Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಘಮ ಘಮ ಎನ್ನುವ ಬೇಳೆ ರಸಂ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ನೀವು ಮಧ್ಯಾಹ್ನ ಹಾಗೆ ರಾತ್ರಿಯ ಊಟಕ್ಕೆ ವಿಶೇಷವಾದ ಸಾಂಬಾರ್ ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ಅನ್ನದ ಜೊತೆಗೆ ಬಹಳ ರುಚಿ ನೀಡುವ ರಸಂ, ಬೇಳೆ ಸಾರು, ಹೀಗೆ ಯಾವುದಾದರು ಒಂದು ರುಚಿ ರುಚಿಯ ಖಾದ್ಯ ನೀವು ಸವಿಯಲು ಮುಂದಾಗಬಹುದು. ಇನ್ನು ಬಹಳಷ್ಟು ಸಮಯದಲ್ಲಿ ಸುಲಭವಾಗಿ ಮಾಡಿ ಮುಗಿಸಬಹುದಾದ ಸಾಂಬಾರ್ ಅಥವಾ ಸಾರನ್ನು ನೀವು ಮಾಡಲು ಮುಂದಾಗಿರುತ್ತೀರಿ.
ಹಾಗೆ ಬೇಳೆಯಿಂದ ಮಾಡುವಂತಹ ಎಲ್ಲಾ ಖಾದ್ಯಗಳು ನಿಮಗೆ ಬಹಳ ರುಚಿ ನೀಡಬಹುದು. ಹಾಗೆ ಬೇಳೆ ಸಾರು ಅಂದರೆ ಬಹುತೇಕರಿಗೆ ಇಷ್ಟವಾಗುತ್ತದೆ. ಆದ್ರೆ ನಾವಿಂದು ಬೇಳೆ ಸಾರಿನ ಬದಲಾಗಿ ಅನ್ನದ ಜೊತೆ ಸವಿಯಲು ಬಹಳ ರುಚಿಕರವಾಗಿರುವ ಬೇಳೆ ರಸಂ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಬೇಳೆ ರಸಂ ಅನ್ನದ ಜೊತೆಗೆ ಸವಿಯಲು ಬಹಳ ರುಚಿಯಾಗಿರುತ್ತೆ.

ಅನ್ನದ ಜೊತೆಗೆ ಬಹಳ ರುಚಿ ನೀಡುವಂತಹ ಈ ಬೇಳೆ ರಸಂ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ರಾತ್ರಿ ಊಟದ ರುಚಿ ಹೆಚ್ಚಿಸಬೇಕಾದರೆ ಈ ರಸಂ ಇರಬೇಕು. ಊಟದ ಕೊನೆಯಲ್ಲಿ ಈ ರಸಂ ಸವಿದರೆ ಊಟ ಪೂರ್ಣವಾಗುತ್ತದೆ. ಹಾಗಾದ್ರೆ ನಾವಿಂದು ಈ ಬೇಳೆ ರಸಂ ಮಾಡುವ ಕುರಿತು ತಿಳಿಯೋಣ, ಬೇಳೆ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಳೆ ರಸಂ ಮಾಡಲು ಬೇಕಾಗುವ ಪದಾರ್ಥಗಳು
- ತೊಗರಿ ಬೇಳೆ
- ಹೆಸರುಬೇಳೆ
- ಟೊಮೊಟೊ
- ಅರಿಶಿನದ ಪುಡಿ
- ಸಾಸಿವೆ
- ಇಂಗು
- ಬ್ಯಾಡಗಿ ಮೆಣಸಿನಕಾಯಿ
- ಒಣ ಮೆಣಸು
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹುಣಸೆ ಹಣ್ಣು
- ಜೀರಿಗೆ
- ಬೆಳ್ಳುಳ್ಳಿ
- ಬೆಲ್ಲ
- ಸಾಂಬಾರ್ ಪುಡಿ
- ಉಪ್ಪು
- ಎಣ್ಣೆ
ಬೇಳೆ ರಸಂ ಮಾಡುವ ವಿಧಾನವೇನು?
ಮೊದಲಿಗೆ ಒಂದು ಕಪ್ ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿಕೊಳ್ಳಿ. ಹಾಗೆ ಕಾಲು ಕಪ್ ಹೆಸರು ಬೇಳೆಯನ್ನು ಕೂಡ ತೊಳೆದು ಇದಕ್ಕೆ ಹಾಕಿಕೊಂಡು, 2 ಟೊಮೆಟೋ ಹೆಚ್ಚಿ ಇದಕ್ಕೆ ಹಾಕಿ, ಅರಶಿಣ ಹಾಕಿ 2 ಕಪ್ ಅಷ್ಟು ನೀರು ಹಾಕಿ, ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ.
3 ಸೀಟಿ ಹೊಡೆಸಿಕೊಂಡು ಈ ಕುಕ್ಕರ್ ತಣ್ಣಗಾಗಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಕಾಳು ಮೆಣಸು, ಜೀರಿಗೆ, ಬೆಳ್ಳುಳ್ಳಿ, ಸಾಂಬಾರ್ ಪುಡಿ, ಕರಿಬೇವು ಹಾಕಿ ತರಿತರಿಯಾಗಿ ರುಬ್ಬಿ ಪುಡಿ ಮಾಡಿಕೊಳ್ಳಿ. ಈಗ ಈ ಪುಡಿಯನ್ನು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಕುಕ್ಕರ್ ಮುಚ್ಚಳ ತೆಗೆದು ಸ್ವಲ್ವ ನೀರನ್ನು ಬೇರ್ಪಡಿಸಿ ಇಟ್ಟು ಬೇಳೆಯನ್ನು ಮಸೆದುಕೊಳ್ಳಬೇಕು. ಸ್ವಲ್ಪ ಪುಡಿಯಾದ ಬಳಿಕ ಮತ್ತೆ ಆ ಬೇರ್ಪಡಿಸಿದ ನೀರನ್ನು ಮತ್ತೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಇಂಗು, ಒಣ ಮೆಣಸುಗಳು ಹಾಕಿ ಈಗ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡಿದ್ದ ಮಸಾಲೆ ಪುಡಿಗಳನ್ನು ಕೂಡ ಇದಕ್ಕೆ ಹಾಕಿಕೊಳ್ಳಬೇಕು. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. ಈಗ ಕುಕ್ಕರ್‌ನಲ್ಲಿರುವ ಬೇಳೆಯನ್ನು ಈ ಬಾಣಲೆಗೆ ಹಾಕಿಕೊಳ್ಳಿ.
ಮತ್ತೆ ಒಂದು ನಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿ, ಕಿವುಚಿಕೊಂಡು ಇದಕ್ಕೆ ಹಾಕಿ ನಂತರ ಬೆಲ್ಲದ ಪುಡಿ, ಉಪ್ಪು, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಕುದಿಬರಲು ಇಡಿ. 15 ನಿಮಿಷ ಸಣ್ಣಗೆ ಕುದಿಬಂದ ಬಳಿಕ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೇಳೆ ರಸಂ ರೆಡಿಯಾಗುತ್ತದೆ. ಅದರ ಘಮಲು ಇಡೀ ಮನೆ ಹರಡಲಿದೆ. ನೀವು ಕೂಡ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
