Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಸಾಲೆ ರುಬ್ಬಿ ಕುಕ್ಕರ್ನಲ್ಲಿ ಬೇಳೆ ಸಾರು ಮಾಡಿ..! ಘಮ ಘಮ ಅನ್ನೋ ರುಚಿ ಇದು!
ನೀವು ಊಟಕ್ಕೆ ಯಾವ ರೀತಿ ಸಾರು ಮಾಡುತ್ತೀರಿ? ಹೀಗೆ ಕೇಳಿದ್ರೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ನೀಡುವುದು ಕಾಮನ್. ಯಾಕಂದ್ರೆ ಎಲ್ಲರು ಒಂದೊಂದು ರೀತಿಯಲ್ಲಿ ಒಂದೊಂದು ರುಚಿ ಸಾರು, ಸಾಂಬಾರ್ ಅಡುಗೆ ಮಾಡುವುದು ನೋಡಬಹುದು. ಕೆಲವರು ಸುಲಭದ ವಿಧಾನದಲ್ಲಿ ಮತ್ತೆ ಕೆಲವರು ಕಷ್ಟಪಟ್ಟರು ರುಚಿಯಲ್ಲಿ ಫಸ್ಟ್ ಕ್ಲಾಸ್ ಆಗಿ ಸಾರು ಮಾಡುತ್ತಾರೆ.
ಮಧ್ಯಾಹ್ನದ ಊಟ ರಾತ್ರಿ ಊಟಕ್ಕೆ ಒಂದು ತರಕಾರಿಯ ಸಾಂಬಾರ್ ಇಲ್ಲವೆ ತಿಳಿ ಸಾರು, ಬೇಳೆ ಸಾರು ಯಾವುದಾದರೊಂದು ಖಾದ್ಯ ಇದ್ದೇ ಇರುತ್ತೆ. ಮಂಸಾಹಾರದ ಊಟದ ಜೊತೆಗೂ ತರಕಾರಿ ಊಟ ಇರುವುದು ಸಾಮಾನ್ಯ. ಆದ್ರೆ ಅನ್ನಕ್ಕೆ ಸಾರು ಮಾಡುವ ಸರಿಯಾದ ವಿಧಾನವೇನು? ಯಾವ ರೀತಿ ಮಾಡಿದರೂ ರುಚಿ ಒಂದೇ ಎಂದು ನೀವು ಭಾವಿಸಿರಬಹುದು. ಆದ್ರೆ ಅದು ತಪ್ಪು.

ಒಬ್ಬೊಬ್ಬರು ಮಾಡುವ ವಿಧಾನದಿಂದಲೂ ಅದರ ರುಚಿ ಬದಲಾಗುತ್ತದೆ. ಹೀಗಾಗಿ ಸಾರು, ಸಾಂಬಾರ್ ಮಾಡುವಾಗ ಯಾವ ರೀತಿಯ ವಿಧಾನದಲ್ಲಿ ಮಾಡುತ್ತೇವೆ ಅನ್ನೋದು ಮುಖ್ಯ ಆಗುತ್ತೆ. ಹಾಗಾದ್ರೆ ನಾವಿಂದು ಇಲ್ಲಿ ಮಸಾಲೆಯನ್ನು ರುಬ್ಬಿಕೊಂಡು ಕುಕ್ಕರ್ನಲ್ಲಿ ಮಾಡುವಂತಹ ಬೇಳೆ ಸಾರಿನ ವಿಧಾನವನ್ನು ತಿಳಿದುಕೊಳ್ಳೋಣ.
ಹೌದು ಈ ರೀತಿ ಸಾರು ಮಾಡುವುದು ಬಹಳ ರುಚಿ ನೀಡಲಿದೆ. ಹಾಗಾದ್ರೆ ಈ ಮಸಾಲೆ ರುಬ್ಬಿಕೊಂಡು ಬೇಳೆ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ರುಬ್ಬಿ ಮಾಡುವ ಬೇಳೆ ಸಾರಿಗೆ ಯಾವೆಲ್ಲಾ ಪದಾರ್ಥಗಳು ಬೇಕು
- ತೊಗರಿ ಬೇಳೆ
- ಟೊಮೆಟೋ
- ಈರುಳ್ಳಿ
- ಅರಶಿಣ
- ಸಾಂಬಾರ್ ಪುಡಿ
- ಧನಿಯಾ ಪುಡಿ
- ಬೆಳ್ಳುಳ್ಳಿ
- ಎಣ್ಣೆ
- ಉಪ್ಪು
- ಕಾಯಿ ತರಿ
- ಖಾರದ ಪುಡಿ
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಜಿರಿಗೆ
- ಕರಬೇವು
- ತರಕಾರಿಗಳು
ಮಸಾಲೆ ರುಬ್ಬಿ ಬೇಳೆ ಸಾರು ಮಾಡುವ ವಿಧಾನವೇನು?
ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಟ್ಟು, ಕುಕ್ಕರ್ನಲ್ಲಿ ಹಾಕಿ ಇದಕ್ಕೆ ಅರಶಿಣ, ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಸೀಟಿ ಹೊಡೆಸಿಕೊಳ್ಳಿ. 2 ಅಥವಾ 3 ಸೀಟಿ ಹೊಡೆಸಿಕೊಳ್ಳಿ. ಈಗ ಮಸಾಲೆ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅರ್ಧ ಕಪ್ ಕಾಯಿ ತುರಿ, ಸಾಂಬಾರ್ ಪುಡಿ, ಅರಶಿಣ, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಧನಿಯಾ ಪುಡಿ, ಬೆಳ್ಳುಳ್ಳಿ ಹಾಕಿ ಸ್ವಲ್ಪವೇ ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಇಟ್ಟಿರುವ ಕುಕ್ಕರ್ ಮೂರು ಸೀಟಿ ಹೊಡೆದಿದ್ದರೆ ಅದರ ಮುಚ್ಚಳ ತೆಗೆದು ಅದಕ್ಕೆ ತರಕಾರಿಗಳ ಹಾಕಿಕೊಳ್ಳಬೇಕು. ಇದಕ್ಕೆ ಬದನೆಕಾಯಿ, ನುಗ್ಗೆಕಾಯಿ, ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಹೀಗೆ ಯಾವುದಾದರು ತರಕಾರಿ ನಿಮ್ಮ ಬಳಿ ಇದ್ದರೆ ಅದನ್ನು ಕೂಡ ಹಾಕಿಕೊಳ್ಳಿ. ಈಗ ಮತ್ತೆ ಇದಕ್ಕೆ ರುಬ್ಬಿಕೊಂಡಿದ್ದ ಮಸಾಲೆಗಳ ಹಾಕಿ, ಉಪ್ಪು ಹಾಕಿ, ಹಾಗೆ ಒಂದು ಉಂಡೆಯ ಹುಣಸೆ ಹುಳಿ ರಸವನ್ನು ಕೂಡ ಇದಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಒಂದು ಸೀಟಿ ಹೊಡೆಯಲು ಬಿಡಿ.
ಒಂದು ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಎಲ್ಲಾ ತರಕಾರಿ ಚೆನ್ನಾಗಿ ಬೆಂದಿದೆಯೇ ಎಂಬುದನ್ನು ಪರಿಶೀಲಿಸಿ. ಈಗ ಒಲೆ ಮೇಲೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಜೀರಿಗೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಸಾರಿಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಘಮ ಘಮಿಸುವ ಸಾರು ರೆಡಿಯಾಗುತ್ತದೆ.



Click it and Unblock the Notifications
