Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬಟ್ಟೆ ಇಡ್ಲಿ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ಸುಲಭದ ಇಡ್ಲಿ ವಿಧಾನ!
ಇಡ್ಲಿಯಲ್ಲಿ ನೀವು ಎಷ್ಟೊದು ಬಗೆಯ ಇಡ್ಲಿಗಳ ಸವಿದಿರುತ್ತೀರಿ, ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಒಂದೊಂದು ಕಡೆಗಳಲ್ಲು ಒಂದೊಂದು ರೀತಿಯ ಇಡ್ಲಿ ಫೇಮಸ್ ಆಗಿರುತ್ತೆ. ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ಮಸಾಲೆ ಇಡ್ಲಿ, ಬಿಡದಿ ತಟ್ಟೆ ಇಡ್ಲಿ ಹೀಗೆ ಒಂದಲ್ಲಾ ಒಂದು ರೀತಿಯ ಇಡ್ಲಿ ವಿಧಾನದ ರುಚಿ ನೀವು ನೋಡಿಯೇ ನೋಡಿರುತ್ತೀರಿ.
ಆದ್ರೆ ಎಂದಾದ್ರು ಬಟ್ಟೆ ಇಡ್ಲಿ ರುಚಿ ಸವಿದಿದ್ದೀರಾ? ಹೌದು ನೀವು ಇದರ ಹೆಸರು ಈಗಲೇ ಕೇಳುತ್ತಿರಬಹುದು. ಆದ್ರೆ ಬಟ್ಟೆ ಇಡ್ಲಿ ಎಂಬ ಫೇಮಸ್ ಇಡ್ಲಿಯ ವಿಧಾನ ಈಗ ನಿಧಾನಕ್ಕೆ ವೈರಲ್ ಆಗುತ್ತಿದೆ. ಹೆಸರೇ ಸೂಚಿಸುವಂತೆ ಬಟ್ಟೆಯನ್ನು ಬಳಸಿಕೊಂಡು ಮಾಡುವಂತಹ ಈ ಇಡ್ಲಿ ಅದ್ಭುತ ರುಚಿಯ ಜೊತೆಗೆ ಅತ್ಯಂತ ಮೃದುವಾಗಿ ಮಾಡಬಹುದಾಗಿದೆ.

ಇಡ್ಲಿ ಅಂದರೆ ಮಕ್ಕಳು ವಯಸ್ಕರು ಎಲ್ಲರು ಬಹಳ ಇಷ್ಟ ಪಟ್ಟು ಸವಿಯುತ್ತಾರೆ. ಮಸಾಲೆಗಳು ಕಡಿಮೆ ಹಾಕಿ ಫೈಬರ್ ಹೆಚ್ಚಿರುವ ಕಾರಣ ಎಲ್ಲರ ಆರೋಗ್ಯಕ್ಕೂ ಇದು ಉತ್ತಮ. ತೂಕ ಇಳಿಸುವವರು, ಡಯೆಟ್ ಪ್ರಿಯರಿಗೆ ಈ ಇಡ್ಲಿಗಳು ಅಂದ್ರೆ ಪಂಚಪ್ರಾಣ. ಸದ್ಯ ಈಗ ಈ ಬಟ್ಟ ಇಡ್ಲಿ ಕುರಿತಂತೆ ನಾವು ತಿಳಿದುಕೊಳ್ಳೋಣ.
ಬಟ್ಟೆ ಇಡ್ಲಿಯು ವಿಭಿನ್ನ ರೀತಿಯ ಇಡ್ಲಿ ಅಲ್ಲ ಬದಲಿಗೆ ಅದನ್ನು ತಯಾರಿಸುವ ವಿಧಾನ ಸ್ವಲ್ಪ ಭಿನ್ನವಾಗಿದೆ. ಈ ವಿಧಾನದಲ್ಲಿ ಇಡ್ಲಿ ಹಿಟ್ಟನ್ನು ನೇರವಾಗಿ ಒದ್ದೆಯಾದ ಶುದ್ಧವಾದ ಬಟ್ಟೆಯ ಮೇಲೆ ಹಾಕಿ ಹಬೆಯಲ್ಲಿ ಬೇಯಿಸಿ ಅದ್ಭುತವಾದ ಇಡ್ಲಿ ಮಾಡಲಾಗುತ್ತದೆ. ಬಟ್ಟೆಯ ಬಳಸಿ ಸುಲಭವಾಗಿ ಈ ಇಡ್ಲಿಯನ್ನು ಮಾಡಬಹುದಾಗಿರುವುದರಿಂದ ಇದೊಂದು ಸುಲಭದ ವಿಧಾನವಾಗಿದೆ.
ಬಟ್ಟೆ ಇಡ್ಲಿಗಳನ್ನು ಬಟ್ಟೆಯ ಮೇಲೆ ಆವಿಯಲ್ಲಿ ಬೇಯಿಸಲಾಗುತ್ತದೆ - ಹಬೆಯಾಡಿಸಿದ ಗಂಟೆಗಳ ನಂತರವೂ ಮೃದುವಾಗಿರುತ್ತದೆ. ಹಾಗಾದ್ರೆ ಈ ಬಟ್ಟೆ ಇಡ್ಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು ಅನ್ನೋದನ್ನು ನೀವು ತಿಳಿದುಕೊಳ್ಳಿ.
ಮೊದಲು ಸಾಮಾನ್ಯವಾಗಿ ಇಡ್ಲಿ ಮಾಡಲು ಬೇಕಾಗುವಂತೆ ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಹಿಟ್ಟು ಮೃದುವಾಗಿರಲಿ. ಒಂದು ಕಪ್ ಅಕ್ಕಿ, ½ ಕಪ್ ಉದ್ದಿನ ಬೇಳೆ, 1 tbsp ಮೆಂತ್ಯ ಮತ್ತು ಅರ್ಧ ಕಪ್ ಅವಲಕ್ಕಿ ತೆಗೆದುಕೊಂಡು ಎಲ್ಲವನ್ನು ಬೇರೆ ಬೇರೆಯಾಗಿ ನೆನೆಸಿಡಬೇಕು. ಸುಮಾರು 4 ಗಂಟೆಗಳ ಕಾಲ ಆದರು ನೆನೆಸಿಡಬೇಕು.
ಹೀಗೆ ನೆನೆಸಿಟ್ಟ ಪದಾರ್ಥಗಳನ್ನು ಬೇರೆ ಬೇರೆಯಾಗಿ ಮಿಕ್ಸಿ ಜಾರ್ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ಅಗತ್ಯವಿದ್ದರೆ ಮಾತ್ರ ರುಬ್ಬುವಾಗ ನೀರು ಸೇರಿಸಿಕೊಳ್ಳಿ. ದೊಡ್ಡ ಪಾತ್ರೆಗೆ ಈ ಹಿಟ್ಟು ಹಾಕಿಕೊಳ್ಳಿ, ನೀರು ಕೂಡ ಅಳತೆಯಂತೆ ಹಾಕಿಕೊಳ್ಳಿ. ಒಂದು ರಾತ್ರಿ ಹಾಗೆಯೆ ಬಿಡಿ.
ಬೆಳಗ್ಗೆ ಹಾಗೆ ಇದಕ್ಕೆ ಸೋಡಾ ಹಾಕಬೇಡಿ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಹಿಟ್ಟು ರೆಡಿಯಾಗಿರುತ್ತದೆ.
ಬಟ್ಟೆ ಇಡ್ಲಿ ಮಾಡುವುದು ಹೇಗೆ?
ಬಾಣಲೆಯಲ್ಲಿ ಸ್ವಲ್ಪ ನೀರು ಸೇರಿಸಿ. ಅದನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ನೀರು ಕುದಿಯಲು ಆರಂಭಿಸಬೇಕು. ಹಾಗೆ ಒಂದು ಬಟ್ಟೆಯನ್ನು ನೀರಿನಿಂದ ನೆನೆಸಿಟ್ಟುಕೊಳ್ಳಿ. ನಿಧಾನವಾಗಿ ಬಟ್ಟೆಯ ಮೇಲೆ ಒಂದು ಲೋಟ ಇಡ್ಲಿ ಹಿಟ್ಟನ್ನು ಸೇರಿಸಿ ಮತ್ತು ಅದನ್ನು ಮುಚ್ಚಳದಿಂದ ಮುಚ್ಚಿ. ಹಬೆಯಲ್ಲಿ ಇಡ್ಲಿ ಬೇಯಿಸಿ. ನಂತರ ಬಟ್ಟೆಯಿಂದ ಇಡ್ಲಿಯನ್ನು ನಿಧಾನವಾಗಿ ಬಿಡಿಸಿ ಸವಿಯಲು ನೀಡಿದರೆ ನಿಮ್ಮ ಮುಂದೆ ಇಡ್ಲಿ ಬಟ್ಟೆ ಇಡ್ಲಿ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಮನೆಯಲ್ಲಿ ಮಾಡಬಹುದು. ಅಷ್ಟಕ್ಕೂ ಈ ವಿಧಾನದಿಂದ ಇಡ್ಲಿ ಮಾಡುವ ವಿಡಿಯೋ ಇಲ್ಲಿದೆ ನೋಡಿ.



Click it and Unblock the Notifications
