Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಊಟದ ರುಚಿ ದುಪ್ಪಟ್ಟಾಗಿಸುವ ಕೆಲೆ ಉಸ್ಲಿ: ನಿಮಿಷಗಳಲ್ಲಿ ರೆಡಿ ಮಾಡಬಹುದು!
ಊಟದೊಂದಿಗೆ ಹಾಗೆ ತಿಂಡಿಯೊಂದಿಗೆ ನೀವು ಸವಿಯಲು ಹಲವು ರೀತಿಯ ಖಾದ್ಯಗಳ ಮಾಡುವುದು ಸಾಮಾನ್ಯ. ಅದ್ರಲ್ಲೂ ಕಾಳುಗಳಿಂದ ಮಾಡುವಂತ ರುಚಿ ರುಚಿಯ ಖಾದ್ಯವೂ ರುಚಿಯೊಂದಿಗೆ ಆರೋಗ್ಯಕ್ಕೂ ಕೂಡ ಇದು ಬಹಳ ಉತ್ತಮವಾಗಿರಲಿದೆ. ಹಾಗೆ ಊಟ ತಿಂಡಿಯೊಂದಿಗೆ ಸವಿಯಲು ನೀವು ಬಹಳ ಸುಲಭವಾಗಿ ಮಾಡುವ ಕಡಲೆ ಉಸ್ಲಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ.
ಕಡಲೆಯನ್ನು ಬಳಸಿಕೊಂಡು ಮಾಡುವ ಈ ಉಸ್ಲಿಯು ಊಟದೊಂದಿಗೆ ಹಾಗೆ ಎಲ್ಲಾ ಬಗೆಯ ತಿಂಡಿಯೊಂದಿಗೂ ರುಚಿ ನೀಡಲಿದೆ. ಇನ್ನು ಇದನ್ನು ಮಾಡುವುದು ಕೂಡ ಬಹಳ ಸುಲಭ. ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಿ ಸವಿಯಬಹುದು. ಹಾಗಾದ್ರೆ ನಾವಿಂದು ಬ್ರೇಕ್ ಫಾಸ್ಟ್, ಸ್ನ್ಯಾಕ್ಸ್ ಹಾಗೆ ರುಚಿ ರುಚಿಯಾದ ಊಟ ತಿಂಡಿಯೊಂದಿಗೆ ಸವಿಯಲು ಕಡಲೆ ಉಸ್ಲಿ ಮಾಡುವ ಕುರಿತು ತಿಳಿಯೋಣ.
ಕಡಲೆ ಕಾಳಿನ ಉಸ್ಲಿ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ ಖಾದ್ಯ. ಸುಲಭವಾಗಿ ಮನೆಯಲ್ಲಿ ಇದನ್ನು ಮಾಡಿಕೊಳ್ಳಬಹುದು. ಹಾಗಾದ್ರೆ ಈ ಕಡಲೆ ಉಸ್ಲಿ ಮಾಡುವುದು ಹೇಗೆ ಅನ್ನೊದನ್ನು ತಿಳಿದುಕೊಳ್ಳೋಣ. ಹಾಗೆ ಈ ಕಡಲೆ ಉಸ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕಡಲೆ ಉಸ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕಡಲೆಕಾಳು
- ಕರಿಬೇವು
- ತೆಂಗಿನಕಾಯಿ ತುರಿ
- ಎಣ್ಣೆ
- ಶುಂಠಿ
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸು
- ಸಾಸಿವೆ
- ಜೀರಿಗೆ
- ಉಪ್ಪು
- ಅರಶಿಣ
ಕಡಲೆ ಉಸ್ಲಿ ಮಾಡುವ ವಿಧಾನವೇನು?
ಮೊದಲಿಗೆ ಕಡಲೆ ಕಾಳನ್ನು ನೆನೆಸಿಡಬೇಕು. ಹಿಂದಿನ ದಿನ ರಾತ್ರಿ ನೆನೆಸಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಈ ಕಾಳುಗಳನ್ನು ಹಾಕಿ ನೀರು ಹಾಕಿಕೊಂಡು, ಬಳಿಕ ಉಪ್ಪು ಹಾಕಿ ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಡಿ. ಅನಂತರ ಕುಕ್ಕರ್ ತೆಗೆದು ಬದಿಗಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಹಸಿ ಶುಂಠಿ ಹಾಕಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಹಾಗೆ ರುಬ್ಬಿಕೊಂಡದ್ದ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಹಾಗೆ ಇದಕ್ಕೆ ಅರಶಿಣ, ಕರಿಬೇವು ಸಹ ಸೇರಿಸಿ ಉಪ್ಪು ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದಕ್ಕೆ ನೆನೆಸಿಟ್ಟ ಕಡಲೆಯನ್ನು ಹಾಕಿಕೊಳ್ಳಿ.
ಕೆಡಲೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಹುರಿದ ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಒಲೆಯಿಂದ ಇಳಿಸಿಕೊಳ್ಳಿ ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ಕಡಲೆ ಉಸ್ಲಿ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಎಲ್ಲರಿಗೂ ಇಷ್ಟವಾಗುವ ಜೊತೆಗೆ ಇದು ಆರೋಗ್ಯಕ್ಕೂ ಸಹ ಉತ್ತಮವಾಗಿರಲಿದೆ.
ಇದನ್ನು ಸಂಜೆ ಸಮಯದ ಸ್ನ್ಯಾಕ್ಸ್ ಆಗಿ ಹಾಗೆ ಬೆಳಗ್ಗೆ ತಿಂಡಿಗೂ ಸಹ ಮಾಡಿ ಸವಿಯಬಹುದು. ನೀವು ಸಹ ಮನೆಯಲ್ಲಿ ಇದನ್ನು ಸವಿದು ನೋಡಿ. ಮಕ್ಕಳಿಗೂ ಸಹ ಇದು ಇಷ್ಟವಾಗುವ ಖಾದ್ಯ ಆಗಿರಲಿದೆ.



Click it and Unblock the Notifications

