Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಳಿಗಾಲದ ಬೆಸ್ಟ್ ಸೂಪ್; 2 ನಿಮಿಷದಲ್ಲಿ ಶೀತ, ಕೆಮ್ಮು, ನೆಗಡಿಗೆ ಮದ್ದು!
ಚಳಿಗಾಲದ ದಿನದಲ್ಲಿ ಬಿಸಿ ಬಿಸಿಯಾದ ಖಾದ್ಯಗಳ ಮಾಡಿ ಸವಿಯೋದಕ್ಕೆ ಎಲ್ಲರು ಇಷ್ಟಪಡುತ್ತಾರೆ. ಅದ್ರಲ್ಲೂ ಚಳಿಗಾಲದಲ್ಲಿ ಯಾವುದಾದರು ಸೂಪ್ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಸೂಪ್ಗಳಲ್ಲು ಹತ್ತಾರು ಬಗೆಗಳಿವೆ. ನೀವು ಮನೆಯಲ್ಲಿ ಮಾತ್ರವಲ್ಲದೆ ಹೋಟೆಲ್, ರೆಸ್ಟೋರೆಂಟ್ನಲ್ಲಿ ಬಗೆ ಬಗೆಯ ಸೂಪ್ ಸವಿಯೋದು ಇಷ್ಟಪಡುವ ಮಂದಿ ಆಗಿರಬಹುದು.
ಇನ್ನು ಮನೆಯಲ್ಲೇ ಕಡಿಮೆ ಸಮಯದಲ್ಲಿ ಮಾಡಿ ಸವಿಯುವಂತಹ ಖಾದ್ಯಗಳಲ್ಲಿ ಈ ಸೂಪ್ಗಳು ಕೂಡ ಒಂದು. ಈಗ ಮಾರುಕಟ್ಟೆಯಲ್ಲಿ ಸುಲಭವಾಗಿ ಮಾಡಿ ಮುಗಿಸಬಹುದಾದ ಈ ಸೂಪ್ ಪ್ಯಾಕೆಟ್ಗಳು ಬಂದಿವೆ. 2 ನಿಮಿಷದಲ್ಲಿ ಬಿಸಿ ಬಿಸಿಯಾದ ಸೂಪ್ ರೆಡಿಯಾಗುತ್ತೆ. ಹಾಗೆ ಈ ಸೂಪ್ ಸವಿಯಲು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಷ್ಟಪಡೋದು ನೋಡಬಹುದು.

ಹಾಗೆ ಚಳಿಗಾಲದ ಕಾಲೋಚಿತ ಅನಾರೋಗ್ಯ ಸಮಸ್ಯೆಗಳಿಗೂ ಕೂಡ ಈ ಸೂಪ್ಗಳು ಬಹಳ ಮುಖ್ಯ ಮನೆಮದ್ದು ಎನ್ನಬಹುದು. ಹಲವು ಸೂಪ್ಗಳು ನಿಮ್ಮ ಕೆಲವು ಅನಾರೋಗ್ಯಕ್ಕೆ ಮದ್ದಾಗಿರಲಿವೆ. ಅದ್ರಲ್ಲೂ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳಿಗೆ ಸುಲಭವಾಗಿ ಈ ಸೂಪ್ಗಳು ಪರಿಹಾರ ನೀಡಲಿವೆ. ಹಾಗಾದ್ರೆ ಈ ಸೂಪ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.
ಸಿಂಪಲ್ ಸೂಪ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಮಾಹಿತಿ ಇಲ್ಲಿದೆ.
ಸೂಪ್ ಮಾಡಲು ಅಗತ್ಯ ವಸ್ತುಗಳು
- ಜೀರಿಗೆ
- ಧನಿಯಾ ಕಾಳು
- ಅಕ್ಕಿ- 2 ಸ್ಪೂನ್
- ಉದ್ದಿನ ಬೇಳೆ
- ಬೆಳ್ಳುಳ್ಳಿ
- ಕರಿಬೇವು
- ಎಣ್ಣೆ ಅಥವಾ ಬೆಣ್ಣೆ
- ಕೊತ್ತಂಬರಿ ಸೊಪ್ಪು
- ಶುಂಠಿ
- ಉಪ್ಪು
ಸೂಪ್ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಜೀರಿಗೆ, ಕಾಳು ಮೆಣಸು, ಧನಿಯಾ ಕಾಳು, 2 ಸ್ಪೂನ್ ಅಕ್ಕಿ, ಉದ್ದಿನ ಬೇಳೆ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. 2 ನಿಮಿಷ ಬಿಟ್ಟು ಬೆಳ್ಳುಳ್ಳಿ, ಕರಿಬೇವು ಹಾಕಿ ಬಿಸಿ ಮಾಡಿ ಒಲೆ ಆಫ್ ಮಾಡಿಕೊಂಡು ಶುಂಠಿ ಸಹ ಹಾಕಿಕೊಳ್ಳಿ.
ನಂತರ ಈ ಎಲ್ಲಾ ಪದಾರ್ಥಗಳು ತಣ್ಣಗಾಗಲು ಬಿಟ್ಟು ಅನಂತರ ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಮೊದಲು ಡ್ರೈ ಆಗಿ ರುಬ್ಬಿಕೊಳ್ಳಬೇಕು. 2 ಸುತ್ತು ತರಿತರಿಯಾದ ಬಳಿಕ ಸ್ವಲ್ಪ ನೀರು ಸೇರಿಸಿಕೊಂಡು ಮತ್ತೆ ರುಬ್ಬಿಕೊಳ್ಳಬೇಕು. ಇದನ್ನು ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ರುಬ್ಬಿದ ವಸ್ತುವನ್ನು ಬಾಣಲೆಗೆ ಹಾಕಿಕೊಂಡು ಮತ್ತೆ ತೆಳ್ಳಗೆ ಮಾಡಲು ನೀರು ಹಾಕಿಕೊಳ್ಳಿ. ಮಜ್ಜಿಗೆ ಹದಕ್ಕೆ ಬರುವಷ್ಟು ನೀರು ಹಾಕಿ ಕುದಿಯಲು ಬಿಡಿ. ಹಾಗೆ ಉಪ್ಪು ಹಾಕಿ ಮಿಕ್ಸ ಮಾಡಿ ಕುದಿ ಬರಲು ಬಿಡಿ.
ಕುದಿಯಲು ಆರಂಭಿಸಿದಾಗ ಆಗಾಗ ತಿರುಗಿಸುತ್ತಾ ಇರಿ. 2ರಿಂದ 3 ನಿಮಿಷ ಬಿಟ್ಟು ಅನಂತರ ಅರ್ಧ ಸ್ಪೂನ್ ಬೆಣ್ಣೆ ಇದ್ದರೆ ಹಾಕಿಕೊಳ್ಳಿ. ಹಾಗೆ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಸೂಪ್ ಸಿದ್ದವಾಗುತ್ತೆ, ಇದು ಚಳಿಗಾಲದಲ್ಲಿ ಸವಿಯಲು ಬಹಳ ರುಚಿಯಾದ ಸೂಪ್ ಆಗಿರಲಿದೆ. ನೀವು ಕೂಡ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ.



Click it and Unblock the Notifications
