Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಡಯಟ್‌ಗೆ ಬೆಸ್ಟ್.. ಬೀಟ್ರೂಟ್ ಕ್ವಿನೋವಾ ಕಬಾಬ್ ಮನೆಯಲ್ಲೇ ಮಾಡಿ! ಟೇಸ್ಟ್ ಅದ್ಭುತ
ಡಯಟ್ ಮಾಡುವವರಿಗೆ ಬೆಸ್ಟ್ ಸ್ನ್ಯಾಕ್ಸ್. ಆರೋಗ್ಯ ಮತ್ತು ರುಚಿಯ ಸಮ್ಮಿಲನ. ಈ ಕ್ವಿಬೀಟ್ರೂಟ್ ಕ್ವಿನೋವಾ ಕಬಾಬ್ ಮಾಡೋದು ಹೇಗೆ? ಹೌದು, ನೀವು ಆರೋಗ್ಯಕರ ಮತ್ತು ಹೊಟ್ಟೆ ತುಂಬುವ ಸಸ್ಯಾಹಾರಿ ಕಬಾಬ್‌ಗಾಗಿ ಹುಡುಕುತ್ತಿದ್ದೀರಾ? ಹಾಗಿದ್ರೆ, ನಾರಿನಂಶ ಸಮೃದ್ಧವಾಗಿರುವ ಈ ಬೀಟ್ರೂಟ್ ಕ್ವಿನೋವಾ ಕಬಾಬ್ (Beetroot Quinoa Kebab) ಅನ್ನು ಪ್ರಯತ್ನಿಸಿ. ಕಡಿಮೆ ಪದಾರ್ಥಗಳಿಂದ ತಯಾರಿಸಿದ ಈ ಕಬಾಬ್ ಅನ್ನು ಹಾಗೆಯೇ ಸವಿಯಬಹುದು. ರೂಮಾಲಿ ರೋಟಿಯೊಂದಿಗೆ ಅಥವಾ ಟೋರ್ಟಿಲ್ಲಾ ಶೀಟ್‌ನೊಳಗೆ ತುಂಬಿ ಒಂದು ಪೂರ್ಣ ಊಟವನ್ನಾಗಿ ಮಾಡಿಕೊಳ್ಳಬಹುದು.
ಬೀಟ್ರೂಟ್ ಅನೇಕ ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಇನ್ನು ಕ್ವಿನೋವಾ, ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುವ ಸಂಪೂರ್ಣ ಪ್ರೋಟೀನ್ ಮೂಲವಾಗಿದೆ. ಫೈಬರ್ ಅಂಶದಲ್ಲಿ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಎರಡರ ಸಂಯೋಜನೆಯು ಕಬಾಬ್‌ಗಳನ್ನು ಪೌಷ್ಟಿಕಾಂಶದ ಶಕ್ತಿಕೇಂದ್ರವನ್ನಾಗಿಸುತ್ತದೆ. ಇದನ್ನು ಮನೆಯಲ್ಲೇ ಒಮ್ಮೆ ಟ್ರೈ ಮಾಡಿ.

ಬೀಟ್ರೂಟ್ ಕ್ವಿನೋವಾ ಕಬಾಬ್ ಮಾಡಲು ಬೇಕಾಗುವ ಪದಾರ್ಥಗಳು
• ಬೀಟ್ರೂಟ್ - 1 ಮಧ್ಯಮ ಗಾತ್ರದ
• ಕ್ವಿನೋವಾ - ½ ಕಪ್ ಬೇಯಿಸಿದ್ದು
• ಆಲೂಗಡ್ಡೆ - 1 ಬೇಯಿಸಿದ್ದು
• ಈರುಳ್ಳಿ - 1
• ಬೆಳ್ಳುಳ್ಳಿ ಎಸಳುಗಳು - 2 ರಿಂದ 3
• ಹಸಿಮೆಣಸು - 1
• ಕೊತ್ತಂಬರಿ ಸೊಪ್ಪು - (ಸ್ವಲ್ಪ) 1 ಚಮಚ
• ಜೀರಿಗೆ ಪುಡಿ - ½ ಚಮಚ
• ಗರಂ ಮಸಾಲಾ - ½ ಚಮಚ
• ಚಾಟ್ ಮಸಾಲಾ - ½ ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಅಕ್ಕಿ ಹಿಟ್ಟು - 1 ರಿಂದ 2 ಚಮಚ
• ಎಣ್ಣೆ - ಶಾಲೋ ಫ್ರೈ ಮಾಡಲು

ಬೀಟ್ರೂಟ್ ಕ್ವಿನೋವಾ ಕಬಾಬ್ ಮಾಡುವ ವಿಧಾನ
ಹಂತ 1: ಮೊದಲಿಗೆ, ಕ್ವಿನೋವಾವನ್ನು ಚೆನ್ನಾಗಿ ತೊಳೆಯಿರಿ. ½ ಕಪ್ ನೀರಿನಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ನಂತರ ಅದನ್ನು ತಣ್ಣಗಾಗಲು ಬಿಡಿ.
ಹಂತ 2: ಈಗ ಬೀಟ್ರೂಟ್ ತೆಗೆದುಕೊಂಡು, ಸಿಪ್ಪೆ ತೆಗೆಯಿರಿ. ಬಳಿಕ ಚೆನ್ನಾಗಿ ತೊಳೆದು ತುರಿಯಿರಿ ಮತ್ತು ಅದನ್ನು ಒಂದು ಮಿಶ್ರಣ ಬಟ್ಟಲಿಗೆ ಹಾಕಿ.
ಹಂತ 3: ಈಗ ಅದೇ ಮಿಶ್ರಣ ಬಟ್ಟಲಿನಲ್ಲಿ, ಮ್ಯಾಶ್ ಮಾಡಿದ ಆಲೂಗಡ್ಡೆ, ತಣ್ಣಗಾದ ಕ್ವಿನೋವಾ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ.
ಹಂತ 4: ಇದಾದ ನಂತರ, ಜೀರಿಗೆ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ, ಉಪ್ಪು ಮತ್ತು ಅಕ್ಕಿ ಹಿಟ್ಟನ್ನು ಬೆರೆಸಿ. ಎಲ್ಲವನ್ನೂ ಸೇರಿಸಿ ಹಿಟ್ಟಿನಂತಿರುವ ಮಿಶ್ರಣವನ್ನಾಗಿ ಚೆನ್ನಾಗಿ ಕಲಸಿ.
ಹಂತ 5: ಬಳಿಕ ನಿಮ್ಮ ಕೈಗಳಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು, ಮಿಶ್ರಣವನ್ನು ಸಣ್ಣ ಟಿಕ್ಕಿಗಳು ಅಥವಾ ಉದ್ದವಾದ ಕಬಾಬ್‌ಗಳ ಆಕಾರದಲ್ಲಿ ತಯಾರಿಸಿ.
ಹಂತ 6: ಈಗ ಒಂದು ನಾನ್ ಸ್ಟಿಕ್ ಪ್ಯಾನ್ ಅಥವಾ ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಕಬಾಬ್‌ಗಳನ್ನು ಮಧ್ಯಮ ಉರಿಯಲ್ಲಿ ಎರಡೂ ಕಡೆ ಚಿನ್ನದ ಬಣ್ಣಕ್ಕೆ ಬಂದು ಗರಿಗರಿಯಾಗುವವರೆಗೆ ಫ್ರೈ ಮಾಡಿ ಅಥವಾ ಶಾಲೋ ಫ್ರೈ ಮಾಡಿ.
ಇಷ್ಟು ಮಾಡಿದರೆ, ಬಿಸಿ ಬಿಸಿಯಾದ ಬೀಟ್ರೂಟ್ ಕ್ವಿನೋವಾ ಕಬಾಬ್ ಸಿದ್ಧ. ಬಳಿಕ, ಬಿಸಿಬಿಸಿಯಾದ ಕಬಾಬ್‌ಗಳನ್ನು ಹಸಿರು ಚಟ್ನಿ ಅಥವಾ ಕೆಚಪ್‌ನೊಂದಿಗೆ ಮನೆಯವರಿಗೆ ಬಡಿಸಿ. ನೀವೂ ಆನಂದಿಸಿ.

ಈ ರೀತಿನೂ ಮಾಡಬಹುದು
ಒಂದು ಬೌಲ್ ತೆಗೆದುಕೊಳ್ಳಿ. ಅದರಲ್ಲಿ ಕ್ವಿನೋವ, ಬೀಟ್ರೂಟ್, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಉಪ್ಪನ್ನು ಹಾಕಿ. ಈಗ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣದಿಂದ ಸಣ್ಣ ಉಂಡೆಗಳನ್ನು ತಯಾರಿಸಿ. ತವಾದಲ್ಲಿ (ಕಾವಲಿ) ಎಣ್ಣೆಯನ್ನು ಬಿಸಿ ಮಾಡಿ. ಈಗ ಉಂಡೆಗಳನ್ನು ಹಾಕಿ ಎರಡೂ ಕಡೆ ಕಂದು ಬಣ್ಣ ಬರುವವರೆಗೆ ಕರಿಯಿರಿ. ಇಷ್ಟು ಮಾಡಿದರೆ, ರುಚಿಕರವಾದ ಬೀಟ್ರೂಟ್ ಕ್ವಿನೋವಾ ಕಬಾಬ್ ಸಿದ್ಧ. ಇದನ್ನು ಚಟ್ನಿ ಅಥವಾ ಸಾಸ್ ಜೊತೆ ಸವಿಯಿರಿ.



Click it and Unblock the Notifications