 ನಿಮಿಷ ಬಿಟ್ಟು ತಿರುಗಿಸಿಕೊಳ್ಳಿ. ಇಷ್ಟಾದರೆ ಈ ಕುಷ್ಕ ರೆಡಿಯಾಗುತ್ತೆ.



Click it and Unblock the Notifications
