Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಜಸ್ಟ್ 10 ನಿಮಿಷದಲ್ಲಿ ಎರಡು ಸಮಯಕ್ಕೆ ಬೇಕಾಗುವಷ್ಟು ಬೆಂಡೆಕಾಯಿ ಗೊಜ್ಜು ಮಾಡಿ!
ನೀವು ಬೆಳಗ್ಗೆ ತಿಂಡಿಯೊಂದಿಗೆ ಹಾಗೆ ಮಧ್ಯಾಹ್ನದ ಊಟದೊಂದಿಗೆ ಒಂದೇ ಪಲ್ಯ, ಚಟ್ನಿಯನ್ನು ಸವಿಯಲು ಇಷ್ಟಪಡುವ ಮಂದಿಯಾಗಿದ್ದರೆ ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಚಪಾತಿ, ದೋಸೆ, ಇಡ್ಲಿ ಅಂತಹ ತಿಂಡಿ ಮಾಡಿದಾಗ ಚಟ್ನಿ, ಪಲ್ಯ, ಗ್ರೇವಿಯಂತಹ ರುಚಿ ರುಚಿಯ ಖಾದ್ಯಗಳ ಮಾಡಿರುತ್ತೀರಿ. ಅದ್ರಲ್ಲೂ ಮಧ್ಯಾಹ್ನದ ಊಟಕ್ಕೂ ಕೂಡ ಈ ಖಾದ್ಯ ರುಚಿ ನೀಡಬೇಕು ಎಂದು ಬಯಸುತ್ತೀರಿ. ಹೀಗಾಗಿ ಒಂದೇ ಬಾರಿಗೆ ನೀವು ಈ ಖಾದ್ಯ ಮಾಡಿ ಎರಡು ಸಮಯ ಸವಿಯಬಹುದು.
ಇಂತಹ ಖಾದ್ಯಗಳ ಪೈಕಿ ನಾವಿಂದು ಸುಲಭವಾಗಿ ಮಾಡಬಹುದಾದ ಬೆಂಡೆಕಾಯಿ ಗ್ರೇವಿ ಅಥವಾ ಗೊಜ್ಜನ್ನು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಸುಲಭವಾಗಿ ಮಾಡಬಹುದಾದ ಈ ಬೆಂಡೆಕಾಯಿ ಗೊಜ್ಜು ಎಲ್ಲಾ ತಿಂಡಿಯೊಂದಿಗೂ ಅದ್ಭುತ ರುಚಿ ನೀಡಲಿದೆ. ಹಾಗೆ ಊಟದೊಂದಿಗೆ ಕೂಡ ರುಚಿ ಹೆಚ್ಚಿಸಲಿದೆ. ಹೀಗಾಗಿ ಒಂದು ಹೊತ್ತು ಮಾಡಿದ್ರೆ ಎರಡು ಸಮಯ ಸವಿಯಬಹುದು.

ಆದ್ರೆ ಬೆಂಡೆಕಾಯಿ ಖಾದ್ಯಗಳು ಅಂದ್ರೆ ಹಲವರಿಗೆ ಇಷ್ಟವಾಗೊಲ್ಲ. ಏಕೆಂದರೆ ಅದರ ನೋಳೆಯಂತಹ ರಚನೆಯಿಂದ ಕೆಲವರು ಅದನ್ನು ಸೇವಿಸಲು ಇಷ್ಟಪಡದೆ ಇರಬಹುದು. ಆದ್ರೆ ನಾವಿಂದು ವಿಭಿನ್ನವಾಗಿ ಈ ಬೆಂಡೆಕಾಯಿ ಗ್ರೇವಿ, ಗೊಜ್ಜು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. 10 ನಿಮಿಷದೊಳಗೆ ಈ ಬೆಂಡೆಕಾಯಿ ಗೊಜ್ಜು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡು ವಿಧಾನ ತಿಳಿದುಕೊಳ್ಳಿ.
ಬೆಂಡೆಕಾಯಿ ಗೊಜ್ಜು ಮಾಡಲು ಬೇಕಾಗುವ ವಸ್ತುಗಳು
- ಬೆಂಡೆಕಾಯಿ
- ಜೀರಿಗೆ
- ಈರುಳ್ಳಿ- 3
- ಟೊಮೆಟೋ- 2
- ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ
- ಅರಿಶಿನ ಪುಡಿ-1/2 ಚಮಚ
- ಗರಂ ಮಸಾಲ ಪುಡಿ-1 ಚಮಚ
- ಕೆಂಪು ಮೆಣಸಿನ ಪುಡಿ-1 ಚಮಚ
- ಧನಿಯ ಪುಡಿ-1 ಚಮಚ
- ಕೊತ್ತಂಬರಿ ಸೊಪ್ಪು-1 ಚಮಚ
- ಮೊಸರು-1/2 ಕಪ್
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನವೇನು?
ಮೊದಲಿಗೆ ಬೆಂಡೆಕಾಯಿಯನ್ನು ತೊಳೆದು ಬಟ್ಟೆಯಿಂದ ಒರೆಸಿಕೊಳ್ಳಬೇಕು. ಅನಂತರ ಪಲ್ಯಕ್ಕೆ ಬೇಕಾದ ರೀತಿಯಲ್ಲಿ ಸಣ್ಣದಾಗಿ ಹೆಚ್ಚಿಕೊಂಡು ಅದನ್ನು ಬಾಣಲೆಯಲ್ಲಿ ಇಟ್ಟು ಹುರಿದುಕೊಳ್ಳಬೇಕು. ಎಣ್ಣೆ ಹಾಕದೆಯೇ ಹಾಗೆಯೇ ಹುರಿದುಕೊಳ್ಳಿ. ಇದರಿಂದ ಬೆಂಡೆಕಾಯಿ ನೋಳೆ ಇಲ್ಲದಂತೆ ಗರಿಗರಿಯಾಗುತ್ತದೆ. ಎಣ್ಣೆ ಬದಲಾಗಿ ಉಪ್ಪು ಹಾಕಿಕೊಂಡು ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ ಎಣ್ಣೆ ಹಾಕಿಕೊಂಡು ಇದಕ್ಕೆ ಸಾಸಿವೆ, ಜೀರಿಗೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ 2 ಟೊಮೆಟೋ, ಉಪ್ಪು, ಹಾಕಿ ಮಿಕ್ಸ್ ಮಾಡಿ ಮತ್ತೆ 1 ನಿಮಿಷ ಫ್ರೈ ಆಗಲು ಬಿಡಿ. ಅನಂತರ ಅರಶಿಣ, ಗರಂ ಮಸಾಲ, ಖಾರದ ಪುಡಿ, ಧನಿಯ ಪುಡಿ ಹಾಕಿ ಮತ್ತೆ ಫ್ರೈ ಮಾಡಿ.
1 ನಿಮಿಷ ಬಿಟ್ಟು ಇದಕ್ಕೆ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿ. ನೀರು ಹಾಕಿದ ಬಳಿಕ ಕುದಿಬರಲು ಬಿಡಿ. ಸಣ್ಣದಾಗಿ ಕುದಿಬರುವಾಗ ಅರ್ಧ ಕಪ್ ಮೊಸರು ಹಾಕಿಕೊಳ್ಳಿ. ಹಾಗೆ ಮಿಕ್ಸ್ ಮಾಡುತ್ತಾ 2 ನಿಮಿಷ ಬಿಡಿ. ಈಗ ಹುರಿದುಕೊಂಡಿದ್ದ ಬೆಂಡೆಕಾಯಿಯನ್ನು ಇದಕ್ಕೆ ಹಾಕಿ 5 ನಿಮಿಷ ಬಿಡಿ. ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ.
5 ನಿಮಿಷ ಬಿಟ್ಟು ಒಲೆ ಆಫ್ ಮಾಡುವ ಮುನ್ನ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಸವಿಯಲು ನೀಡಿ. ಇಷ್ಟಾದರೆ ನಿಮ್ಮ ಮುಂದೆ ಬೆಂಡೆಕಾಯಿ ಗೊಜ್ಜು, ಸಿದ್ದವಾಗುತ್ತೆ. ನೀವು ಕೂಡ ಈ ರುಚಿಯ ಬೆಂಡೆಕಾಯಿ ರೆಸಿಪಿ ಮನೆಯಲ್ಲಿ ಮಾಡಿ ಸವಿದು ನೋಡಿ.



Click it and Unblock the Notifications
