Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಕಡಲೆ ಹಿಟ್ಟು ಬಳಸಿ ಬೆಂಡೆಕಾಯಿ ಪಲ್ಯ ಮಾಡಿ..! ಈ ರುಚಿ ನೀವೆಂದು ಮರೆಯಲ್ಲ..!
ಊಟದ ಜೊತೆಗೆ ಒಂದು ತರಕಾರಿಯ ಪಲ್ಯ ಒರಬೇಕು ಇಲ್ಲವೆ ಊಟಕ್ಕೆ ಒಳ್ಳೆಯ ಸಾಂಬಾರ ಇರಬೇಕು. ಆದ್ರೆ ಊಟ ಹಾಗೂ ತಿಂಡಿಗೆ ಒಳ್ಳೆಯ ಪಲ್ಯ ಇದ್ದರಂತು ಆ ರುಚಿಯೇ ಬೇರೆ. ಊಟಕ್ಕೆ ಬೆಂಡೆಕಾಯಿ ಪಲ್ಯ ಹಾಗೂ ಚಪಾತಿ, ಇಡ್ಲಿ, ದೋಸೆಗೂ ಈ ಬೆಂಡೆಕಾಯಿ ಪಲ್ಯ ಹೇಳಿ ಮಾಡಿಸಿದ ಖಾದ್ಯ. ಬೆಂಡೆಕಾಯಿ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಹಾರವಾಗಿದೆ.
ಆದರೆ ಬೆಂಡೆಕಾಯಿ ಖಾದ್ಯ ಮಾಡುವಾಗ ಅದು ಲೋಳೆಯಾಗುತ್ತೆ ಎಂಬ ಕಾರಣಕ್ಕೆ ಹಲವರು ಮಾಡುವುದಿಲ್ಲ. ಮತ್ತೆ ಕೆಲವರು ಇದನ್ನು ತಿನ್ನುಲು ಹಿಂದೇಟು ಹಾಕುತ್ತಾರೆ. ಬೆಂಡೆಕಾಯಿ ಖಾದ್ಯವನ್ನ ಒಂಚೂರು ಲೋಳೆ ಇಲ್ಲದೆ. ಅತ್ಯಂತ ರುಚಿಕರವಾಗಿ ಮಾಡಬಹುದು.

ಹಾಗಾದ್ರೆ ಊಟ, ತಿಂಡಿಗೆ ವಿಶೇಷ ಶೈಲಿಯಲ್ಲಿ ರುಚಿ ರುಚಿಯ ಬೆಂಡೆಕಾಯಿ ಪಲ್ಯ ಮಾಡುವುದು ಹೇಗೆ? ಬೆಂಡೆಕಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳೇನು? ಬೆಂಡೆಕಾಯಿ ಪಲ್ಯ ಮಾಡುವ ವಿಧಾನ ಏನು? ಮಾಡುವ ಕ್ರಮ ಹಾಗು ಸಮಯ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಂಡೆಕಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬೆಂಡೆಕಾಯಿ
- ಗರಂ ಮಸಾಲ
- ಕಡಲೆ ಹಿಟ್ಟು
- ಅರಶಿನ
- ಖಾರದ ಪುಡಿ
- ಧನಿಯ
- ತೆಂಗಿನ ಕಾಯಿ ತುರಿ
- ಮೊಸರು
- ಸಾಸಿವೆ
- ಜೀರಿಗೆ
- ಈರುಳ್ಳಿ
- ಉಪ್ಪು
- ಎಣ್ಣೆ
ಬೆಂಡೆಕಾಯಿ ಪಲ್ಯ ಮಾಡುವ ವಿಧಾನ
ಬೆಂಡೆಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಏಕೆಂದರೆ ಸಣ್ಣದಾಗಿ ಕತ್ತರಿಸಿಕೊಂಡಾಗ ಬೇಗ ಬೇಯುತ್ತದೆ. ಎಳೆ ಬೆಂಡೆಕಾಯಿಯನ್ನು ಆಯ್ದು ತರಬೇಕು. ಈ ಬೆಂಡೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಇಡಬೇಕು. ಈಗ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಕತ್ತರಿಸಿಕೊಂಡ ಬೆಂಡೆಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.
ಹೀಗೆ ಫ್ರೈ ಮಾಡಿಕೊಳ್ಳುವುದರಿಂದ ಬೆಂಡೆಕಾಯಿ ಲೋಳೆಯಾಗಿರುವುದಿಲ್ಲ. ಗರಂ ಗರಂ ಆಗಿರಲಿದೆ. ಒಂದು ಬೌಲ್ನಲ್ಲಿ ಕಡಲೆ ಹಿಟ್ಟು, ಅರಶೀನ ಪುಡಿ, ಉಪ್ಪು ಹಾಕಿಕೊಂಡಿ ಹಿಟ್ಟಿನಂತಾಗುವಂತೆ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಬೆಣಸಿನ ಬಜ್ಜಿಗೆ ಮಾಡುವಂತೆ ಹಿಟ್ಟಿನಂತೆ ಮಾಡಿಕೊಳ್ಳಿ.
ಈ ಹಿಟ್ಟನ್ನು ಫ್ರೈ ಮಾಡಿಕೊಂಡಿರುವ ಬೆಂಡೆಕಾಯಿಗೆ ಈ ಮಿಕ್ಸ್ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಒಂದು ಬೌಲ್ಗೆ ಗಟ್ಟಿ ಮೊಸರು, ಧನಿಯ, ಖಾರದ ಪುಡಿ, ಗರಂ ಮಸಾಲ, ತೆಂಗಿನ ಕಾಯಿ ತುರಿ, ಉಪ್ಪು ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ. ಈಗ ಮತ್ತೊಂದು ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಇದಕ್ಕೆ ಸಾಸಿವೆ, ಜೀರಿಗೆ, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಮೊಸರು ಹಾಕಿ ಮಿಕ್ಸ್ ಮಾಡಿಕೊಂಡ ಮಿಶ್ರಣವನ್ನು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಹಿಟ್ಟಿನಿಂದ ಮಿಕ್ಸ್ ಮಾಡಿರುವ ಬೆಂಡೆಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಕೊನೆಯಾದಗಿ ಕೊತ್ತಂಬರಿ ಸೊಪ್ಪು ಹಾಕಿ ಒಲೆಯಿಂದ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೊಸ ರುಚಿಯ ಬೆಂಡೆಕಾಯಿ ಪಲ್ಯ ರೆಡಿಯಾಗಿರುತ್ತದೆ. ಇದನ್ನು ಊಟ, ತಿಂಡಿಗೆ ಬಿಸಿಯಾಗಿದ್ದಾಗಲೇ ಸವಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ.
ಬೆಂಡೆಯಲ್ಲಿರುವ ಯೂಜಿನಾಲ್ (Eugenol) ಎಂಬ ಪೋಷಕಾಂಶವು ಸಕ್ಕರೆಯನ್ನು ಕರಗಿಸುವ ಕ್ರಿಯೆಯನ್ನು ನಿಧಾನಗೊಳಿಸಿ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಿ ಸಕ್ಕರೆಯ ಸದ್ಬಳಕೆಗೆ ಸಹಕರಿಸುತ್ತದೆ. ಇದಲ್ಲದೆ ಬೆಂಡೆಕಾಯಿಯಲ್ಲಿ ಹಲವು ರೀತಿ ಆರೋಗ್ಯಕರ ಅಂಶಗಳಿವೆ.
ಕೆಲವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತುಂಬಿರುತ್ತದೆ. ಅಂತವರು ಪತ್ಯ ಮಾಡಬೇಕಾಗುತ್ತದೆ. ಈ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಅವರು ಇನ್ನಿಲ್ಲದ ಆಹಾರ ಕ್ರಮ ಅನುಸರಿಬೇಕಾಗುತ್ತದೆ. ಅಸಂತವರು ಸಹ ಈ ಬೆಂಡೆಕಾಯಿಯನ್ನು ಧೈರ್ಯವಾಗಿ ಸವಿಯಬಹುದು. ಬೆಂಡೆಯಲ್ಲಿ ಯಾವುದೇ ಕೊಲೆಸ್ಟ್ರಾಲ್ ಆಗಲೀ ಕೊಲೆಸ್ಟ್ರಾಲ್ ಉಂಟುಮಾಡುವ ಕಣಗಳಾಗಲೀ ಇಲ್ಲ.



Click it and Unblock the Notifications