Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಬ್ಬದಲ್ಲಿ ಮಾಡಿ ನೋಡಿ ಸ್ಪೆಷಲ್ ರುಚಿಯ ಬೆಲ್ಲದ ಕರ್ಜಿಕಾಯಿ.!
ಸೆಪ್ಟೆಂಬರ್ ಆರಂಭವಾದರೆ ಸಾಲು ಸಾಲು ಹಬ್ಬಗಳು ಬರುತ್ತವೆ. ಆರಂಭದಲ್ಲಿ ಗಣೇಶ ಹಬ್ಬಕ್ಕೆ ಸಿದ್ಧತೆ ನಡೆದಿದೆ. ಈ ಹಬ್ಬ ಮುಗಿಯುತ್ತಿದ್ದಂತೆ ದಸರಾ ದೀಪಾವಳಿ ಹೀಗೆ ಸಾಲು ಸಾಲು ಹಿಂದೂ ಹಬ್ಬಗಳಿವೆ. ಹಬ್ಬ ಅಂದ್ರೆ ಇಲ್ಲೊಂದು ಸಿಹಿ ತಿಂಡಿ ಇರಲೇಬೇಕು. ಹಾಗೆ ಗಣೇಶ ಹಬ್ಬಕ್ಕೂ ಸೇರಿ ನಾವು ಎಲ್ಲಾ ಹಬ್ಬಕ್ಕೂ ಸಾಮಾನ್ಯವಾಗಿ ಹೋಳಿಗೆ, ಮೋದಕ, ಕರ್ಜಿಕಾಯಿ ಮಾಡಿರುತ್ತೇವೆ.
ಏಕೆಂದರೆ ಕರ್ಜಿಕಾಯಿ ಮಾಡೋದು ತುಂಬಾನೆ ಸುಲಭ, ಹಾಗೆ ಹೋಳಿಗೆ, ಲಾಡು, ಪಾಯಸದಂತಹ ಸಿಹಿ ತಿಂಡಿ ಮಾಡಿಯೇ ಮಾಡುತ್ತೇವೆ. ಆದ್ರೆ ಎಲ್ಲಾ ಹಬ್ಬದಲ್ಲೂ ಅತಿಥಿಯಂತೆ ಮನೆಯಲ್ಲಿ ಇರೋದು ಅಂದ್ರೆ ಅದು ಕರ್ಜಿಕಾಯಿ ಸಿಹಿ ತಿಂಡಿ. ಕೆಲವರ ಮನೆಯಲ್ಲಿ ಈ ಸಿಹಿ ತಿಂಡಿ ಇಲ್ಲದೆ ಹಬ್ಬ ಪೂರ್ಣವಾಗುವುದೇ ಇಲ್ಲ. ಅವರಿಗೆ ಕರ್ಜಿಕಾಯಿ ಮಾಡೋದು ಅಂದ್ರೆ ಅಷ್ಟೊಂದು ಇಷ್ಟವಾಗಿರುತ್ತೆ.

ಇನ್ನು ಕರ್ಜಿಕಾಯಿಯನ್ನು ಹಲವು ರೀತಿಯಲ್ಲಿ ಮಾಡಬಹುದು ಎಂಬುದು ನಮಗೆ ಗೊತ್ತು. ಕೆಲವೊಂದು ಎಷ್ಟೊಂದು ರುಚಿಯಾಗಿರುತ್ತೆ ಅಂದ್ರೆ ಮನೆಯಲ್ಲಿ ಎಲ್ಲರು ಕುಳಿತು ಸವಿಯುತ್ತಾರೆ. ಹಾಗಾದ್ರೆ ನಾವಿಂದು ಹಬ್ಬಕ್ಕೆ ವಿಶೇಷ ರುಚಿಯ ಕರ್ಜಿಕಾಯಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಈ ಕರ್ಜಿಕಾಯಿ ಮಾಡಲು ಬೇಕಾಗುವ ವಸ್ತುಗಳೇನು? ಕರ್ಜಿಕಾಯಿ ಮಾಡುವ ವಿಧಾನವೇನು? ಯಾವೆಲ್ಲಾ ಮುನ್ನೆಚ್ಚರಿಕೆ ಇರಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಲ್ಲದ ಕರ್ಜಿಕಾಯಿ ತಿಂಡಿ ಮಾಡಲು ಬೇಕಾಗುವ ವಸ್ತುಗಳು
- ಮೈದಾ ಹಿಟ್ಟು - 1 ಕಪ್
- ಬೆಲ್ಲ- 1 ಕಪ್
- ಸೋಂಪು
- ಹುರಿಗಡಲೆ
- ಎಣ್ಣೆ
- ಚಿರೋಟಿ ರವೆ
- ಸಕ್ಕರೆ
- ಹಾಲು
- ಒಣ ಕೊಬ್ಬರಿ
- ಉಪ್ಪು
- ಎಳ್ಳು
- ಏಲಕ್ಕಿ
ಬೆಲ್ಲದ ಕರ್ಜಿಕಾಯಿ ತಿಂಡಿ ಮಾಡುವುದು ಹೇಗೆ?
ಮೊದಲು ಒಂದು ಬೌಲ್ಗೆ ಮೈದಾ ಹಿಟ್ಟು ಜರಡಿ ಹಿಡಿದು ಹಾಕಿಕೊಳ್ಳಿ. ಈಗ ಅದಕ್ಕೆ ಚಿರೋಟಿ ರವೆ, ಉಪ್ಪು, ಸಕ್ಕರೆ ಹಾಗೂ ಎಣ್ಣೆ ಹಾಕಿಕೊಂಡು ಚೆನ್ನಾಗಿ ಕೈ ನಿಂದ ಮಿಕ್ಸ್ ಮಾಡಿಕೊಳ್ಳಿ. ಈಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಮಾಡಿಕೊಳ್ಳಿ. ಚಪಾತಿ ಮಾಡುವಂತಹ ಹದದ ಹಿಟ್ಟನ್ನು ಮಾಡಿಕೊಳ್ಳಿ. ಈಗ ಹಿಟ್ಟು ಮಾಡಿ ಅದನ್ನು ಅರ್ಧ ಗಂಟೆ ಪಾತ್ರೆಯಲ್ಲಿ ಮುಚ್ಚಿಡಿ.
ಈಗ ಒಂದು ಬಾಣಲೆ ಇಟ್ಟು ಅದಕ್ಕೆ ಕೊಬ್ಬರಿ ತುರಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಕೊಬ್ಬರಿ ಚೆನ್ನಾಗಿ ಕರಿಯಬೇಕು. ನಂತರ ಕೊಬ್ಬರಿ ತೆಗೆದು ಅದಕ್ಕೆ ಎಳ್ಳು ಹಾಕಿ ಫ್ರೈ ಮಾಡಿಕೊಂಡು ಬದಿಗಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್ಗೆ ಹುರಿಗಡಲೆ ಹಾಕಿ ಅದಕ್ಕೆ ಏಲಕ್ಕಿ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನುಣ್ಣಗೆ ಪುಡಿಯಾಗಬೇಕು.
ಪುರಿಗಡೆಲೆಗೆ ಈಗ ಫ್ರೈ ಮಾಡಿಕೊಂಡ ಕೊಬ್ಬರಿ ಹಾಕಿ ಫ್ರೈ ಮಾಡಿ ಮತ್ತೆ ಇದಕ್ಕೆ ಸೋಂಪು ಸಹ ಹಾಕಿ ಒಂದು ಸುತ್ತು ರುಬ್ಬಿಕೊಳ್ಳಿ. ಕೊನೆಯಲ್ಲಿ ಇದು ತರಿತರಿಯಾಗಿದ್ದರೂ ನಡೆಯುತ್ತೆ. ನಂತರ ಇದಕ್ಕೆ ಪುಡಿ ಬೆಲ್ಲವನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದು ಹುಡಿ ಹುಡಿಯಾಗಿ ಬರುವಂತೆ ಮಾಡಿ.
ನಂತರ ಈ ಪುಡಿಗಳನ್ನು ಒಂದು ತಟ್ಟೆಗೆ ಹಾಕಿಕೊಂಡಿ ಈಗ ಫ್ರೈ ಮಾಡಿಕೊಂಡ ಎಳ್ಳು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಕರ್ಜಿಕಾಯಿಗೆ ಹಾಕುವ ಹೂರ್ಣ ತಯಾರಾಗುತ್ತದೆ. ಈಗ ನೆನೆದಿರುವ ಹಿಟ್ಟು ಮತ್ತೆ ಕಲಸಿಕೊಳ್ಳಿ. ನಂತರ ನಿಂಬೆ ಹಣ್ಣಿನ ಗಾತ್ರದ ಹಿಟ್ಟು ತೆಗೆದುಕೊಂಡು ಲಟ್ಟಿಸಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಮಾಡಿಕೊಳ್ಳಿ. ಲಟ್ಟಿಸಿಕೊಂಡ ಬಳಿಕ ಅದರ ಮಧ್ಯದಲ್ಲಿ ಈ ಹೂರ್ಣ ಇಟ್ಟು ಫೋಲ್ಡ್ ಮಾಡಿ.
ಫೋಲ್ಡ್ ಮಾಡಿದಾಗ ಅಂಚುಗಳು ಚೆನ್ನಾಗಿ ಅಂಟಿಕೊಳ್ಳಬೇಕು. ಇದಕ್ಕೆ ಹಾಲು ಬಳಸಿಕೊಂಡು ತುದಿಗೆ ಹಚ್ಚಿ ಚೆನ್ನಾಗಿ ಗಮ್ ಮಾಡಿಕೊಳ್ಳಿ. ಇದನ್ನು ಒಲೆ ಮೇಲೆ ಇಟ್ಟಿರುವ ಎಣ್ಣೆಯಲ್ಲಿ ಬಿಡಿ. ನಿಧಾನವಾದ ಉರಿಯಲ್ಲಿ ಕರಿಯಲು ಬಿಡಿ. ನೀವು ಕರ್ಜಿಕಾಯಿ ಮಾಡುತ್ತಾ ಇರಿ. ಒಂದೊಂದು ಕರ್ಜಿಕಾಯಿಯನ್ನು ಪ್ರೈ ಮಾಡಬಹುದು. ಇಲ್ಲವೆ 5 ರಿಂದ 6 ಕರ್ಜಿಕಾಯಿಯನ್ನು ಒಟ್ಟಿಗೆ ಕರಿಯಬುಹುದು. ಇಷ್ಟಾದರೆ ಹಬ್ಬಕ್ಕೆ ಸವಿಯಲು ಕರ್ಜಿಕಾಯಿ ರೆಡಿಯಾಗುತ್ತದೆ.



Click it and Unblock the Notifications
