Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಊಟದ ರುಚಿ ಹೆಚ್ಚಿಸುವ ಬೀಟ್ರೂಟ್ ಪಚಡಿ ಮಾಡಿ ನೋಡಿ! ಇಲ್ಲಿದೆ ಸುಲಭದ ರೆಸಿಪಿ..!
ಊಟದ ಜೊತೆಗೆ ಪಲ್ಯ, ಚಟ್ನಿ ಇದ್ದರೆ ಊಟದ ರುಚಿ ಹೆಚ್ಚಿಸೋದು ಖಚಿತ. ಹೀಗಾಗಿ ಸಾಂಬಾರ್ ಜೊತೆಗೆ ಚಟ್ನಿ, ಇಲ್ಲವೆ ಯಾವುದಾದರು ಸೈಡ್ಸ್ ಸವಿಯುತ್ತೇವೆ. ಹಾಗೆ ಪಚಮಿ ಕೂಡ ಎಲ್ಲರಿಗೂ ಇಷ್ಟವಾಗುವ ರೆಸಿಪಿ. ಅದ್ರಲ್ಲೂ ಸೌತೆಕಾಯಿ ಬಳಸಿ ಮಾಡುವಂತಹ ಪಚಡಿ ಬಹಳ ರುಚಿಕರವಾಗಿರಲಿದೆ ನೀವು ಕೂಡ ಈ ಸೌತೆಕಾಯಿಯ ಪಚಡಿ ಮಾಡಿ ಸವಿದಿರುತ್ತೀರಿ.
ನಾವಿಂದು ಸೌತೆಕಾಯಿ ಬದಲಿಗೆ ರುಚಿ ರುಚಿಯ ಬೀಟ್ರೂಟ್ ಪಚಡಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಬೀಟ್ರೂಟ್ ಬಳಸಿ ಮಾಡುವ ಎಲ್ಲಾ ಖಾದ್ಯಗಳು ಅದ್ಭುತ ರುಚಿ ನೀಡಲಿವೆ. ಊಟ ತಿಂಡಿಯೊಂದಿಗೆ ನಿಮಗೆ ರುಚಿಕರ ಸ್ವಾದ ನೀಡಲಿವೆ. ಅದರಲ್ಲೂ ಬೀಟ್ರೂಟ್ ಪಲ್ಯ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ ಎನ್ನಬಹುದು.

ಆದ್ರೆ ನಾವಿಂದು ರುಚಿ ರುಚಿಯಾಗಿ ಬೀಟ್ರೂಟ್ ಪಚಟಿ ಮಾಡುವುದು ಹೇಗೆ ನೋಡೋಣ. ಇದನ್ನು ನೀವು ಊಟದೊಂದಿಗೆ ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ತಿಂಡಿಯೊಂದಿಗೂ ಕೂಡ ರುಚಿ ದುಪ್ಪಟ್ಟಾಗಲಿದೆ. ಹಾಗಾದ್ರೆ ಈ ಬೀಟ್ರೂಟ್ ಪಚಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವುದು ಹೇಗೆ? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೀಟ್ರೂಟ್ ಪಚಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬೀಟ್ರೂಟ್
- ತೆಂಗಿನಕಾಯಿ
- ಹಸಿ ಮೆಣಸಿನಕಾಯಿ
- ಈರುಳ್ಳಿ
- ಜೀರಿಗೆ
- ಮೊಸರು
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಇಂಗು
- ಉದ್ದಿನ ಬೇಳೆ
- ಒಣ ಮೆಣಸು
- ಕರಿಬೇವು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬೀಟ್ರೂಟ್ ಪಚಡಿ ಮಾಡುವುದು ಹೇಗೆ?
ಮೊದಲಿ ಬೀಟ್ರೂಟ್ ಸಿಪ್ಪೆ ತೆಗೆದು ಅನ್ನು ಕ್ಯಾರೆಟ್ನಂತೆ ತುರಿದು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ತುರಿದುಕೊಂಡಿರುವ ಈ ಬೀಟ್ರೂಟ್ ಅನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಹಾಗೆ ಇದಕ್ಕೆ ಉಪ್ಪು ಹಾಕಿ 4 ನಿಮಿಷ ಬೇಯಿಸಿಕೊಳ್ಳಬೇಕು.
ಈ ನಡುವೆ ಬೀಟ್ರೂಟ್ ಬೇಯಲು ಬಿಟ್ಟು ಒಂದು ಮಿಕ್ಸಿ ಜಾರ್ಗೆ ಅರ್ಧ ಕಪ್ ತೆಂಗಿನಕಾಯಿ, ಹಸಿ ಮೆಣಸು, ಈರುಳ್ಳಿ 1, ಜೀರಿಗೆ ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಈಗ ಈ ರುಬ್ಬಿದ ಮಿಶ್ರಣವನ್ನು ಬೆಂದಿರುವ ಬೀಟ್ರೂಟ್ಗೆ ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು 2 ರಿಂದ 3 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.
ಈಗ ಒಲೆ ಆಫ್ ಮಾಡಿಕೊಂಡು ಅರ್ಧ ಕಪ್ ಗಟ್ಟಿ ಮೊಸರಿಗೆ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ಗಂಟುಗಳು ಇಲ್ಲದಂತೆ ಕಲಸಿಕೊಂಡು ಬೀಟ್ರೂಟ್ಗೆ ಹಾಕಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಸಣ್ಣ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಜೀರಗೆ ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು, ಒಣ ಮೆಣಸು ಹಾಕಿಕೊಂಡು ಒಂದು ಒಗ್ಗರಣೆ ರೆಡಿ ಮಾಡಿಕೊಂಡು ಪಚಡಿಗೆ ಹಾಕಿ ಒಮ್ಮೆ ಮಿಶ್ರಣ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಬೀಟ್ರೂಟ್ ಪಚಡಿ ರೆಡಿಯಾಗಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಊಟ, ತಿಂಡಿಯ ಜೊತೆಗೆ ಇಂದು ಬಹಳ ರುಚಿ ನೀಡಲಿದೆ. ಹಾಗೆ



Click it and Unblock the Notifications