Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸಂಕ್ರಾಂತಿಗೆ ಮಾಡಿ ಪುಟಾಣಿ ಪುಡಿ ಉಂಡೆ; 5 ನಿಮಿಷವೂ ಹಿಡಿಯಲ್ಲ!!
ಸಂಕ್ರಾಂತಿ ಹಬ್ಬದಲ್ಲಿ ಸಿಹಿ ತಿಂಡಿಯನ್ನು ಮಾಡಿ ಸವಿಯುವುದು ಕಾಮನ್. ಸಿಹಿ ತಿಂಡಿಗಳಿಲ್ಲದೆ ಯಾವುದೇ ಹಬ್ಬಗಳು ಪೂರ್ಣ ಆಗೋದೇ ಇಲ್ಲ. ಅದ್ರಲ್ಲೂ ವಿಶೇಷ ದಿನಗಳಲ್ಲಿ ವಿಶೇಷ ರೀತಿಯ ಸಿಹಿ ತಿಂಡಿಗಳು ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಹಜ. ಈ ಸಂಕ್ರಾಂತಿಯ ಶುಭ ಗಳಿಗೆಯಲ್ಲಿ ನೀವು ಮನೆಯಲ್ಲೇ ರುಚಿ ರುಚಿಯಾದ ಸಿಹಿ ತಿಂಡಿಯನ್ನು ಮಾಡಿ ಸವಿಯಬಹುದು.
ನಾವಿಂದು ಮನೆಯಲ್ಲಿ ಬಹಳ ಸುಲಭವಾಗಿ, ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಿ ಸವಿಯಬಹುದಾದ ರುಚಿ ರುಚಿಯ ಪುಟಾಣಿ ಪುಡಿಯ ಉಂಡೆಯ ಕುರಿಯಾಗಿ ತಿಳಿದುಕೊಳ್ಳೋಣ. ಪುಟಾಣಿ ಅಥವಾ ಹುರಿಗಡಲೆಯನ್ನು ಬಳಸಿಕೊಂಡು ಮಾಡುವ ಈ ಉಂಡೆ ಸವಿಯಲು ಬಹಳ ರುಚಿ ನೀಡಿಲಿದೆ. ಮಕ್ಕಳಿಗಂತು ಈ ರುಚಿ ಇಷ್ಟವಾಗದೆ ಇರದು. ಹಾಗೆ ಹಬ್ಬದ ಸಮಯದಲ್ಲಿ ಇದನ್ನು ಮಾಡಿದ್ರೆ ತಿಂಗಳ ಕಾಲ ಇಟ್ಟು ಸವಿಯಬಹುದು. ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಈ ಉಂಡೆ ಉತ್ತಮವಾಗಿರಲಿದೆ.

ಕಡಿಮೆ ವಸ್ತುಗಳ ಬಳಸಿಕೊಂಡು ಕಡಿಮೆ ಸಮಯದಲ್ಲಿ ಯಾವುದಾದರು ಸಿಹಿ ಮಾಡಿ ಸವಿಯುವ ಕುರಿತಾಗಿ ನೀವು ಆಲೋಚಿಸಿರಬಹುದು. ಇಂತಹ ಸಮಯದಲ್ಲಿ ನಾವಿಂದು ಈ ಹುರಿಗಡಲೆಯಿಂದ ಮಾಡುವಂತಹ ರುಚಿ ರುಚಿಯಾದ ಸಿಹಿ ಉಂಡೆಯನ್ನು ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಪುಟಾಣಿ ಉಂಡೆ ಅಥವಾ ಹುರಿಗಡಲೆ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹುರಿಗಡಲೆ- 2 ಬೌಲ್
- ತುಪ್ಪ
- ಸಕ್ಕರೆ
- ಒಣ ದ್ರಾಕ್ಷಿ
- ಗೋಡಂಬಿ
- ಏಲಕ್ಕಿ
ಪುಟಾಣಿ ಉಂಡೆ ಅಥವಾ ಹುರಿಗಡಲೆ ಉಂಡೆ ಮಾಡುವ ವಿಧಾನವೇನು?
ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಂಡು ಅದನ್ನು ಜರಡಿ ಹಿಡಿದು ನುಣ್ಣಗಿರುವ ಪುಡಿಯನ್ನು ಮಾತ್ರವೇ ತೆಗೆದುಕೊಳ್ಳಿ. ಈಗ ಒಲೆ ಮೇಲೆ ಇಂದು ಬಾಣಲೆ ಇಟ್ಟು ಅದಕ್ಕೆ ಈ ಪುಡಿಯನ್ನು ಹಾಕಿ ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ 1ರಿಂದ 2 ನಿಮಿಷಗಳ ಕಾಲ ಹುರಿದುಕೊಳ್ಳಿ. ಅನಂತರ ಒಂದು ಅಳತೆ ಕಪ್‌ನಲ್ಲಿ 2 ಬೌಲ್ ಸಕ್ಕರೆ ಬಳಸಿ.
ಯಾವ ಅಳತೆಯಲ್ಲಿ ಹುರಿಗಡಲೆ ಹಿಟ್ಟು ಬಳಸಿದ್ದೀರೋ ಅಷ್ಟೇ ಅಳತೆಯ ಸಕ್ಕರೆ ಬಳಸಿ. ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ಅದಕ್ಕೆ 2 ಏಲಕ್ಕಿ ಬಿಡಿಸಿಕೊಂಡು ಹಾಕಿ ರುಬ್ಬಿ ಪುಡಿ ಮಾಡಿಕೊಳ್ಳಿ. ನಂತರ ಈ ಸಕ್ಕರೆ ಪುಡಿಯನ್ನು ಸಹ ಹಿಟ್ಟಿನೊಂದಿಗೆ ಹಾಕಿ ಒಮ್ಮೆ ಡ್ರೈ ಮಿಕ್ಸ್ ಮಾಡಿ.
ಈ ನಡುವೆ ಒಲೆ ಮೇಲೆ ಸಣ್ಣ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಒಣ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದುಕೊಳ್ಳಿ. ಹಾಗೆ ಅದಕ್ಕೆ ಮತ್ತೆ 5 ಸ್ಪೂನ್ ತುಪ್ಪ ಹಾಕಿ ಬಿಸಿ ಮಾಡಿ. ಈ ಬಿಸಿ ಬಿಸಿಯ ತುಪ್ಪವನ್ನು ಹುರಿಗಡಲೆ ಹಿಟ್ಟಿನೊಂದಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಡ್ರೈ ಫ್ರೂಟ್ಸ್ ಸಹ ಹಾಕಿ ಮಿಶ್ರಣ ಮಾಡಿಕೊಳ್ಳಿ.
ಕೈಯಿಂದ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಉಂಡೆ ಕಟ್ಟಲು ಬರುವ ಹದಕ್ಕೆ ಮಾಡಿಕೊಳ್ಳಿ. ಉಂಡೆ ಕಟ್ಟಲು ಆಗದಿದ್ದರೆ ಮತ್ತೆ ತುಪ್ಪ ಬಿಸಿ ಮಾಡಿ ಇದಕ್ಕೆ ಹಾಕಿ ಮಿಶ್ರಣ ಮಾಡಿ ಮತ್ತೆ ಕಲಸಿಕೊಂಡು ಉಂಡೆ ಕಟ್ಟಲು ಪ್ರಯತ್ನಿಸಿ. ಈ ರೀತಿ ಒಂದೊಂದೆ ಉಂಡೆ ಕಟ್ಟಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪುಟಾಣಿ ಉಂಡೆ ಸಿದ್ದವಾಗುತ್ತೆ ನೀವು ಸಹ ಮನೆಯಲ್ಲಿ ಈ ಉಂಡೆ ಮಾಡಿ ಸವಿದು ನೋಡಿ. ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ ಇದಾಗುತ್ತೆ ಹಾಗೆ ಮಾಡೋದು ಸಹ ಬಹಳ ಸುಲಭ.



Click it and Unblock the Notifications