Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಊಟ-ತಿಂಡಿಗೆ ಬೆಸ್ಟ್ ಈ ಬೆಂಡೆಕಾಯಿ ಚಟ್ನಿ: ನೀವೆಂದೂ ಸವಿದಿರದ ಟೇಸ್ಟ್ ಇದು!
ನೀವು ಬೆಳಗ್ಗೆ ತಿಂಡಿಗೆ ಹಾಗೆ ಊಟದ ಸಮಯದಲ್ಲಿ ಯಾವುದಾದರು ಚಟ್ನಿ ಇದ್ದರೆ ಉತ್ತಮ ಎಂದು ಭಾವಿಸುತ್ತೀರಿ. ಏಕೆಂದರೆ ನೀವು ಯಾವುದೇ ಬ್ರೇಕ್ಫಾಸ್ಟ್ ಮಾಡಿದ್ದರೂ ಅದರೊಂದಿಗೆ ಸವಿಯಲು ರುಚಿ ರುಚಿಯ ಚಟ್ನಿ ಸವಿಯಲು ಬಹಳ ಇಷ್ಟಪಡುತ್ತೀರಿ. ಇನ್ನು ಊಟದ ಜೊತೆಗೂ ಕೂಡ ಚಟ್ನಿ ಅದ್ಭುತ ರುಚಿ ನೀಡಲಿದೆ.
ನೀವು ಹಲವು ಬಗೆಯ ಚಟ್ನಿಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ತರಕಾರಿಯ ಚಟ್ನಿಗಳ ಮಾಡಿ ಸವಿಯೋದು ಕೂಡ ನಿಮಗೆ ಇಷ್ಟವಾಗುತ್ತೆ. ತರಕಾರಿಯಂದ ಮಾಡುವ ಚಟ್ನಿ ಅಂದರೆ ನಿಮಗೆ ಹಲವು ರೀತಿಯ ಚಟ್ನಿ ನೆನಪಿಗೆ ಬರಬಹುದು. ಅದ್ರಲ್ಲೂ ಹೀರೆಕಾಯಿ, ಈರುಳ್ಳಿ, ಟೊಮೆಟೋ, ಬದನೆಕಾಯಿ ಅಂತಹ ಚಟ್ನಿ ಅಂತಹ ಅಪರೂಪದ ತರಕಾರಿ ಚಟ್ನಿ ಮಾಡಿ ಸವಿದಿರಬಹುದು.

ಇನ್ನು ಬೆಂಡೆಕಾಯಿಯಿಂದ ಎಂದಾದರು ಚಟ್ನಿ ಮಾಡಿ ಸವಿದಿದ್ದೀರಾ? ಹೌದು ಬೆಂಡೆಕಾಯಿಯಿಂದ ಮಾಡುವ ಪ್ರತಿಯೊಂದು ಖಾದ್ಯಗಳು ಅದ್ಭುತ ರುಚಿ ನೀಡಲಿವೆ. ಅದ್ರಲ್ಲೂ ನೀವು ಬೆಂಡೆಕಾಯಿ ಪಲ್ಯ, ಗೊಜ್ಜು, ಸಾಂಬಾರ್, ಬೆಂಡೆಕಾಯಿ ಮಸಾಲ ಫ್ರೈ ಕೂಡ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ರುಚಿ ರುಚಿಯ ಬೆಂಡೆಕಾಯಿ ಚಟ್ನಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಬೆಂಡೆಕಾಯಿಯಲ್ಲಿ ಚಟ್ನಿ ಮಾಡಿದ್ರೆ ಊಟ ಹಾಗೆ ತಿಂಡಿ ರುಚಿ ದುಪ್ಪಟ್ಟಾಗೋದು ಖಚಿತ. ಹಾಗಾದ್ರೆ ನಾವಿಂದು ಈ ಬೆಂಡೆಕಾಯಿಯಿಂದ ಮಾಡುವಂತಹ ರುಚಿ ರುಚಿಯ ಚಟ್ನಿಯ ಕುರಿತಾಗಿ ತಿಳಿದುಕೊಳ್ಳೋಣ.
ಬೆಂಡೆಕಾಯಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳಿವು
- ಬೆಂಡೆಕಾಯಿ
- ಕಡಲೆ ಬೇಳೆ
- ಉದ್ದಿನ ಬೇಳೆ
- ಮೆಂತ್ಯ
- ಕೊತ್ತಂಬರಿ ಕಾಳು
- ಒಣ ಮೆಣಸು
- ಇಂಗು
- ಜೀರಿಗೆ
- ಸಾಸಿವೆ
- ಟೊಮೆಟೋ
- ಹುಳಿ
- ಬೆಲ್ಲ
- ಅರಶಿಣ
- ಉಪ್ಪು
- ಎಣ್ಣೆ
- ಕರಿಬೇವು
ಬೆಂಡೆಕಾಯಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಚಮದ ಅಳೆಯಲ್ಲಿ ಕಡಲೆಬೇಳೆ, ಉದ್ದಿನ ಬೇಳೆ, ಕೊತ್ತಂಬರಿ ಕಾಳು, ಜೀರಿಗೆ, ಮೆಂತ್ಯ, ಸಾಸಿವೆ ಹಾಕಿ, ಹಾಗೆ ಒಣ ಮೆಣಸು ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಎಣ್ಣೆ ಹಾಕಿಕೊಳ್ಳದೆ ಈ ಎಲ್ಲಾ ಪದಾರ್ಥಗಳ ಹುರಿದು ಬಾಣಲೆಯಿಂದ ತೆಗೆದಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ ಎಣ್ಣೆ ಹಾಕಿಕೊಂಡು ಬಳಿಕ ತೊಳೆದು ಸಣ್ಣ ವೃತ್ತಾಕಾರವಾಗಿ ಹೆಚ್ಚಿಕೊಂಡಿರುವ ಬೆಂಡೆಕಾಯಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಚೆನ್ನಾಗಿ 3 ನಿಮಿಷ ಹುರಿದ ಬಳಿಕ ಚಿಕ್ಕ ಟೊಮೆಟೋ ಹೆಚ್ಚಿ ಇದಕ್ಕೆ ಹಾಕಿ ಬಳಿಕ ಹುಳಿ, ಚೂರು ಬೆಲ್ಲ, ಅರಶಿಣ, ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ ಹುರಿದುಕೊಳ್ಳಿ.
3 ರಿಂದ 4 ನಿಮಿಷ ಹುರಿದುಕೊಂಡ ಬಳಿಕ ಈಗ ಒಲೆ ಆಫ್ ಮಾಡಿಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಬಾಣಲೆಯಲ್ಲಿದ್ದ ಎಲ್ಲಾ ಪದಾರ್ಥಗಳ ಹಾಕಿಕೊಳ್ಳಿ. ಹಾಗೆ ಮೊದಲು ಹುರಿದುಕೊಂಡಿದ್ದ ಮಸಾಲ ಪದಾರ್ಥಗಳನ್ನು ಕೂಡ ಇದೇ ಮಿಕ್ಸಿ ಜಾರ್ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣ ಹಾಕಿಕೊಂಡು ಸಾಸಿವೆ, ಒಣ ಮೆಣಸು, ಕರಿಬೇವು, ಇಂಗು ಹಾಕಿಕೊಂಡು ಒಂದು ಒಗ್ಗರಣೆ ಮಾಡಿ ಈ ಚಟ್ನಿಯೊಂದಿಗೆ ಬೆರೆಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಬೆಂಡೆಕಾಯಿ ಚಟ್ನಿ ರೆಡಿಯಾಗುತ್ತೆ. ನೀವು ಕೂಡ ಇದನ್ನು ಮಾಡಿ ನೋಡಿ. ಇದನ್ನು ನೀವು ತಿಂಡಿ, ಊಟದ ಜೊತೆಗೂ ಕೂಡ ಸವಿಯಬಹುದು, ಇದು ಎಲ್ಲರಿಗೂ ಇಷ್ಟವಾಗುವಂತಹ ರುಚಿಯಾಗಿರಲಿದೆ. ಮಾಡೋದು ಕೂಡ ತುಂಬಾನೆ ಸುಲಭ.



Click it and Unblock the Notifications