Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರೀತಿ ಅದ್ಭುತ ರುಚಿಯ ಬಟಾಣಿ ಚಿತ್ರಾನ್ನ ಮಾಡಿ..! ಎಲ್ಲರಿಗೂ ಇಷ್ಟವಾಗುತ್ತೆ!!
ಬೆಳಗ್ಗೆ ತಿಂಡಿಗೆ ರೈಸ್ ಬಳಸಿ ಮಾಡುವಂತಹ ಹಲವು ರೀತಿಯ ಖಾದ್ಯವನ್ನು ನೋವು ಮಾಡಿರುತ್ತೀರಿ. ಅದರಲ್ಲೂ ರಾತ್ರಿ ಊಟ ಮಾಡಿ ಅನ್ನ ಉಳಿದರೆ ಬೆಳಗ್ಗೆ ಅದನ್ನು ಚಿತ್ರಾನ್ನ ಮಾಡುವುದು ಎಲ್ಲರ ಮನೆಯಲ್ಲೂ ಕಾಮನ್. ಆದ್ರೆ ಚಿತ್ರಾನ್ನ ಅಂದ್ರೆ ಕೆಲವರು ಮೂಗು ಮುರಿಯುತ್ತಾರೆ. ಏಕೆಂದರೆ ಕೆಲವರಿಗೆ ಚಿತ್ರಾನ್ನ ಅಂದ್ರೆ ಇಷ್ಟವಾಗೋದಿಲ್ಲ. ಆದ್ರೆ ನೀವು ಯಾವಾಗಲು ಒಂದೇ ರೀತಿ ಚಿತ್ರಾನ್ನ ಮಾಡುವುದಕ್ಕಿಂತ ಸ್ವಲ್ಪ ಸ್ಪೆಷಲ್ ಆಗಿ ಮಾಡಿದ್ರೆ ಮನೆ ಮಂದಿ ಎಲ್ಲ ಕುಳಿತು ಇದನ್ನು ಸವಿಯಲು ಮುಂದಾಗುತ್ತಾರೆ.
ಆದ್ರೆ ಚಿತ್ರಾನ್ನದಲ್ಲಿ ಯಾವ ರೀತಿ ಸ್ಪೆಷಲ್ ಖಾದ್ಯ ಮಾಡಬಹುದು? ಚಿತ್ರಾನ್ನ ರುಚಿ ರುಚಿಯಾಗಿ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದಕೊಳ್ಳೋಣ. ನೀವು ಕೂಡ ಚಿತ್ರಾನ್ನವನ್ನ ವಿಭಿನ್ನ ರುಚಿಯಲ್ಲಿ ಮಾಡಿ ಸವಿಯಲು ಮುಂದಾಗಿರಬಹುದು. ಹಾಗೆ ಒಂದಿಷ್ಟು ರುಚಿಯ ಚಿತ್ರಾನ್ನ ನಿಮಗೂ ರುಚಿ ತಂದಿರಬಹುದು.

ಹಾಗಾದ್ರೆ ನಾವಿಂದು ಅದ್ಭುತ ರುಚಿಯ ಹೊಸ ರೀತಿಯಲ್ಲಿ ಬಟಾಣಿ ಚಿತ್ರಾನ್ನ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ನೀವು ಬಟಾಣಿ ಪಲಾವ್ ಮಾಡಿ ಸವಿದಿರಬಹುದು. ಇದರ ರುಚಿ ಕೂಡ ಅದ್ಭುತ ಎನಿಸಿರಬಹುದು. ಹಾಗೆ ಈ ಬಟಾಣಿಯ ಚಿತ್ರಾನ್ನ ಕೂಡ ಸಖತ್ ರುಚಿ ನೀಡಲಿದೆ. ಹಾಗಾದ್ರೆ ಈ ಬಟಾಣಿ ಚಿತ್ರಾನ್ನ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಟಾಣಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಟಾಣಿ ಚಿತ್ರಾನ್ನ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ - ಕಪ್
- ಹಸಿ ಬಟಾಣಿ ಅರ್ಧ ಕಪ್
- ಈರುಳ್ಳಿ 1
- ತೆಂಗಿನಕಾಯಿ ತುರಿ
- ಸಾಸಿವೆ
- ಅರಿಶಿಣ ಪುಡಿ
- ಶುಂಠಿ
- ಜೀರಿಗೆ
- ಹಸಿಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ನಿಂಬೆ ಹಣ್ಣಿನ ರಸ
- ಉಪ್ಪು
- ಎಣ್ಣೆ
ಬಟಾಣಿ ಚಿತ್ರಾನ್ನ ಮಾಡುವ ವಿಧಾನವೇನು?
ಮೊದಲು ಚಿತ್ರಾನ್ನಕ್ಕೆ ಬೇಕಾದ ಅನ್ನ ಉಳಿದಿದ್ದರೆ ಮತ್ತೆ ಮಾಡಿಕೊಳ್ಳಬೇಡಿ. ಒಂದು ವೇಳೆ ಹೊಸದಾಗಿ ಅನ್ನ ಮಾಡುವುದಾರೆ ಹುಡಿ ಹುಡಿಯಾಗಿ ಅನ್ನ ಆಗುವಂತೆ ಮಾಡಿಕೊಳ್ಳಿ. ಸ್ವಲ್ಪ ಕಡಿಮೆ ನೀರು ಇಟ್ಟು 2 ಸೀಟಿ ಹೊಡೆಸಿದ ಅನ್ನ ಮಾಡಿಕೊಳ್ಳಿ. ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಜೀರಿಗೆ, ಶುಂಠಿ, 5 ಹಸಿಮೆಣಸು, ತೆಂಗಿನ ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ತರಿ ತರಿಯಾಗಿ ರುಬ್ಬಿಕೊಂಡು ಬದಿಗಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ, ಸಾಸಿವೆ, ಅರಶಿಣ ಪುಡಿ, ಈರುಳ್ಳಿ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಹಸಿ ಬಟಾಣಿಯನ್ನು ಸಹ ಹಾಕಿಕೊಂಡು ಫ್ರೈ ಮಾಡಲು ಬಿಡಿ. 3 ನಿಮಿಷ ಫ್ರೈ ಮಾಡಿ. ಈಗ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಂಡಿದ್ದ ಮಸಾಲೆಗಳನ್ನು ಇದಕ್ಕೆ ಹಾಕಿ ಉಪ್ಪು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಮತ್ತೆ 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. 2 ನಿಮಿಷ ತಣ್ಣಗಾಗಲು ಬಿಟ್ಟು ಈಗ ಅನ್ನವನ್ನು ಹಾಕಿಕೊಂಡು ಮಿಕ್ಸ್ ಮಾಡಬೇಕು. ಅನ್ನ ಹುಡಿ ಹುಡಿಯಾಗಿದ್ದಷ್ಟು ಚಿತ್ರಾನ್ನ ಚೆನ್ನಾಗಿ ಆಗಲಿದೆ. ಇಷ್ಟಾದರೆ ಬಟಾಣಿ ಚಿತ್ರಾನ್ನ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಒಮ್ಮೆ ಈ ರೀತಿ ವಿಧವಾಗಿ ಚಿತ್ರಾನ್ನ ಮಾಡಿ ನೋಡಿ. ಎಲ್ಲರಿಗೂ ಇಷ್ಟವಾಗುತ್ತೆ. ಮಧ್ಯಾಹ್ನದ ಬಾಕ್ಸ್‌ಗೂ ಇದು ಅತ್ತುತ್ತಮ.



Click it and Unblock the Notifications
