Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬೆಂಡೆಕಾಯಿಯ ಈ ಚಟ್ನಿ ಎಂದಾದರು ಸವಿದಿದ್ದೀರಾ? ಈ ರುಚಿ ಚಟ್ನಿ ಮಾಡಿ ನೋಡಿ..!!
ನೀವು ಊಟಕ್ಕೆ ಬೆಂಡೆಕಾಯಿ ಪಲ್ಯ ಯಾವಾಗಲು ಮಾಡಿ ಸವಿದಿರುತ್ತೀರಿ. ವೆಜ್ ಪ್ರಿಯರು ಯಾವಾಗಲು ಬೆಂಡೆಕಾಯಿ ಸಾಂಬಾರ್, ಹಾಗೂ ಪಲ್ಯವನ್ನು ಸವಿಯಲು ಇಷ್ಟಪಡುತ್ತಾರೆ. ಹಾಗೆ ಬೆಂಡೆಕಾಯಿ ಪಲ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಹಬ್ಬ ಹರಿದಿನ ಮಾತ್ರವಲ್ಲ ನಿತ್ಯ ಊಟದ ಜೊತೆಗೆ ಬೆಂಡೆಕಾಯಿ ಪಲ್ಯ, ಸಾಂಬಾರ್ ಮಾಡುವುದು ನೋಡಬಹುದು.
ಆದ್ರೆ ನೀವು ಎಂದಾದ್ರು ಈ ಬೆಂಡೆಕಾಯಿ ಚಟ್ನಿ ಮಾಡಿ ಸವಿದಿದ್ದೀರಾ? ಹೌದು ಬೆಂಡೆಕಾಯಿಯ ಚಟ್ನಿ ಮಾಡಿ ಸವಿದರೆ ಅದರ ರುಚಿಗೆ ಫಿದಾ ಆಗುತ್ತೀರಿ. ಬೆಂಡೆಕಾಯಿ ಚಟ್ನಿ ಮಾಡಿದ್ರೆ ಊಟದ ಜೊತೆಗೆ ಯಾವುದೇ ತಿಂಡಿ ಮಾಡಿದ್ರು ಕೂಡ ಅದ್ಭುತ ರುಚಿ ನೀಡಲಿದೆ. ಅಲ್ಲದೆ ಬೆಂಡೆಕಾಯಿ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮವಾಗಿದೆ.

ನೀರಿನಲ್ಲಿ ಬೆಂಡೆಕಾಯಿ ಕತ್ತರಿಸಿ ಹಾಕಿರ ರಾತ್ರಿ ಹಾಗೆಯೇ ಇಟ್ಟು ಬೆಳಗ್ಗೆ ಆ ನೀರನ್ನು ಕುಡಿದರೆ ದೇಹಕ್ಕೆ ಬಹಳ ಉತ್ತಮ. ಇದರಿಂದ ನಿಮ್ಮ ದೇಹ ತಂಪಾಗಲಿದೆ. ಬೆಂಡೆಕಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಅಪಾರವಾಗಿ ಕಂಡು ಬರುತ್ತದೆ. ಇದು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗಲಿದೆ. ಇಷ್ಟೆಲ್ಲಾ ಲಾಭಗಳ ಹೊಂದಿರುವ ಬೆಂಡೆಕಾಯಿಯ ಖಾದ್ಯ ಕುರಿತು ನಾವು ತಿಳಿದುಕೊಳ್ಳೋಣ.
ನಾವಿಂದು ಊಟ, ತಿಂಡಿಗೆ ಬೆಂಡೆಕಾಯಿ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ? ಬೆಂಡೆಕಾಯಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೆಂಡೆಕಾಯಿ ಚಟ್ನಿ ಮಾಡಲು ಯಾವಲ್ಲಾ ವಸ್ತುಗಳು ಬೇಕು?
- ಬೆಂಡೆಕಾಯಿ
- ಈರುಳ್ಳಿ
- ಟೊಮೊಟೋ
- ಬೆಳ್ಳುಳ್ಳಿ
- ಹಸಿ ಮೆಣಸಿನಕಾಯಿ
- ಹುಣಸೆ ಹಣ್ಣು
- ಬೆಲ್ಲ
- ಅರಿಶಿನ ಪುಡಿ
- ಎಣ್ಣೆ
- ಸಾಸಿವೆ
- ಕರಿಬೇವಿನ ಸೊಪ್ಪು
- ಒಣ ಮೆಣಸು
- ಉಪ್ಪು
ಬೆಂಡೆಕಾಯಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಮಾಡಿಕೊಳ್ಳಿ. ನಂತರ ಇದಕ್ಕೆ ಬೆಳ್ಳುಳ್ಳಿ, 8 ಹಸಿ ಮೆಣಸು, ಈರುಳ್ಳಿ ಕೂಡ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ 2 ಟೊಮೆಟೋ, ಅರಶಿಣ ಪುಡಿ, ಹಾಗೆ ಉಪ್ಪು ಸಹ ಹಾಕಿಕೊಂಡು 4ರಿಂದ 5 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈಗ ಸಣ್ಣ ನಿಂಬೆ ಗಾತ್ರದ ಹುಣಸೆ ಹುಳಿ, ಸ್ವಲ್ಪ ಬೆಲ್ಲ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಫ್ರೈ ಆಗಲು ಬಿಡಿ. 1 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ನಂತರ ಎಲ್ಲಾ ಪದಾರ್ಥಗಳು ತಣ್ಣಗಾಗಲು ಬಿಡಿ. ಈಗ ಮತ್ತೊಂದು ಕಡೆ ಪಾತ್ರೆ ಇಟ್ಟು ಅದರಲ್ಲಿ ಬೆಂಡೆಕಾಯಿ ಹುರಿದುಕೊಳ್ಳಬೇಕು. ಬೆಂಡೆಕಾಯಿಯನ್ನು ಕತ್ತರಿಸಿಕೊಂಡು ಬಳಿಕ ಈ ಪಾತ್ರೆಗೆ ಹಾಕಿ 1 ಸ್ಪೂನ್ ಎಣ್ಣೆ ಹಾಕಿ 10 ನಿಮಿಷ ಹುರಿದುಕೊಳ್ಳಬೇಕು.
ಈಗ ಫ್ರೈ ಮಾಡಿದ ಬೆಂಡೆಕಾಯಿಯನ್ನು ಮೊದಲು ಬಾಣಲೆಯಲ್ಲಿ ಫ್ರೈ ಮಾಡಿದ ಪದಾರ್ಥಗಳೊಂದಿಗೆ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ಎಲ್ಲಾ ಪದಾರ್ಥಗಳು ಸಂಪೂರ್ಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಹಾರ್ಗೆ ಹಾಕಿಕೊಂಡು ಸ್ವಲ್ಪವೇ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಇಷ್ಟಾದರೆ ಸಾಕು ಚಟ್ನಿ ನಿಮ್ಮ ಮುಂದೆ ರೆಡಿಯಾಗಿರುತ್ತೆ. ಹಾಗೆ ಇದಕ್ಕೆ ಒಗ್ಗರಣೆ ಬೇಕಾದರೆ ಹಾಕಿಕೊಳ್ಳಬಹುವು ಇಲ್ಲವೆ ಹಾಗೆ ಸವಿಯಬಹುದು. ನೀವು ಕೂಡ ಈ ರೀತಿಯ ಚಟ್ನಿಯನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications