Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಹೊಸ ರೀತಿ ಬೀಟ್ರೂಟ್-ಕ್ಯಾರೆಟ್ ರೈಸ್ ಅಡುಗೆ.! ಇಲ್ಲಿದೆ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಅತ್ಯಂತ ವೇಗವಾಗಿ ಯಾವುದಾದರು ರೈಸ್ ಬಳಸಿ ಮಾಡುವ ತಿಂಡಿ ಮಾಡಲು ಯೋಚನೆಯಲ್ಲಿದ್ದರೆ ಈ ಲೇಖನ ಸಹಾಯಕ್ಕೆ ಬರಲಿದೆ. ಏಕೆಂದರೆ ಬೆಳಗ್ಗೆ ಹೊಸ ರೀತಿ ತಿಂಡಿ ಮಾಡುವುದು ಒಂದು ಸವಾಲಿನ ಕೆಲಸ. ಅದರಲ್ಲೂ ನಿತ್ಯವೂ ಒಂದೊಂದು ರೀತಿ ತಿಂಡಿ ಮಾಡುವುದೆಂದರೆ ಅದೊಂದು ಸವಾಲು.
ಆದರೆ ರೈಸ್ ಬಳಸಿ ಮಾಡುವ ತಿಂಡಿ ಅಂದರೆ ನಿಮಗೆ ಥಟ್ ಅಂತ ಚಿತ್ರಾನ್ನ, ಪುಳಿಯೋಗರೆ, ಪಲಾವ್, ವಾಂಗೀಬಾತ್, ರೈಸ್ಬಾತ್ ನೆನಪಿಗೆ ಬರಬಹುದು. ಆದರೆ ಎಂದಾದರು ಬೀಟ್ರೂಟ್, ಕ್ಯಾರೆಟ್ ರೈಸ್ ಮಾಡಿ ಸವಿದಿದ್ದೀರಾ? ಹೌದು ಬೆಳಗ್ಗೆಯ ತಿಂಡಿಗೆ ನೀವು ಕ್ಯಾರೇಟ್, ಬೀಟ್ರೂಟ್ನಿಂದ ಅತ್ತಂತ ರುಚಿಕರ ರೈಸ್ ಮಾಡಬಹುದು.

ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಎಲ್ಲರು ಸವಿಯಬಹುದಾದ ರೈಸ್ ಅನ್ನು ಮಾಡಬಹುದು. ಹಾಗಾದರೆ ಈ ಬೀಟ್ರೂಟ್-ಕ್ಯಾರೆಟ್ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಇದನ್ನು ಮಾಡುವ ಸರಿಯಾದ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತವೆ ಎಂಬ ಕುರಿತ ಎಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಬೀಟ್ರೂಟ್- ಕ್ಯಾರೆಟ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಬೀಟ್ರೂಟ್-ಕ್ಯಾರೆಟ್ ತರಕಾರಿ ಎರಡೂ ಸೇರಿ 4 ಪೀಸ್ಗಳು
- ಹಸಿರು ಮೆಣಸಿನಕಾಯಿ - 2
- ಕೆಂಪು ಮೆಣಸಿನಕಾಯಿ - 2
- ಬೆಳ್ಳುಳ್ಳಿ-1
- ಈರುಳ್ಳಿ-1
- ಸಾಸಿವೆ - 1/4 ಟೀಸ್ಪೂನ್
- ಜೀರಿಗೆ - 1/2 ಟೀಸ್ಪೂನ್
- ಹುರಿಗಡಲೆ - 1 tbs
- ನೆಲಗಡಲೆ - 2 ಟೀಸ್ಪೂನ್
- ತುಪ್ಪ - 1 tbs
- ಅರಿಶಿನ ಪುಡಿ - 2 ಪಿಂಚ್ಗಳು
- ಖಾರದ ಪುಡಿ - 1/4 ಟೀಸ್ಪೂನ್
- ಜೀರಿಗೆ ಪುಡಿ - 1/4 ಟೀಸ್ಪೂನ್
- ಕರಿಮೆಣಸಿನ ಪುಡಿ - 1/4 ಟೀಸ್ಪೂನ್
- ಕರಿಬೇವಿನ ಎಲೆಗಳು - 1 tbs
- ಕೊತ್ತಂಬರಿ ಸೊಪ್ಪು - 1 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಬೀಟ್ರೂಟ್- ಕ್ಯಾರೆಟ್ ರೈಸ್ ಮಾಡುವ ವಿಧಾನ
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದಕ್ಕೆ ತುಪ್ಪ ಹಾಕಿ, ನಂತರ ಕಡಲೆ ಬೀಜ ಫ್ರೈ ಮಾಡಿ ಎತ್ತಿಟ್ಟುಕೊಳ್ಳಿ. ಬಳಿಕ ಅದೇ ಎಣ್ಣೆಗೆ ಕಡಲೆಬೇಳೆ, ಜೀರಿಗೆ, ಸಾಸಿವೆ ಹಾಕಿ ಫ್ರೈ ಮಾಡಿ ಬಳಿಕ ಹಸಿಮೆಣಸು, ಒಣ ಮೆಣಸು, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ.
ಇದಕ್ಕೆ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷ ಫ್ರೈ ಆದ ಬಳಿಕ ತುರಿದುಕೊಂಡ ಬೀಟ್ರೂಟ್ ಹಾಗೂ ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಉಪ್ಪು ಹಾಕಿ 3 ನಿಮಿಷ ಬೇಯಿಸಿಕೊಳ್ಳಿ. ಬೇಯಿಸಿದ ಬಳಿಕ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಅರಶಿನ, ಜೀರಿಗೆ ಪುಡಿ ಹಾಕಿ ಮಿಶ್ರಣ ಮಾಡಿ.
ಮಿಶ್ರಣದ ಬಳಿಕ ಮೊದಲು ಮಾಡಿಟ್ಟುಕೊಂಡ ಅನ್ನವನ್ನು ಅದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡುವಾಗ ಉರಿಯನ್ನು ಸಣ್ಣಗೆ ಇಟ್ಟುಕೊಳ್ಳಿ, ಅನ್ನ ಚೆನ್ನಾಗಿ ಮಿಕ್ಸ್ ಮಾಡಿದ ತಕ್ಷಣ ಒಲೆ ಆಫ್ ಮಾಡಿ ಇಳಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಬೀಟ್ರೂಟ್-ಕ್ಯಾರೆಟ್ ರೈಸ್ ರೆಡಿಯಾಗಿರುತ್ತೆ. ಇದನ್ನು ಬೆಳಗ್ಗೆ ತಿಂಡಿಗೆ, ಊಟದ ಬಾಕ್ಸ್ಗೆ ಹಾಕಿ ಸವಿಯಬಹುದು. ಈ ರೈಸ್ ಜೊತೆಗೆ ಚಟ್ನಿ, ಸಾಂಬಾರ್ ಯಾವುದಿದ್ದರೂ ಚೆನ್ನಾಗಿರುತ್ತದೆ. ಆದ್ರೆ ಮೊಸರು ಬಜ್ಜಿ ಇದಕ್ಕೆ ಹೇಳಿ ಮಾಡಿಸಿದ ಖಾದ್ಯವಾಗಲಿದೆ.



Click it and Unblock the Notifications
