Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಬಾಯಿಯಲ್ಲಿ ನೀರು ತರಿಸುವ ಬಟಾಣಿ ಚಿತ್ರಾನ್ನ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ನಾವು ಬೆಳಗ್ಗೆ ತಿಂಡಿಗೆ ಎಷ್ಟೆಲ್ಲಾ ಬಗೆಯ ಖಾದ್ಯ ಮಾಡಿರುತ್ತೇವೆ. ಅದರಲ್ಲೂ ಸುಲಭವಾಗಿ ಮಾಡುವಂತಹ ಖಾದ್ಯ ಅಂದ್ರೆ ಅದು ಚಿತ್ರಾನ್ನ. ಕೆಲವರು ಚಿತ್ರಾನ್ನ ಅಂದರೆ ಮೂಗು ಮುರಿಯುತ್ತಾರೆ. ಮತ್ತೆ ಕೆಲವರು ಹೋಟೆಲ್ಗೆ ತೆರಳಿದರು ಕೂಡ ಚಿತ್ರಾನ್ನ ಆರ್ಡರ್ ಮಾಡಿ ಸವಿಯುತ್ತಾರೆ. ಕೆಲವರಿಗೆ ಬೆಳಗ್ಗೆಯ ಚಿತ್ರಾನ್ನವನ್ನು ಮಧ್ಯಾಹ್ನ ಬಾಕ್ಸ್ಗೆ ಹಾಕಿಕೊಂಡು ಸವಿಯುತ್ತಾರೆ.
ಚಿತ್ರನ್ನಾವನ್ನ ಹಲವು ರೀತಿಯಲ್ಲಿ ಮಾಡಬಹುದು. ಚಿತ್ರಾನ್ನಕ್ಕೆ ನಾವು ಎಷ್ಟು ಪದಾರ್ಥಗಳ ಹಾಕಿ ಮಾಡುತ್ತೇವೋ ಅಷ್ಟು ರುಚಿಯಾಗಿರುತ್ತದೆ. ಹಾಗೆ ಕೆಲವೊಮ್ಮೆ ಹೆಚ್ಚು ಹೆಚ್ಚು ವಸ್ತು ಹಾಕಿದರೆ ಮತ್ತಷ್ಟು ರುಚಿ ಬರುತ್ತದೆ. ಆದ್ರೆ ಸಾಮಾನ್ಯವಾಗಿ ಚಿತ್ರಾನ್ನವನ್ನ ಕಡಿಮೆ ವಸ್ತುಗಳ ಹಾಕಿಯೇ ಮಾಡಲಾಗುತ್ತದೆ.

ಉಳಿದ ಅನ್ನಕ್ಕೆ ಒಂದು ಒಗ್ಗರಣೆ ರೀತಿ ಮಾಡಿ ನಿಂಬೆ ಹಣ್ಣು ಹಿಂಡಿ ಅದನ್ನೇ ಚಿತ್ರಾನ್ನ ಎಂದು ಸವಿಯಲು ನೀಡುವುದೇ ಹೆಚ್ಚು. ಆದ್ರೆ ರುಚಿ ರುಚಿಯ ಮಸಾಲೆ ಚಿತ್ರಾನ್ನ, ಮಾವಿನಕಾಯಿ ಚಿತ್ರಾನ್ನ, ಕಡಲೆ ಚಿತ್ರಾನ್ನ ಸೇರಿ ಹತ್ತಾರು ಬಗೆಯ ಚಿತ್ರಾನ್ನಗಳ ಮಾಡಬಹುದು. ಹೀಗೆ ನಾವಿಂದು ಬಟಾಣಿ ಹಾಕಿ ಮಾಡುವಂತಹ ವಿಶೇಷ ರುಚಿಯ ಚಿತ್ರಾನ್ನ ಮಾಡಿ ನೋಡೋಣ.
ಬಟಾಣಿ ಹಾಕಿ ಮಾಡುವ ಚಿತ್ರಾನ್ನ ರುಚಿಯಲ್ಲಿ ಎಲ್ಲದಕ್ಕಿಂತ ಬೆಸ್ಟ್ ಆಗಿರುತ್ತೆ. ಹೀಗಾಗಿಯೇ ನಾವಿಂದು ಈ ಹುಡಿ ಹುಡಿಯಾದ ರುಚಿಕರ ಬಟಾಣಿ ಚಿತ್ರಾನ್ನ ಮಾಡೋಣ. ಹಾಗಾದ್ರೆ ಬಟಾಣಿ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳೇನು? ಬಟಾಣಿ ಚಿತ್ರಾನ್ನ ಮಾಡುವ ವಿಧಾನವೇನು? ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ನೋಡೋಣ.
ಬಟಾಣಿ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ 1 ಕಪ್
- ಹಸಿ ಬಟಾಣಿ ಅರ್ಧ ಕಪ್
- ಈರುಳ್ಳಿ -1
- ತೆಂಗಿನಕಾಯಿ ತುರಿ
- ಎಣ್ಣೆ
- ಸಾಸಿವೆ
- ಅರಿಶಿಣದ ಪುಡಿ
- ಶುಂಠಿ
- ಜೀರಿಗೆ
- ಹಸಿಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ನಿಂಬೆ ಹಣ್ಣಿನ ರಸ
- ಉಪ್ಪು
ಬಟಾಣಿ ಚಿತ್ರಾನ್ನ ಮಾಡುವ ವಿಧಾನ
ನೀವು ಹಿಂದಿನ ದಿನ ಮಾಡಿದ್ದ ಅನ್ನವಿದ್ದರೆ ಅದನ್ನೆ ಬಳಸಬಹುದು. ಇಲ್ಲವೆ ಹುಡಿ ಹುಡಿಯಾಗಿ ಹೊಸದಾಗಿಯೂ ಅನ್ನ ಮಾಡಿಕೊಳ್ಳಬಹುದು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಶುಂಠಿ, ಜೀರಿಗೆ, ಹಸಿ ಮೆಣಸು, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಳ್ಳಿ ಹಾಗೆ ತರ ತರಿಯಾಗಿ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಜೀರಿಗೆ, ಅರಶಿನ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಹಸಿ ಬಟಾಣಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಇದಕ್ಕೆ ಹಾಕಿ. 3 ನಿಮಿಷಗಳ ಕಾಲ ಮಿಕ್ಸ್ ಮಾಡುತ್ತಾ ಇರಿ.
ನಂತರ ಮಿಕ್ಸಿ ಜಾರ್ನಲ್ಲಿ ರುಬ್ಬಿಕೊಂಡ ಮಸಾಲೆ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಈ ಫ್ರೈ ಮಾಡಿದ ಮಸಾಲೆಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡು ಮಿಕ್ಸ್ ಮಾಡಿ. ತಕ್ಷಣ ಒಲೆ ಆಫ್ ಮಾಡಿಕೊಳ್ಳಿ. ಈಗ ಇದಕ್ಕೆ ಅನ್ನ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನ್ನ ತಣ್ಣದಾಗಾದ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಬಟಾಣಿ ಚಿತ್ರಾನ್ನ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications