Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಡಲೆ ಹಿಟ್ಟಿನಿಂದ 10 ನಿಮಿಷದಲ್ಲಿ ಗರಿ ಗರಿ ಕೋಡುಬಳೆ ಮಾಡಿ.! ತುಂಬಾ ಸುಲಭದ ರೆಸಿಪಿ
ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಸವಿಯುವ ನಿಮ್ಮ ಅಭ್ಯಾಸ ಇದ್ದರೆ ಹಲವು ರೀತಿ ತಿಂಡಿಯನ್ನು ಖರೀದಿಸಿ ಇಲ್ಲವೆ ಮನೆಯಲ್ಲೇ ಮಾಡಿ ಸವಿದಿರುತ್ತೇವೆ. ಹಾಗೆ ಹತ್ತು ಹಲವು ಸ್ನ್ಯಾಕ್ಸ್ ಮಾಡಿ ಸವಿಯಲು ಮುಂದಾಗುತ್ತೀರಿ. ಅದರಲ್ಲೂ ಕರಿದ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಬ್ಬದಲ್ಲಿ, ಶುಭ ಸಮಾರಂಭಗಳಲ್ಲಿ ಯಾವುದಾದರು ತಿಂಡಿಗಳ ಮಾಡಿ ಸವಿಯಲು ನೀಡುವುದು ನಾವು ನೋಡಿದ್ದೇವೆ. ಅದೇ ರೀತಿ ಎಲ್ಲಾ ಸಮಯದಲ್ಲೂ ಈ ಸ್ನ್ಯಾಕ್ಸ್ ಮನೆಯಲ್ಲಿ ಇದ್ದೇ ಇರುತ್ತದೆ.
ಅದರಲ್ಲೂ ಕೆಲವೊಂದು ತಿಂಡಿಗಳನ್ನು ಮನೆಯಲ್ಲಿ ಮಾಡಿ ಸವಿಯುವುದು ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಹೆಚ್ಚಾಗಿ ಚಕ್ಕುಲಿ, ಕೋಡುಬಳೆ, ಮಿಕ್ಸ್ಚರ್, ನಿಪ್ಪಟ್ಟು, ವಡೆ, ಖಾರ ಖಾರದ ಹಲವು ರೀತಿಯ ಖಾದ್ಯ ಸವಿಯಲು ಮಾಡಿರುತ್ತಾರೆ. ಹಾಗೆ ಅಂಗಡಿ, ಬೇಕರಿಯಿಂದಲೂ ಇಂತಹ ಹಲವು ಕರಿದ ತಿಂಡಿಗಳ ತಂದು ಮನೆಯಲ್ಲಿ ಇಟ್ಟಿರುತ್ತಾರೆ.

ಹಬ್ಬವಿದ್ದಾಗ, ಯಾರಾದರು ಮನೆಗೆ ಬಂದಾಗ ಅವರಿಗೆ ಟೀ, ಕಾಫಿಯ ಜೊತೆಗೆ ಈ ಕರಿದ ತಿಂಡಿಗಳ ನೀಡುವುದು ಸಾಮಾನ್ಯ. ಆದ್ರೆ ಮನೆಯಲ್ಲಿಯೇ ಇಂತಹ ಕರಿದ ತಿಂಡಿ ಮಾಡಿ ಸವಿಯುವುದು ಮತ್ತೊಂದು ವಿಶೇಷ. ಹೀಗಾಗಿ ನಾವಿಂದು ಮನೆಯಲ್ಲಿ ಸುಲಭವಾಗಿ ಮಾಡುವಂತಹ, ಅದರಲ್ಲೂ ಕೇವಲ 10 ನಿಮಿಷದಲ್ಲಿ ಮಾಡಿ ಮುಗಿಸಬಹುದಾದ ಕೋಡುಬಳೆ ರೆಸಿಪಿಯನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಕೋಡುಬಳೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳೋಣ.
ಕೋಡುಬಳೆ ಮಾಡಲು ಬೇಕಾಗುವಂತಹ ಪದಾರ್ಥಗಳು
- ಕಡಲೆ ಹಿಟ್ಟು
- ಅಕ್ಕಿ ಹಿಟ್ಟು
- ಖಾರದ ಪುಡಿ
- ಇಂಗು
- ಜೀರಿಗೆ ಪುಡಿ
- ಉಪ್ಪು
- ಎಣ್ಣೆ
- ಒಂಕಾಳು
- ಬಿಳಿ ಎಳ್ಳು
ಕೋಡುಬಳೆ ಮಾಡುವ ಸುಲಭದ ವಿಧಾನ ಇದು
ಮೊದಲು ಒಂದು ಬೌಲ್ಗೆ 1 ಕಪ್ ಕಡಲೆ ಹಿಟ್ಟು ಹಾಕಿಕೊಳ್ಳಿ. ಹಾಗೆ ಎರಡು ಸ್ಪೂನ್ ಅಕ್ಕಿ ಹಿಟ್ಟು, ಉಪ್ಪು, ಇಂಗು, ಖಾರದ ಪುಡಿ, ಒಂಕಾಳು, ಎಳ್ಳು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ಆ ಬಿಸಿಯಾದ ಎಣ್ಣೆಯಲ್ಲಿ ಕಾಲು ಕಪ್ ಎಣ್ಣೆಯನ್ನು ಹಿಟ್ಟು ಹಾಕಿರುವ ಈ ಬೌಲ್ಗೆ ಹಾಕಿಕೊಳ್ಳಿ.
ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ಉಂಡೆ ಕಟ್ಟಿದರೆ ಉಂಡೆ ಕಟ್ಟಲು ಬರುವಂತೆ ಹದ ಮಾಡಿ. ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಇದು ಚಪಾತಿ ಹಿಟ್ಟಿನಂತೆ ಮೆದುವಾಗಿ ಹದವಾಗಿ ಬರಬೇಕು. ಅಲ್ಲಿಯವರೆಗೂ ಹಿಟ್ಟನ್ನು ನಾದಿಕೊಳ್ಳಬೇಕು. ನಂತರ ಹಿಟ್ಟನ್ನು ತೆಗೆದುಕೊಂಡು ಸಣ್ಣದಾಗಿ ಉಂಡೆ ಮಾಡಿಕೊಳ್ಳಿ.
ದೊಡ್ಡ ಗೋಲಿ ಗಾತ್ರದ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿ ನಂತರ ಕೈಯಿಂದ ಉದ್ದ ಕಡ್ಡಿ ಆಕಾರಕ್ಕೆ ಮಾಡಿಕೊಳ್ಳಿ. ಪೆನ್ಸಿಲ್ ರೀತಿಯಲ್ಲಿ ಆಕಾರಕ್ಕೆ ಹಿಟ್ಟು ಮಾಡಿ ಎರಡೂ ತುದಿಯನ್ನು ಒಟ್ಟಿಗೆ ಅಂಟಿಸಿಕೊಳ್ಳಿ. ಅದು ಕೋಡುಬಳೆ ಆಕಾರಕ್ಕೆ ಸುತ್ತಿಕೊಳ್ಳಿ. ಎಲ್ಲಾ ಹಿಟ್ಟನ್ನು ಇದೇ ರೀತಿ ಮಾಡಿಟ್ಟುಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಮಾಡಿಕೊಳ್ಳಿ.
ನಂತರ ಒಲೆ ಮೇಲೆ ಬಿಸಿ ಮಾಡಲು ಇಟ್ಟು ಎಣ್ಣೆ ಸಣ್ಣ ಉರಿಯಲ್ಲಿ ಇಟ್ಟುಕೊಂಡು ಈ ಕೋಡುಬಳೆಯನ್ನು ಅದಕ್ಕೆ ಹಾಕಿ. ಸುಮಾರು 5 ನಿಮಿಷ ಬೇಯಿಸಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಇಟ್ಟು ನಿಧಾನವಾಗಿ ಕರಿಯಿರಿ. ಒಲೆಯಿಂದ ತೆಗೆದು ಇಟ್ಟುಕೊಂಡು ಬಳಿಕ ಕರಿಬೇವು ಇದೇ ಎಣ್ಣೆಗೆ ಹಾಕಿ ಕರಿದುಕೊಂಡು ಈ ಕೋಡುಬೆಳೆಗೆ ಹಾಕಿಕೊಳ್ಳಿ. ಇಷ್ಟಾದರೆ ಸವಿಯಲು ನಿಮ್ಮ ಮುಂದೆ ಗರಿ ಗರಿಯ ಕೋಡುಬಳೆ ರೆಡಿಯಾಗುತ್ತೆ ಮಾಡೋದು ಕೂಡ ತುಂಬಾನೆ ಸುಲಭ. 1 ವಾರ ಇಟ್ಟು ಇದನ್ನು ಸವಿಯಹಹುದು.



Click it and Unblock the Notifications
