Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
5 ನಿಮಿಷ ಟೈಮ್ ಇದ್ರೆ ಈ ಬೀಟ್ರೂಟ್ ದೋಸೆ ಮಾಡಬಹುದು..! ಎಷ್ಟು ಸಿಂಪಲ್ ಗೊತ್ತಾ?
ನೀವು ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ವಿಶೇಷ ತಿಂಡಿ ಮಾಡಲು ಆಲೋಚಿಸಿರಬಹುದು, ಅದರಲ್ಲೂ ಹಬ್ಬ ಇದ್ದಾಗ, ಅಥವಾ ಯಾರಾದರು ಅತಿಥಿಗಳು ಬಂದಾಗ, ಭಾನುವಾರದ ರಜೆ ಸಮಯದಲ್ಲೂ ವಿಶೇಷವಾಗಿ ಏನಾದರು ಮಾಡಲು ಇಷ್ಟಪಡುತ್ತೀರಿ. ಹಾಗೆ ರುಚಿ ರುಚಿ ಖಾದ್ಯ ಅಂದ್ರೆ ದೋಸೆ ಮೊದಲು ನೆನಪಿಗೆ ಬರುತ್ತೆ. ಅದರಲ್ಲೂ ಕೆಲವೊಂದು ವಿಶೇಷ ಬಗೆಯ ದೋಸೆಯು ಎಲ್ಲರಿಗೂ ಇಷ್ಟವಾಗುತ್ತೆ.
ಆದ್ರೆ ನಾವಿಂದು ವಿಶೇಷವಾಗಿ ಬೀಟ್ರೂಟ್ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಉದ್ದಿನ ದೋಸೆ, ನೀರ್ ದೋಸೆ, ಸೋರೆಕಾಯಿ ದೋಸೆ, ಜೋಳದ ದೋಸೆ ಸೇರಿ ಹತ್ತಾರು ಬಗೆಯ ವಿಶೇಷ ಹಾಗೂ ವಿಭಿನ್ನ ದೋಸೆ ಮಾಡಿ ಸವಿದಿರಬಹುದು, ಅದರಲ್ಲೂ ಕೆಲವೊಂದು ದೋಸೆ ನಿಮ್ಮ ದಿನವನ್ನು ಮತ್ತಷ್ಟು ಬೊಂಬಾಟ್ ಮಾಡಿರಬಹುದು.

ಆದ್ರೆ ಈ ಬೀಟ್ರೂಟ್ ದೋಸೆ ನೀವು ಮಾಡಿದ್ದೀರಾ? ಮಕ್ಕಳು ಮನೆಯಲ್ಲಿ ತಿಂಡಿ ಮಾಡುತ್ತಿಲ್ಲ ಎಂಬ ದೂರು ನಿಮ್ಮದಿದ್ದರೆ ಈ ಬೀಟ್ರೂಟ್ ದೋಸೆ ಮಾಡಿ ನೋಡಿ. ಇದರ ಬಣ್ಣ ನೋಡಿಯೇ ಒಂದು ದೋಸೆ ತಿನ್ನುತ್ತಿದ್ದವರು ಎರಡು ಮೂರು ತಿನ್ನೋದು ಪಕ್ಕ. ಹಾಗೆ ಎಲ್ಲಾ ತರಕಾರಿಗಳಿಗಿಂತ ಈ ಬೀಟ್ರೂಟ್‌ನ ದೋಸೆ ಬಹಳ ರುಚಿ ನೀಡಲಿದೆ, ನೀವು ಈ ದೋಸೆಯನ್ನು ರೋಸ್ಟ್ ಮಾಡಿ ಸವಿಯಬಹುದು.
ಹಾಗಾದ್ರೆ ನಾವಿಂದು ಈ ಬೀಟ್ರೂಟ್ ದೋಸೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೀಟ್ರೂಟ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಮೀಡಿಯಂ ರವೆ - 3 ಕಪ್
- ಕಡಲೆ ಬೇಳೆ-1 ಕಪ್
- ಮೊಸರು
- ಬೀಟ್ರೂಟ್
- ಹಸಿರು ಮೆಣಸಿನಕಾಯಿ
- ಶುಂಠಿ
- ಜೀರಿಗೆ
- ಉಪ್ಪು
- ಎಣ್ಣೆ
ಬೀಟ್ರೂಟ್ ದೋಸೆ ಮಾಡುವುದು ಹೇಗೆ?
ಮೊದಲು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕಡಲೆ ಬೇಳೆ ಹಾಕಿಕೊಂಡು ಅದಕ್ಕೆ ಮೀಡಿಯಂ ರವೆ ಅಥವಾ ಉಪ್ಪಿಟ್ಟು ರವೆ ಹಾಕಿಕೊಳ್ಳಿ. ಹಾಗೆ ಸಣ್ಣದಾಗಿ ಕತ್ತರಿಸಕೊಂಡಿರುವ ಬೀಟ್ರೂಟ್ ಸಹ ಸೇರಿಸಿಕೊಳ್ಳಿ. ಹಾಗೆ ಹಸಿ ಮೆಣಸು, ಶುಂಠಿ, ಜೀರಿಗೆ, ಉಪ್ಪು, ಸ್ವಲ್ಪ ನೀರು ಅಂದರೆ 1 ಕಪ್ ನೀರು ಹಾಕಿ ರುಬ್ಬಿಕೊಳ್ಳಬೇಕು.
ಉದ್ದಿನ ದೋಸೆ ಮಾಡಲು ಬೇಕಾಗುವಂತಹ ಹದದಲ್ಲಿಯೇ ಈ ದೋಸೆಯ ಹಿಟ್ಟು ಕೂಡ ಇರುವಂತೆ ಮಾಡಿಕೊಳ್ಳಿ. ಬಹಳ ತೆಳುವಾಗಿ ಹಿಟ್ಟು ಮಾಡಿಕೊಳ್ಳಬೇಡಿ. ನಂತರ ಈ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹಿಟ್ಟು ರೆಡಿಯಾಗುತ್ತೆ. ಇದು ಬಹಳ ಸುಲಭವಾಗಿ ಹಿಟ್ಟು ರೆಡಿ ಮಾಡಿಕೊಳ್ಳಬಹುದಾದ ರೆಸಿಪಿ.
ಹಾಗೆ ನೀವು ರವೆಯನ್ನು ನೀರಿನಲ್ಲಿ 15 ನಿಮಿಷ ನೆನೆಸಿಟ್ಟು ಕೂಡ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬಹುದು. ಹಾಗೆ ಈಗ ಒಲೆ ಮೇಲೆ ದೋಸೆ ಕಾವಲಿ ಇಟ್ಟು ಕಾಯಲು ಬಿಡಿ. ನಂತರ ಸ್ವಲ್ಪ ಎಣ್ಣೆ ಸವರಿಕೊಂಡು ನಂತರ ಸೆಟ್ ದೋಸೆ ಮಾದರಿಯಲ್ಲಿ ಹಿಟ್ಟನ್ನು ಮಧ್ಯದಲ್ಲಿ ಹಾಕಿಕೊಂಡು ಬೇಯಲು ಬಿಡಿ. ಹಾಗೆ ದೋಸೆಯ ಮೇಲೆ ಎಣ್ಣೆ ಹಾಕಿ ಒಂದು ಭಾಗ ಕರಿದ ಬಳಿಕ ಮತ್ತೊಂದು ಬದಿಯಲ್ಲಿ ಕರಿದುಕೊಳ್ಳಿ.
ಎರಡು ಕಡೆಯಲ್ಲಿ ರೋಸ್ಟ್ ಮಾಡಿಕೊಂಡರೆ ಅದ್ಭುತ ರುಚಿ ನೀಡಲಿದೆ. ನೀವು ಕೂಡ ಈ ರೀತಿಯಾಗಿ ದೋಸೆ ಮಾಡಿ ಸವಿದು ನೋಡಿ. ಬಹಳ ಸುಲಭವಾಗಿ, ಕಡಿಮೆ ವಸ್ತುಗಳ ಬಳಸಿ 5 ನಿಮಿಷದಲ್ಲಿ ಇದನ್ನು ಮಾಡಬಹುದು.



Click it and Unblock the Notifications
