Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪಲಾವ್‌ಗಿಂತ ರುಚಿಯಾಗಿ ಮಾಡಿ ಈ ಬೀನ್ಸ್ ರೈಸ್: 10 ನಿಮಿಷ ಸಾಕಾಗುತ್ತೆ!
ನೀವು ಬೆಳಗ್ಗೆ ತಿಂಡಿಗಾಗಿ ವಿವಿಧ ರೀತಿಯ ಖಾದ್ಯಗಳ ಸವಿಯಬೇಕು ಎಂದು ಬಯಸುತ್ತೀರಿ, ಅದ್ರಲ್ಲೂ ಸುಲಭವಾಗಿ ಮಾಡುವಂತಹ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯಗಳ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ಬೆಳಗ್ಗೆ ತಂಡಿಗೆ ರೈಸ್‌ನಿಂದ ಮಾಡುವಂತಹ ವಿವಿಧ ಬಗೆಯ ಖಾದ್ಯಗಳಂತು ನಿಮಗೆ ಎಲ್ಲರಿಗೂ ಇಷ್ಟವಾಗುತ್ತೆ.
ಸಾಮಾನ್ಯವಾಗಿ ರೈಸ್ ರೆಸಿಪಿಗಳು ಅಂದ್ರೆ ಎಲ್ಲರೂ ಪಲಾವ್, ರೈಸ್ ಬಾತ್, ಪುಳಿಯೋಗರೆ, ಚಿತ್ರಾನ್ನ, ಬಿಸಿ ಬೇಳೆ ಬಾತ್‌ನಂತಹ ವಿಶೇಷ ರುಚಿಯ ಖಾದ್ಯಗಳನ್ನೇ ಇಷ್ಟಪಡುತ್ತಾರೆ. ಅದ್ರಲ್ಲೂ ತರಕಾರಿಗಳ ಹಾಕಿ ಮಾಡುವ ರೈಸ್ ರುಚಿಯ ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ ಎನ್ನಬಹುದು. ಇನ್ನು ಇಂತಹ ಖಾದ್ಯಗಳು ಮಧ್ಯಾಹ್ನದ ಬಾಕ್ಸ್‌ಗೂ ಕೂಡ ಹಾಕಿಕೊಂಡು ಸವಿಯಬಹುದು.

ಹಾಗಾದ್ರೆ ನಾವಿಂದು ಸುಲಭವಾಗಿ ಮಾಡಬಹುದಾದ ಹಾಗೆ ರುಚಿಕರವಾದ ಬೀನ್ಸ್ ರೈಸ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದ್ರಲ್ಲೂ ನೀವು ಸುಲಭವಾಗಿ, ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವಂತಹ ಖಾದ್ಯ ಇದು. ಹಾಗಾದ್ರೆ ಈ ಬೀನ್ಸ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೀನ್ಸ್ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ಕ್ಯಾರೆಟ್
- ಹಸಿರು ಬೀನ್ಸ್
- ಈರುಳ್ಳಿ
- ಒಣ ಮೆಣಸಿನಕಾಯಿ
- ಬೆಳ್ಳುಳ್ಳಿ
- ಜೀರಿಗೆ
- ಸಾಸಿವೆ
- ಇಂಗು
- ಅರಿಶಿನ ಪುಡಿ
- ಕೆಂಪು ಮೆಣಸಿನ ಪುಡಿ
- ಸಾಂಬಾರ್ ಪುಡಿ
- ಹುಣಸೆ ಹುಳಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬೀನ್ಸ್ ರೈಸ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ ಹಾಕಿಕೊಳ್ಳಿ, ನಂತರ ಇದಕ್ಕೆ ಒಣ ಮೆಣಸು, ಬೆಳ್ಳುಳ್ಳಿ, ಜಜ್ಜಿಕೊಂಡು ಹಾಕಿಕೊಳ್ಳಿ. ಹಾಗೆ ಇಂಗು, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ತುರಿದ ಕ್ಯಾರೆಟ್ ಹಾಗೂ ಸಣ್ಣದಾಗಿ ಪಲ್ಯಕ್ಕೆ ಕತ್ತರಿಸಿಕೊಂಡಂತೆ ಬೀನ್ಸ್ ಅನ್ನು ಹಾಕಿಕೊಳ್ಳಬೇಕು. ಹಾಗೆ ಕರಿಬೇವು ಹಾಗು ಉಪ್ಪು ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಚೆನ್ನಾಗಿ ಫ್ರೈ ಆದ ಬಳಿ ಈಗ ಅರಶಿಣ ಪುಡಿ, ಖಾರದ ಪುಡಿ, ಸಾಂಬಾರ್ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ನೀರಿನಲ್ಲಿ ನೆನಸಿಟ್ಟ ಹುಣಸೆ ಹುಳಿಯನ್ನು ಕಿವುಚಿ ಅದರ ರಸ ಮಾತ್ರ ಹಾಕಿಕೊಂಡು ಮಿಕ್ಸ್ ಮಾಡಿ 3 ನಿಮಿಷ ಬೇಯಲು ಬಿಡಿ.
ಇದು ಗೊಜ್ಜು ರೀತಿ ರೆಡಿಯಾಗಬೇಕು. ಈ ಗೊಜ್ಜು ರೆಡಿಯಾದ ಬಳಿಕ ಈಗ ಅನ್ನವನ್ನು ಹಾಕಿಕೊಳ್ಳಬೇಕು. ಹುಡಿ ಹುಡಿಯಾದ ಅನ್ನವನ್ನು ನಿಮಗೆ ಎಷ್ಟು ಬೇಕೋ ಅಷ್ಟು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಒಲೆ ಸಣ್ಣ ಉರಿಯಲ್ಲಿ ಇಟ್ಟು ಅನ್ನವನ್ನು 3ರಿಂದ 4 ನಿಮಿಷ ಬಿಸಿ ಮಾಡಿಕೊಳ್ಳಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು.
ಹೀಗೆ ಈ ರೈಸ್ ಅನ್ನು ಬಿಸಿ ಇದ್ದಾಗಲೇ ಸವಿಯಲು ನೀಡಬಹುದು. ಇದರಲ್ಲಿ ತರಕಾರಿಗಳು ಇರುವುದರಿಂದ ರುಚಿ ಅದ್ಭುತವಾಗಿರಲಿದೆ, ಪಲಾವ್‌ಗಿಂತಲೂ ರುಚಿ ರುಚಿಯಾದ ರೈಸ್ ಇದು. ಬೆಳಗ್ಗೆ ತಿಂಡಿಗೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು ಹಾಗೆ ಇದರ ರುಚಿ ಒಮ್ಮೆ ಸವಿದರೆ ನೀವು ಪದೇ ಪದೇ ಮಾಡಲು ಮುಂದಾಗುತ್ತೀರಿ. ಹಾಗೆ ಮಧ್ಯಾಹ್ನದ ಬಾಕ್ಸ್‌ಗೂ ಕುಡ ಇದು ಅದ್ಭುತ ರುಚಿ ನೀಡಲಿದೆ.



Click it and Unblock the Notifications
