Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅನ್ನ, ಚಪಾತಿಗೆ ರುಚಿಕರ ಬೀಟ್ರೂಟ್ ಪಲ್ಯ ಮಾಡೋದು ಹೇಗೆ?
ಮಧ್ಯಾಹ್ನ ಮತ್ತು ರಾತ್ರಿ ಒಂದು ಊಟ ಚೆನ್ನಾಗಿ ಸೇರಬೇಕು ಅಂದ್ರೆ ಊಟದ ಜೊತೆ ಏನಾದರು ಇರಲೇಬೇಕು. ಹೀಗೆ ಊಟದ ಜೊತೆ ಯಾವುದಾರು ತರಕಾರಿಯ ಪಲ್ಯ ಇದ್ದರಂತು ಊಟಚ ಮಜವೇ ಬೇರೆ. ಇಲ್ಲದಿದ್ದರೆ ಊಟ ಸರಿಯಾಗಿ ಮಾಡಿದಂತೆ ಅನಿಸುವುದಿಲ್ಲ. ಆದರೆ ಯಾವ ತರಕಾರಿಯ ಪಲ್ಯ ಮಾಡಿದರೆ ಊಟಕ್ಕೆ ಚೆನ್ನಾಗಿರುತ್ತೆ?
ಈ ರೀತಿ ಎಲ್ಲಾ ತರಕಾರಿ ಪಲ್ಯಗಳು ಊಟಕ್ಕೆ ರುಚಿ ನೀಡುವುದಿಲ್ಲ. ಆರೋಗ್ಯಕ್ಕೂ ಒಳ್ಳೆಯ ತರಕಾರಿ ಎಂದರೆ ಅದು ಬೀಟ್ರೂಟ್, ಇದರಿಂದ ರುಚಿ ರುಚಿಯ ಪಲ್ಯ ಮಾಡಬಹುದು. ಬೀಟ್ರೂಟ್ ಆರೋಗ್ಯಕ್ಕೆ ಬಹಳ ಉತ್ತಮ ತರಕಾರಿಯಾಗಿದೆ. ಇದರಿಂದ ನಮಗೆ ಹಲವು ಪ್ರಯೋಜನಗಳಿವೆ. ಇದು ಊಟದ ಸವಿಯಲು ಬಾಯಿ ರುಚಿಗೆ ಒಳ್ಳೆಯ ಖಾದ್ಯವಾಗಿದೆ.

ಹಾಗಾಗಿ ಊಟಕ್ಕೆ ನಾವಿಂದು ರುಚಿ ರುಚಿಯ ಬೀಟ್ರೂಟ್ ಪಲ್ಯ ಮಾಡೋದು ಹೇಗೆ ಎಂಬುದನ್ನು ನೋಡೋಣ. ಈ ಬೀಟ್ರೂಟ್ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಅದನ್ನು ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೀಟ್ರೂಟ್ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬೀಟ್ರೂಟ್-2
- ಇಡಿ ಕಡಲೆ - 1 ಕಪ್
- ತೆಂಗಿನಕಾಯಿ ತುರಿದ - 1 ಕಪ್
- ಜೀರಿಗೆ - 1/2 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 8
- ಈರುಳ್ಳಿ- 2
- ಸಾಸಿವೆ - 1 ಟೀಸ್ಪೂನ್
- ಒಣ ಮೆಣಸಿನಕಾಯಿ - 2
- ಕರಿಬೇವಿನ ಎಲೆಗಳು - 2 tbs
- ಇಂಗು - 1/4 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 1 tbs
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಬೀಟ್ರೂಟ್ ಪಲ್ಯ ಮಾಡುವ ವಿಧಾನ
ಮೊದಲು ಕಡಲೆಕಾಳನ್ನು ರಾತ್ರಿಯೇ ನೆನಸಿಡಬೇಕು. ಬಳಿಕ ಮಾರನೇ ದಿನ ಕಡಲೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಈ ಕಡಲೆ ಬೇಯುವಾಗ ಅದಕ್ಕೆ ಬೀಟ್ರೂಟ್ ಅನ್ನೂ ಸಹ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಆದರೆ ಕಡಲೆ ಮೊದಲು ಬೇಯಲು ಹಾಕಿ. ಸ್ವಲ್ಪ ಸಮಯದ ಬಳಿಕ ಬೀಟ್ರೂಟ್ ಹಾಕಿ. ಬೀಟ್ರೂಟ್ ಬೇಯಲು ಕಡಿಮೆ ಸಮಯ ಸಾಕು.
ಈಗ ಒಂದು ಮಿಕ್ಸಿ ಜಾರ್ಗೆ ಕಾಯಿ ತುರಿ ಹಾಕಿಕೊಂಡು, ಅದಕ್ಕೆ ಈರುಳ್ಳಿ, ಜೀರಿಗೆ, ಹಸಿ ಮೆಣಸು, ಅಥವಾ ಒಣ ಮೆಣಸು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಈ ಮಸಾಲೆಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಇನ್ನೊಂದೆಡೆ ಒಂದು ಪಾತ್ರೆಯನ್ನು ತೆಗೆದುಕೊಂಡು ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ, ಎಣ್ಣೆ ಕಾದ ಬಳಿಕ ಅದಕ್ಕೆ ಜೀರಿಗೆ, ಸಾವಿವೆ, ಈರುಳ್ಳಿ, ಒಣ ಮೆಣಸು, ಇಂಗು, ಕರಿಬೇವಿನ ಸೊಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಬೀಟ್ರೂಟ್ ಹಾಗೂ ಕಡಲೆಯನ್ನು ಹಾಕಿಕೊಳ್ಳಿ. ಇದಕ್ಕೆ ಉಪ್ಪು ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷದ ಬಳಿಕ ನೀವು ರುಬ್ಬಿಕೊಂಡಿದ್ದ ಮಸಾಲೆಯನ್ನು ಹಾಕಿಕೊಂಡು 3 ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಿ. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿ ಇಳಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಬೀಟ್ರೂಟ್ ಪಲ್ಯ ರೆಡಿಯಾಗುತ್ತದೆ. ಇದನ್ನು ಊಟ, ಚಪಾತಿ ಜೊತೆ ಸವಿಯಲು ಸಿಕ್ಕಾಪಟ್ಟೆ ರುಚಿ ನೀಡಲಿದೆ.
ಗಮನಿಸಿ ನೀವು ಕಡಲೆ ಹಾಗೂ ಬೀಟ್ರೂಟ್ ಅನ್ನು ಬೇಯಿಸಲು ಕುಕ್ಕರ್ ಸಹ ಬಳಸಬಹುದು. ಎರಡು ಸೀಟಿ ಹೊಡೆಸಿ ತೆಗೆದರೆ ಚೆನ್ನಾಗಿ ಬೇಯುತ್ತದೆ. ಕಡಲೆ ಹಸಿಯಾಗಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು ಹೀಗಾಗಿ ಚೆನ್ನಾಗಿ ಬೇಯಿಸಬೇಕು.



Click it and Unblock the Notifications
