Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಬೆಳಗ್ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಊಟಕ್ಕೆ ಬೆಳ್ಳುಳ್ಳಿ ಮಸಾಲೆ ರೈಸ್.! 2 ನಿಮಿಷದಲ್ಲಿ ರೆಡಿ ಮಾಡಬಹುದು!!
ಬೆಳಗ್ಗೆ ತಿಂಡಿಗೆ, ಮಧ್ಯಾಹ್ನದ ಊಟಕ್ಕೆ ಹಾಗೆ ರಾತ್ರಿ ಊಟದ ಸಮಯದಲ್ಲಿ ಒಂದೊಳ್ಳೆಯ ರೈಸ್‌ನಿಂದ ಮಾಡಿದ ಖಾದ್ಯ ಇದ್ದರೆ ಆ ರುಚಿಗೆ ಮತ್ತಷ್ಟು ಸವಿಯುತ್ತೀರಿ. ರೈಸ್‌ನಲ್ಲಿ ಅದೆಷ್ಟು ಬಗೆಯ ತಿಂಡಿ, ಖಾದ್ಯ ಮಾಡಬಹುದು ಎಂಬುದನ್ನು ನಾವು ತಿಳಿದಿದ್ದೇವೆ. ಪಲಾವ್, ರೈಸ್ ಬಾತ್, ಬಿರಿಯಾನಿ, ಗೀರೈಸ್, ಪುಳಿಯೋಗರೆ, ಚಿತ್ರಾನ್ನ, ಬಿಸಿ ಬೇಳೆ ಬಾತ್‌ನಂತಹ ಬಗೆ ಬಗೆಯ ಖಾದ್ಯ ಮಾಡುತ್ತೇವೆ.
ಹಾಗೆ ರೈಸ್‌ನಿಂದ ಮಾಡುವ ಪ್ರತಿಯೊಂದು ಖಾದ್ಯ ಕೂಡ ರುಚಿಕರ ಆಗಿರುತ್ತೆ. ಬೆಳಗ್ಗೆಯ ಗಡಿಬಿಡಿಯ ಸಮಯದಲ್ಲೂ ಕೂಡ ರೈಸ್‌ನಿಂದ ಥಟ್ ಅಂತ ಹಲವು ರೀತಿಯ ಖಾದ್ಯ ಮಾಡಿ ಸವಿಯುವುದನ್ನು ನಾವು ನೋಡಬಹುದು. ಹೀಗಾಗಿ ಹೆಚ್ಚಾಗಿ ಅನ್ನದಿಂದ ಮಾಡಿದ ತಿಂಡಿ ಮಾಡಿ ಅದನ್ನೇ ಮಧ್ಯಾಹ್ನದ ಬಾಕ್ಸ್‌ಗೆ ಕೊಡುವುದು ಸಾಮಾನ್ಯು. ಮಕ್ಕಳಿಗಾಗಲಿ ಅಥವಾ ಆಫಿಸ್‌ಗೆ ತೆರಳುವವರು ಕೂಡ ಇಂತಹ ತಿಂಡಿಯನ್ನೇ ಹೆಚ್ಚಾಗಿ ಮಾಡುತ್ತಾರೆ.

ನಾವಿಂದು ಸುಲಭವಾಗಿ ಮಾಡುವಂತಹ ಮೂರು ಹೊತ್ತು ಕೂಡ ನಾಲಗೆಗೆ ರುಚಿ ನೀಡುವ ಮಸಾಲೆ ರೈಸ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ರೀತಿಯ ಮಸಾಲ ರೈಸ್ ಮಾಡಿದರೆ ಮನೆ ಮಂದಿಯಲ್ಲ ಒಟ್ಟಿಗೆ ಕುಳಿತು ಸವಿಯುವಂತೆ ಮಾಡುತ್ತೆ. ಹಾಗೆ ನೀವು ಎಷ್ಟು ಹೊತ್ತು ಸವಿದರು ಬೋರ್ ಅನನಿಸೋದಿಲ್ಲ. ಹಾಗೆ ಇದನ್ನು ಮಾಡಲು ಕಡಿಮೆ ವಸ್ತು ಹಾಗೂ ಕಡಿಮೆ ಸಮಯ ಬೇಕಾಗುತ್ತದೆ.
ಹಾಗಾದ್ರೆ ನವಿಂದು ಕಡಿಮೆ ಸಮಯದಲ್ಲಿ ಈ ಮಸಾಲೆ ರೈಸ್ ಮಾಡುವುದು ಹೇಗೆ? ಈ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕಾಗುತ್ತದೆ?, ಮಾಡುವ ಸರಿಯಾದ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಬೆಳ್ಳುಳ್ಳಿ
- ಸಾಸಿವೆ
- ಜೀರಿಗೆ
- ಕರಿಬೇವು
- ಉಪ್ಪು
- ಎಣ್ಣೆ ಅಥವಾ ತುಪ್ಪ
- ಖಾರದ ಪುಡಿ
ಮಸಾಲ ರೈಸ್ ಮಾಡುವ ವಿಧಾನವೇನು?
ಮೊದಲು ಎರಡರಿಂದ ಮೂರು ಬೆಳ್ಳುಳ್ಳಿಯ ಸಿಪ್ಪೆ ಬಿಡಿಸಿಕೊಂಡು ಅದನ್ನು ಒಂದು ಕುಟ್ಟಾಣಿಯಲ್ಲಿ ಜಜ್ಜಿ ಪುಡಿ ಮಾಡಬೇಕು. ಇಲ್ಲವೆ ಹಾಗೆ ಜಜ್ಜಿಕೊಳ್ಳಬಹುದು. ಇದಕ್ಕೆ ಒಂದು ಸ್ಪೂನ್ ಜೀರಿಗೆ ಕೂಡ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಇದಕ್ಕಿಂತ ಸರಳ ವಿಧಾನ ಅಂದರೆ ನೀವು ಸಣ್ಣ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಜೀರಿಗೆ, ಉಪ್ಪು, ಖಾರದ ಪುಡಿ ಹಾಕಿಕೊಂಡು ರುಬ್ಬಿಕೊಳ್ಳಿ. ತರಿ ತರಿಯಾಗಿ ರುಬ್ಬಿದರೆ ಸಾಕು. ಅನಂತರ ಇದನ್ನು ತೆಗೆದು ಇನ್ನೊಂದು ಬೌಲ್‌ಗೆ ಹಾಕಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಂಡು ಬಿಸಿಯಾಗಲು ಬಿಡಿ. ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ. ಅನಂತರ ಇದಕ್ಕೆ ಮೊದಲು ರುಬ್ಬಿಕೊಂಡಿರುವ ಬೆಳ್ಳುಳ್ಳಿ ಮಸಾಲೆಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. 1 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಒಲೆಯನ್ನು ಸಣ್ಣದಾಗಿ ಮಾಡಿಕೊಳ್ಳಿ. ಈ ಗೊಜ್ಜು ಸ್ವಲ್ಪ ಜಾಸ್ತಿ ಮಾಡಿಕೊಂಡು ಎತ್ತಿಟ್ಟುಕೊಂಡು ನಿಮಗೆ ಬೇಕಾದಾಗ ಬಳಸಬಹುದು.
ಈಗ ಒಂದು ಬೌಲ್‌ಗೆ ಅನ್ನವನ್ನು ಹಾಕಿಟ್ಟು ಸ್ವಲ್ಪ ಪುಡಿ ಮಾಡಿಕೊಂಡು ನಿಮಗೆ ಎಷ್ಟು ಬೇಕೋ ಅಷ್ಟು ಈ ಗೊಜ್ಜನ್ನು ಅನ್ನಕ್ಕೆ ಸೇರಿಸಿಕೊಳ್ಳಬೇಕು. ಈ ಮಸಾಲೆ ಚೆನ್ನಾಗಿ ಹಿಡಿಯುವಂತೆ ತಿರುಗಿಸಿಕೊಳ್ಳುತ್ತಾ ಇದ್ದರೆ ನಿಮ್ಮ ಮುಂದೆ ಬೆಳ್ಳುಳ್ಳಿ ಮಸಾಲೆ ರೈಸ್ ರೆಡಿಯಾಗುತ್ತದೆ. ಮಾಡುವುದು ಬಹಳ ಸುಲಭ, ಹಾಗೆ ತಕ್ಷಣವೇ ರೆಡಿ ಮಾಡಬಹುದು ನೀವು ಕೂಡ ಇದನ್ನು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications