Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಅದ್ಭುತ ರುಚಿಯ ಬೆಂಡೆಕಾಯಿ ಮಸಾಲೆ ವಡೆ ಮಾಡಿ ನೋಡಿ..! ಹೇಗೆ ಮಾಡೋದು ಗೊತ್ತಾ?
ಸಂಜೆ ಟೈಮಲ್ಲಿ ನಾವು ಏನಾದರು ಕರಿದ ತಿಂಡಿ ಇದ್ದರೆ ಬಾಯಿ ಚಪ್ಪರಿಸಿಕೊಂಡು ಸವಿಯುತ್ತೇವೆ. ಏಕೆಂದರೆ ಟೀ ಟೈಮಲ್ಲಿ ಏನಾದರು ತಿಂಡಿ ಇದ್ದರೇನೇ ಟೀಗೂ ಬೆಲೆ, ರುಚಿಯೂ ಹೆಚ್ಚು. ಇದಕ್ಕಾಗಿ ಬೇಕರಿ ತಿಂಡಿಗಳನ್ನು ನಾವು ಸವಿದಿರುತ್ತೇವೆ. ಹಾಗೆ ಸಿಕ್ಕ ಸಿಕ್ಕ ತಿಂಡಿಗಳನ್ನ ಸವಿಯಲು ಮುಂದಾಗಿರುತ್ತೇವೆ.
ಕರಿದ ತಿಂಡಿ ಅಂದ ಕೂಡಲೇ ನಿಮಗೆ ಹತ್ತಾರು ತಿಂಡಿ ನೆನಪಾಗಬಹುದು, ಆದ್ರೆ ನಾವಿಂದು ಮಸಾಲೆ ವಡೆ ಕುರಿತು ತಿಳಿಯೋಣ. ಆದ್ರೆ ಇದು ಸಾಮಾನ್ಯ ವಡೆಯಲ್ಲ ಸ್ಪೆಷಲ್ ರುಚಿಯ ಸ್ಪೆಷಲ್ ರೆಸಿಪಿಯಾದ ಬೆಂಡೆಕಾಯಿ ವಡೆ ಮಾಡುವುದು ಹೇಗೆ ನೋಡೋಣ. ರುಚಿಯಲ್ಲಿ ಬೆಂಡೆಕಾಯಿ ಪಲ್ಯಕ್ಕೆ ಹಾಗೂ ಸಾಂಬಾರ್ ಮಾಡಲು ಬಳಸಿರುತ್ತೇವೆ.

ಬೆಂಡೆಕಾಯಿ ಆರೋಗ್ಯಕ್ಕೂ ಬಹಳ ಉತ್ತಮವಾದ ತರಕಾರಿಯಾಗಿದೆ. ಇದರ ಪಲ್ಯ ಎಷ್ಟು ರುಚಿಕರ ಎಂಬುದನ್ನು ನಮಗೆಲ್ಲಾ ತಿಳಿದೇ ಇದೆ. ಆದ್ರೆ ಎಂದಾದ್ರು ಈ ಬೆಂಡೆಕಾಯಿ ವಡೆ ಮಾಡಿ ಸವಿದಿದ್ದೀರಾ? ಹೌದು ಈ ತರಕಾರಿಯಲ್ಲಿ ರುಚಿಕರವಾದ ವಡೆ ಮಾಡಬಹುದು. ಹಾಗಾದ್ರೆ ನಾವಿಂದು ಈ ವಿಶೇಷ ಮಸಾಲೆ ವಡೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಬೆಂಡೆಕಾಯಿ ವಡೆ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು?, ಮಾಡುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಂಡೆಕಾಯಿ ಮಸಾಲೆ ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಬೆಂಡೆಕಾಯಿ-ಕಾಲು ಕೆಜಿ
- ಕಡಲೆ ಬೇಳೆ- 1 ಕಪ್
- ಒಣ ಮೆಣಸು - 2
- ಹಸಿರು ಮೆಣಸಿನಕಾಯಿ - 2
- ಜೀರಿಗೆ
- ಸೋಂಕಾಳು - 1 ಟೀಸ್ಪೂನ್
- ಶುಂಠಿ - 1 ಇಂಚು
- ಇಂಗು - 1/4 ಟೀಸ್ಪೂನ್
- ಈರುಳ್ಳಿ - 1
- ಕೊತ್ತಂಬರಿ ಸೊಪ್ಪು
- ಕರಿಬೇವು
- ಎಣ್ಣೆ
- ಉಪ್ಪು
ಬೆಂಡೆಕಾಯಿ ಮಸಾಲೆ ವಡೆ ಮಾಡುವುದು ಹೇಗೆ?
ಮೊದಲು ಈ ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಬೌಲ್‌ಗೆ ಹಾಕಿ ಸುಮಾರು 5 ಗಂಟೆ ನೆನೆಡಿಸಬೇಕು. ನಂತರ ನೀರು ತೆಗೆದು ಕಡಲೆ ಬೇಳೆ ಮಾತ್ರ ಎತ್ತಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಜೀರಿಗೆ, ಒಣ ಮೆಣಸು, ಶುಂಠಿ, ಹಸಿ ಮೆಣಸು, ಸೋಂಕಾಳು, ಅರಶಿಣ ಪುಡಿ ಹಾಕಿಕೊಂಡು ಹಾಗೂ ನೆನೆಸಿಟ್ಟ ಕಡಲೆ ಬೇಳೆಯಲ್ಲಿ ಸ್ವಲ್ಪ ಮಾತ್ರ ತೆಗದುಕೊಂಡು ಹಾಕಿಕೊಂಡು ರುಬ್ಬಿಕೊಳ್ಳಬೇಕು.
ನುಣ್ಣಗೆ ರುಬ್ಬಿಕೊಳ್ಳದೆ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಉಳಿದ ಎಲ್ಲಾ ಕಡಲೆ ಬೇಳೆ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಿ. ತರಿ ತರಿಯಾಗಿ ಪುಡಿ ಪುಡಿ ಮಾಡಿಕೊಳ್ಳಿ. ಈಗ ಎಳೆಯಾದ ಬೆಂಡೆಕಾಯಿಯನ್ನು ತೊಳೆದುಕೊಂಡು ಸಣ್ಣಗೆ ಕತ್ತರಿಸಿಕೊಳ್ಳಬೇಕು. ಎಷ್ಟು ಸಣ್ಣಗೆ ಸಾಧ್ಯವೋ ಅಷ್ಟು ಸಣ್ಣದಾಗಿ ಕತ್ತರಿಸಿಕೊಳ್ಳಿ.
ನಂತರ ಇದನ್ನು ಮಿಕ್ಸಿ ಜಾರ್‌ನಿಂದ ತೆಗೆದಿಟ್ಟ ಹಿಟ್ಟಿಗೆ ಹಾಕಿಕೊಂಡು ಕಲಸಿ. ಇದಕ್ಕೆ ಈರುಳ್ಳಿ, ಕೊತ್ತಂಬರಿ, ಉಪ್ಪು, ಇಂಗು ಹಾಕಿಕೊಂಡು ಚೆನ್ನಾಗಿ ಹಿಸುಕಿ ಹಿಸುಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ನೀರು ಹಾಕದೆ ಕಲಸಿಕೊಳ್ಳಬೇಕು. ಮೊದಲು ಎಲ್ಲಾ ಹಿಟ್ಟನ್ನು ತೆಗೆದುಕೊಂಡು ಸಣ್ಣದಾಗಿ ಉಂಡೆ ಮಾಡಿಕೊಳ್ಳಿ.
ನಂತರ ಕೈಯಿಂದ ಸಣ್ಣದಾಗಿ ತಟ್ಟಿ ವಡೆ ಮಾಡಿ, ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣ ಕಾದ ಬಳಿಕ ಒಂದೊಂದೇ ವಡೆಯನ್ನು ಎಣ್ಣೆಯಲ್ಲಿ ಬಿಡಿ. ಬೆಂಡೆಕಾಯಿ ಹಾಕಿರುವುದರಿಂದ ಒಳಗೆ ಚೆನ್ನಾಗಿ ಬೇಯಬೇಕು. ಹೀಗಾಗಿ ಸಣ್ಣ ಉರಿಯಲ್ಲಿ 10 ನಿಮಿಷ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿಕರ ಬೆಂಡೆಕಾಯಿ ವಡೆ ಸಿದ್ಧವಾಗುತ್ತದೆ. ಸವಿಯಲು ಇದು ತುಂಬಾನೆ ರುಚಿಯಾಗಿರುತ್ತದೆ.



Click it and Unblock the Notifications