Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬ್ರೇಕ್ಫಾಸ್ಟ್ಗೆ ಮಾಡಿ ಸ್ಪೆಷಲ್ ಬಾತ್..! ಸುಲಭದ ರೆಸಿಪಿ ಇದು.!
ಮನೆಯಲ್ಲಿ ನೀವು ಬೆಳಗ್ಗೆ ತಿಂಡಿಗೆ ಎಷ್ಟೊಂದು ವಿಧದ ತಿಂಡಿ ಮಾಡಿ ಸವಿಯಲು ಇಷ್ಟಪಡುತ್ತೀರಿ. ಮುಖ್ಯವಾಗಿ ಕಡಿಮೆ ಸಮಯದಲ್ಲಿ ಯಾವುದಾದರು ತಿಂಡಿ ಮಾಡಲು ಯಾವಾಗಲು ಮುಂದಾಗುತ್ತಿರುತ್ತೀರಿ. ಅದರಲ್ಲೂ ರೈಸ್ನಿಂದ ಮಾಡುವಂತಹ ಇಷ್ಟದ ಖಾದ್ಯವನ್ನು ಮಾಡಿಯೇ ಮಾಡುತ್ತೀರಿ. ಪಲಾವ್, ಚಿತ್ರಾನ್ನ, ರೈಸ್ ಬಾತ್, ಟೊಮೆಟೋ ಬಾತ್ ಹೀಗೆ ಅದ್ಭುತ ರುಚಿಯಲ್ಲಿ ಹಲವು ರೀತಿಯ ಖಾದ್ಯ ಮಾಡಿ ಸವಿಯಲು ಮುಂದಾಗುವುದು ಸಾಮಾನ್ಯ.
ಹಾಗೆ ನಾವಿಂದು ಕಡಿಮೆ ಸಮಯದಲ್ಲಿ ಮಾಡುವಂತಹ ಅತ್ಯದ್ಭುತ ರುಚಿಯ ಬಾತ್ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಟೊಮೆಟೋ ಬಾತ್ ಅನ್ನು ಮನೆಯಲ್ಲಿ ಮಾಡಿಯೇ ಮಾಡಿರುತ್ತೀರಿ. ಗಡಿಬಿಡಿಯ ಸಂದರ್ಭದಲ್ಲಿ ಟೊಮೆಟೋ ಬಾತ್ ಮಾಡುವುದು ಸುಲಭ. ಕೆಲವೇ ವಸ್ತುಗಳ ಬಳಸಿಕೊಂಡು ಥಟ್ ಅಂತ ಮಾಡಿಬಿಡಬಹುದು.

ಹೀಗಾಗಿ ನಾವಿಂದು ಸುಲಭ ವಿಧಾನದಲ್ಲಿ ಹೆಚ್ಚು ವಸ್ತುಗಳ ಬಳಸದೆ ಸುಲಭವಾಗಿ ಈ ಬಾತ್ ಮಾಡುವ ಕುರಿತು ತಿಳಿದುಕೊಳ್ಳೋಣ. ಹಾಗಾದ್ರೆ ಬ್ರೇಕ್ಫಾಸ್ಟ್ಗೆ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಬಾತ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾತ್ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಟೊಮೆಟೋ - 5
- ಚಕ್ರಮೊಗ್ಗು
- ಏಲಕ್ಕಿ
- ಈರುಳ್ಳಿ
- ಕರಿಬೇವು
- ಹಸಿರು ಬಟಾಣಿ
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ಕೆಂಪು ಮೆಣಸಿನ ಪುಡಿ
- ತೆಂಗಿನಕಾಯಿ ತುರಿ
- ಹ ಮೆಣಸು
- ಶುಂಠಿ
- ದಾಲ್ಚಿನ್ನಿ
- ಲವಂಗ
- ಸೋಂಕಾಳು
- ಕರಿಬೇವು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬಾತ್ ಮಾಡುವ ವಿಧಾನ
ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ 2 ಪಲಾವ್ ಎಲೆ, ಲವಂಗ, ಸೋಂಕಾಳು, ಏಲಕ್ಕಿ, ಚಕ್ರಮೊಗ್ಗು ಹಾಕಿ ಬಿಸಿ ಮಾಡಿ. ಬಳಿಕ ಇದಕ್ಕೆ ಸಣ್ಣದಾಗಿ ಸ್ಲೈಸ್ ಮಾಡಿರುವ ಈರುಳ್ಳಿ ಸಹ ಹಾಕಿಕೊಳ್ಳಿ. ಅನಂತರ ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಹಸಿ ಬಟಾಣಿಯನ್ನು ಹಾಕಿ. ನಂತರ ಇದಕ್ಕೆ ಪುದಿನ ಎಲೆಗಳನ್ನು, ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಚಿಕ್ಕದಾಗಿ ಹೆಚ್ಚಿಕೊಂಡಿರುವ 3 ಟೊಮೆಟೋವನ್ನು ಹಾಕಿ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಫ್ರೈ ಆಗಲು ಬಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ, ಹಸಿ ಮೆಣಸು, ಚಕ್ಕೆ, ಲವಂಗ, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿದ ಮಸಾಲೆಯನ್ನು ಕುಕ್ಕರ್ಗೆ ಹಾಕಿಕೊಂಡು ಮಿಕ್ಸ್ ಮಾಡಿ 3 ನಿಮಿಷ ಫ್ರೈ ಮಾಡಿ.
ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಅಕ್ಕಿಯನ್ನು ನೆನೆಸಿಟ್ಟಿರಬೇಕು. ಈಗ ಕುಕ್ಕರ್ಗೆ ಅಳತೆ ಕಪ್ನಲ್ಲಿ 3 ಕಪ್ ನೀರು ಹಾಕಿಕೊಳ್ಳಿ. ಅಕ್ಕಿಯನ್ನು ಅದೇ ಕಪ್ನಲ್ಲಿ ಒಂದೂವರೆ ಕಪ್ ತೆಗೆದುಕೊಂಡಿರಿ. ಕುಕ್ಕರ್ಗೆ ನೀರು ಹಾಕಿ ಮಿಕ್ಸ್ ಮಾಡಿ, ಉಪ್ಪು ಬೇಕಿದ್ದರೆ ಹಾಕಿ ಕುದಿಯಲು ಬಿಡಿ. ಈಗ ಕುದಿಯುತ್ತಿದ್ದಾಗ ನೆನೆಸಿಟ್ಟಿರುವ ಅಕ್ಕಿಯನ್ನು ಈ ಕುಕ್ಕರ್ಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು. 2 ಸೀಟಿ ಹೊಡೆದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಅನಂತರ ಗ್ಯಾಸ್ ರಿಲೀಸ್ ಆಗಲುಬಿಡಿ, ನಂತರ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸವಿಯಲು ನೀಡಿ. ಇಷ್ಟಾದರೆ ಸ್ಪೆಷಲ್ ಬಾತ್ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಬ್ರೇಕ್ಫಾಸ್ಟ್ಗೆ ಇದನ್ನೊಮ್ಮೆ ಮಾಡಿ ಸವಿದು ನೋಡಿ.



Click it and Unblock the Notifications
