Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಊಟದ ಮಜಾ ಹೆಚ್ಚಿಸುವ ಬೇಳೆ ಸಾರು: ಇಂತಹ ಅದ್ಭುತ ರುಚಿ ನೀವೆಂದೂ ಸವಿದಿರೋದಿಲ್ಲ!
ಮನೆಯಲ್ಲಿ ಊಟದೊಂದಿಗೆ ಸವಿಯಲು ಹಲವು ರೀತಿಯ ಖಾದ್ಯಗಳ ಮಾಡುವುದು ನೋಡಬಹುದು. ಹಲವು ಖಾದ್ಯಗಳನ್ನು ಮಾಡಿ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಊಟದೊಂದಿಗೆ ಪಲ್ಯ, ಚಟ್ನಿ ಸೇರಿ ವಿವಿಧ ಬಗೆಯ ಖಾದ್ಯಗಳನ್ನು ಮಾಡಿಯೇ ಮಾಡುತ್ತಾರೆ. ಇನ್ನು ಸಾಂಬಾರ್‌ಗಳಲ್ಲೂ ಹತ್ತು ಹಲವು ಬಗೆಗಳ ಮಾಡುವುದು ನೋಡಬಹುದು. ಅನೇಕರು ಈ ಸಾಂಬಾರ್‌ನಲ್ಲಿ ಹಲವು ಬಗೆ ಸವಿಯಲು ಇಷ್ಟಪಡುತ್ತಾರೆ.
ನಾವಿಂದು ಊಟದೊಂದಿಗೆ ಸವಿಯಲು ಸಾಂಬಾರ್ ಮಾಡುವುದು ನೋಡಬಹುದು. ಈ ಸಾಂಬಾರ್‌ನಲ್ಲಿ ಬೇಳೆ ಸಾಂಬಾರ್ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಬೇಳೆ ಸಾಂಬಾರ್ ಅಂದ್ರೆ ಎಲ್ಲರಿಗೂ ಪ್ರಿಯವಾಗುತ್ತೆ, ಅದರ ರುಚಿ ಒಮ್ಮೆ ಸವಿದು ನೋಡಿದ್ರೆ ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ.

ಬೇಳೆ ಸಾಂಬಾರ್ ದೋಸೆ ಇಡ್ಲಿಯೊಂದಿಗೂ ಕೂಡ ರುಚಿಸಲಿದೆ. ಹಾಗೆ ಅನ್ನದೊಂದಿಗೆ ಕೂಡ ರುಚಿ ಹೆಚ್ಚಿಸಲಿದೆ. ನೀವು ಸುಲಭವಾಗಿ ಮನೆಯಲ್ಲಿ ಮಾಡಿ ಸವಿಯಬಹುದಾದ ಖಾದ್ಯ ಇದು. ಆದ್ರೆ ನಾವಿಂದು ವಿಶೇಷ ರುಚಿಯಲ್ಲಿ ಈ ಬೇಳೆ ಸಾಂಬಾರ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.
ಬೇಳೆ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೇಳೆ ಸಾಂಬಾರ್ ಮಾಡಲು ಬೇಕಾಗುವ ಅಗತ್ಯ ವಸ್ತುಗಳು
- ತೊಗರಿಬೇಳೆ ಒಂದು ಕಪ್
- ಈರುಳ್ಳಿ 2
- ಟೊಮೆಟೋ 4
- ಕ್ಯಾರೆಟ್ 1
- ಹುರುಳಿಕಾಯಿ 15 ರಿಂದ 20
- ನುಗ್ಗೆಕಾಯಿ 4
- ಬದನೆಕಾಯಿ 1
- ಆಲೂಗಡ್ಡೆ
- ಸಾಂಬಾರ್ ಪುಡಿ
- ಎಣ್ಣೆ
- ಹುಣಸೆ ಹುಳಿ
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ಇಂಗು
- ಒಣ ಮೆಣಸು
- ಕೊತ್ತಂಬರಿ ಸೊಪ್ಪು
- ಕರಿಬೇವು
- ಉಪ್ಪು ರುಚಿಗೆ ತಕ್ಕಷ್ಟು
ಬೇಳೆ ಸಾಂಬಾರ್ ಮಾಡುವ ವಿಧಾನವೇನು?
ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ 1 ಲೀಟರ್ ನೀರು ಹಾಕಿ ಬಿಸಿಯಾಗಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ತೊಳೆದಿರುವ ತೊಗರಿ ಬೇಳೆ, ಕತ್ತರಿಸಿದ ಟೊಮೆಟೋ, 1 ಸ್ಪೂನ್ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಬೇಕು. ಈಗ ಒಲೆ ಆಫ್ ಮಾಡಿಕೊಂಡು ಮುಚ್ಚಳ ತೆಗೆದು ಕತ್ತರಿಸಿದ ಈರುಳ್ಳಿ, ಬದನೆಕಾಯಿ, ಬೀನ್ಸ್, ಆಲೂಗಡ್ಡೆ, ಕ್ಯಾರೆಟ್ಮ, ನುಗ್ಗೆಕಾಯಿ ಸೇರಿಸಿ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಮತ್ತೆ 1 ಸೀಟಿ ಹೊಡೆಯಲು ಬಿಡಿ.
ಈಗ ತಣ್ಣಗಾಗಲು ಬಿಟ್ಟು ಮುಚ್ಚಳ ತೆಗೆದು ಹೆಚ್ಚುವರಿ ನೀರನ್ನು ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಈ ಕುಕ್ಕರ್‌ಗೆ 3 ಸ್ಪೂನ್ ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಬೇಕು. ಈಗ ಮೊದಲು ತೆಗೆದಿಟ್ಟ ನೀರನ್ನು ಮತ್ತೆ ಹಾಕಿಕೊಂಡು ಮಿಶ್ರಣ ಮಾಡಿ. ಈಗ ದಪ್ಪವಾಗಿದ್ದರೆ ನೀರು ಸೇರಿಸಬಹುದು. ಈಗ ಒಲೆ ಹಚ್ಚಿಕೊಂಡು ಮತ್ತೆ ಕುದಿಬರಲು ಬಿಡಿ.
4 ನಿಮಿಷ ಕುದಿಬಂದ ಬಳಿಕ ಈಗ ಒಂದು ನಿಂಬೆ ಗಾತ್ರದ ಹುಳಿಯಿಂದ ಹುಳಿ ತೆಗೆದು ಇದಕ್ಕೆ ಹಾಕಿ ಮಿಶ್ರಣ ಮಾಡಿ. ಮತ್ತೆ 5 ನಿಮಿಷ ಕುದಿಯಲು ಬಿಟ್ಟು ನಂತರ ಇದಕ್ಕೆ ಸಾಸಿವೆ, ಕರಿವೇವು, ಒಣ ಮೆಣಸು, ಬೆಳ್ಳುಳ್ಳಿ ಸೇರಿಸಿ ಅದನ್ನು ಕುಕ್ಕರ್‌ಗೆ ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಬೇಳೆ ಸಾಂಬಾರ್ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
