Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೆಂಗಳೂರು ಸ್ಪೆಷಲ್ ಎಕ್ರೆ ಇಡ್ಲಿ ಟ್ರೈ ಮಾಡಿ..! ಸಿಂಪಲ್ ರೆಸಿಪಿ..ಸಖತ್ ರುಚಿ!!
ನೀವು ಬೆಳಗ್ಗೆ ತಿಂಡಿಗೆ ಎಷ್ಟು ಬಗೆಯ ಇಡ್ಲಿ ಸವಿದಿದ್ದೀರಿ? ಈ ಪ್ರಶ್ನೆಗೆ ನಿಮ್ಮಲ್ಲಿ ಒಂದಿಷ್ಟು ಉತ್ತರ ಇರಬಹುದು. ಅಲ್ಲದೆ ನಿತ್ಯ ಕೆಲವೊಂದು ಕಡೆ ವಿಭಿನ್ನ ಹಸರಿನ ವಿಶೇಷ ರುಚಿಯ ಇಡ್ಲಿ ನೀವು ಸವಿದಿರಬಹುದು. ಇತ್ತೀಚಿಗೆ ಇಡ್ಲಿಯಲ್ಲಿ ಒಂದಿಷ್ಟು ಹೊಸ ರೀತಿಯ ಇಡ್ಲಿಯನ್ನು ಸಹ ಸವಿದಿರುತ್ತಿರಿ.
ವಿಶೇಷವಾಗಿ ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ಬಿಡದಿ ಇಡ್ಲಿಯಂತಹ ಕೆಲವು ವಿಭಿನ್ನ ರುಚಿಯ ಇಡ್ಲಿ ಸಹ ಸವಿದಿರುತ್ತೀರಿ. ಸಿರಿ ಧಾನ್ಯಗಳ ಇಡ್ಲಿ, ಗೋಧಿ ಇಡ್ಲಿ ಸೇರಿ ಹಲವು ಸ್ಪೆಷಲ್ ಇಡ್ಲಿ ಸಹ ಸವಿದಿರುತ್ತೇವೆ. ಇನ್ನು ಈ ಇಡ್ಲಿ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಕಡಿಮೆ ಎಣ್ಣೆಯ ಬಳಸಿ ಮಾಡೋದ್ರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಹೀಗಾಗಿ ನಾವಿಂದು ವಿಶೇಷ ಮತ್ತು ಸ್ಪೆಷಲ್ ಇಡ್ಲಿಯೊಂದರ ರೆಸಿಪಿ ಮಾಡಿ ನೋಡೋಣ. ನೀವು ಬೆಂಗಳೂರಿ ಹಲವು ಖಾದ್ಯಗಳ ಪೈಕಿ ಎಕ್ರೆ ಇಡ್ಲಿ ಖಾದ್ಯ ಸವಿದಿರಬಹುದು, ಇದು ಬೆಂಗಳೂರಿನ ಸ್ಪೆಷಲ್ ಇಡ್ಲಿಯಾಗಿದೆ. ಬೆಂಗಳೂರಿನ ಕೆಲವು ಹೋಟೆಲ್‌ಗಳಲ್ಲಿ, ಕ್ಯಾಂಟೀನ್‌ಗಳಲ್ಲಿ ಈ ಎಕ್ರೆ ಇಡ್ಲಿ ಸವಿಯಬಹುದು.
ಹಾಗಾದ್ರೆ ನಾವಿಂದು ಮನೆಯಲ್ಲೇ ಈ ಎಕ್ರೆ ಇಡ್ಲಿ ಮಾಡುವುದು ಹೇಗೆ ನೋಡೋಣ. ಈ ಎಕ್ರೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಂಡು ಮನೆಯಲ್ಲಿ ಒಮ್ಮೆ ಈ ತಿಂಡಿ ಮಾಡುವ ಪ್ರಯತ್ನ ಮಾಡೋಣ.
ಬೆಂಗಳೂರು ಸ್ಪೆಷಲ್ ಎಕ್ರೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
ಅಕ್ಕಿ - 4 ಗ್ಲಾಸ್
ಉದ್ದು - ಒಂದು ಕಾಲು ಕಪ್
ಉಪ್ಪು
ಎಣ್ಣೆ
ಸೋಡಾ (ಬೇಕಾದರೆ)
ಬೆಂಗಳೂರು ಸ್ಪೆಷಲ್ ಎಕ್ರೆ ಇಡ್ಲಿ ಮಾಡುವುದು ಹೇಗೆ?
ಒಂದು ಅಳತೆಯ ಕಪ್ ತೆಗೆದುಕೊಂಡು ಅದರಲ್ಲಿ 4 ಕಪ್ ಅಕ್ಕಿ ಲೆಕ್ಕ ಮಾಡಿ ಒಂದು ಬೌಲ್‌ಗೆ ಹಾಕಿ. ನಂತರ ಅದೇ ಕಪ್‌ನಲ್ಲಿ ಒಂದು ಕಾಲು ಕಪ್ ಉದ್ದಿನ ಬೇಳೆ ಹಾಕಿಕೊಂಡು ನೆನೆಯಲು ಬಿಡಬೇಕು. ಇದು ರಾತ್ರಿ ಇಡಿ ನೆನೆಯಬೇಕಾಗುತ್ತದೆ. ನಂತರ ಬೆಳಗ್ಗೆ ಎದ್ದು ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.
ರುಬ್ಬಿಕೊಳ್ಳುವಾಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ರುಬ್ಬಿಕೊಳ್ಳಬೇಕು. ಹೆಚ್ಚು ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಡಿ. ಹಿಟ್ಟು ದಪ್ಪವಾಗಿರಲಿ. ಹೀಗೆ ಹಿಟ್ಟು ರೆಡಿ ಮಾಡಿಕೊಳ್ಳಬೇಕು. ನಂತರ ಒಂದು ದೊಡ್ಡ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಕಲ್ಲು ಉಪ್ಪು ಹಾಕಿಕೊಂಡಿ ಮಿಕ್ಸ್ ಮಾಡಿ. ಕೈಯಿಂದಲೇ ಈ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಈ ಹಿಟ್ಟನ್ನು ಮುಚ್ಚಿಟ್ಟು ಸುಮಾರು 10 ಗಂಟೆಯಾದರು ಬಿಡಬೇಕು. ಅಂದರೆ ಹಿಂದಿನ ದಿನ ರಾತ್ರಿ ಮಾಡಿ ಇಡಬೇಕು. ಬೆಳಗ್ಗೆ ಹಿಟ್ಟು ಹುಳಿ ಬಂದಿರಬೇಕು. ಬೆಳಗ್ಗೆ ಮುಚ್ಚಳ ತೆಗೆದು ಹಿಟ್ಟನ್ನು ಒಂದು ಚಮಚದಿಂದ ಮಿಕ್ಸ್ ಮಾಡಿಕೊಳ್ಳಿ. ಈಗ ಇಡ್ಲಿ ಮಾಡಲು ತಯಾರಿ ಮಾಡಿಕೊಳ್ಳಿ.
ಈಗ ಒಂದು ತಟ್ಟೆ ತೆಗದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮಧ್ಯದಲ್ಲಿ ಹಿಟ್ಟು ಹಾಕಿಕೊಂಡು ಸುತ್ತಲು ಸವರಿಕೊಳ್ಳಿ. ತಟ್ಟೆ ಅಲುಗಾಡಿಸಿದರೆ ಹಿಟ್ಟು ಸುತ್ತಲು ಹರಡಿಕೊಳ್ಳುತ್ತದೆ. ಈಗ ಇಡ್ಲಿ ಮಾಡುವ ಪಾತ್ರೆ ಅಥವಾ ಕಡಬು ಮಾಡುವಂತಹ ಪಾತ್ರೆಯಲ್ಲಿ ಈ ತಟ್ಟೆ ಇಟ್ಟು ಇಡ್ಲಿ ಬೇಯಿಸಿಕೊಳ್ಳಬೇಕು. ಇದು ಎರಡೂ ಪಾತ್ರೆ ನಿಮ್ಮ ಬಳಿ ಇಲ್ಲ ಎಂದರೆ ಈ ರೀತಿ ಮಾಡಿ.
ಒಂದು ದೊಡ್ಡ ಬಾಣಲೆ ತೆಗೆದುಕೊಂಡು ಅದರಲ್ಲಿ ಅರ್ಧ ನೀರು ಇಟ್ಟು ಮತ್ತೊಂದು ಸಣ್ಣ ಬೌಲ್‌ನಲ್ಲಿ ನೀರು ಹಿಡಿದು ಪಲೆ ಮೇಲೆ ಇರುವ ಪಾತ್ರೆಯ ಮಧ್ಯದಲ್ಲಿ ಇಡಿ. ಈಗ ಈ ಎರಡೂ ಪಾತ್ರೆಯ ನೀರು ಒಟ್ಟಿಗೆ ಕುದಿಯಲು ಆರಂಭಿಸಿದಾಗ ಈ ಹಿಟ್ಟು ಹಾಕಿರುವ ತಟ್ಟೆಯನ್ನು ಅದರ ಮಧ್ಯದಲ್ಲಿ ಇಟ್ಟು ಮುಚ್ಚಿ. ಸುಮಾರು 15 ನಿಮಿಷ ಬೇಯಿಸಿದರೆ ಬೆಂಗಳೂರು ಸ್ಪೆಷಲ್ ಎಕ್ರೆ ಇಡ್ಲಿ ರೆಡಿಯಾಗುತ್ತದೆ. ಒಂದು ಇಡ್ಲಿ ಕತ್ತರಿಸಿದರೆ ಇಬ್ಬರಿಗೆ ಸಾಕಾಗುತ್ತದೆ.



Click it and Unblock the Notifications
