Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬ್ರೇಕ್ಫಾಸ್ಟ್ಗೆ ಬಾಳೆಕಾಯಿ ರೈಸ್; ನೀವೆಂದು ಟ್ರೈ ಮಾಡಿರದ ಟೇಸ್ಟ್ ಇದು!
ನೀವು ರೈಸ್ನಿಂದ ಮಾಡುವಂತಹ ಹಲವು ಬಗೆಯ ಖಾದ್ಯಗಳ ಸವಿದಿರುತ್ತೀರಿ. ಅದ್ರಲ್ಲೂ ಪಲಾವ್, ರೈಸ್ ಬಾತ್, ಬಿರಿಯಾನಿ, ಗೀರೈಸ್ ಸೇರಿದಂತೆ ಹಲವು ಬಗೆಯ ರೈಸ್ ಖಾದ್ಯಗಳು ನಿಮಗೆ ಇಷ್ಟವಾಗುತ್ತವೆ. ಅದ್ರಲ್ಲೂ ಬೆಳಗ್ಗೆ ತಿಂಡಿಯ ಸಮಯದಲ್ಲಿ ಮನೆ ಮಂದಿಯಲ್ಲರಿಗೂ ಇಷ್ಟವಾಗುವಂತಹ ಖಾದ್ಯವನ್ನೇ ಮಾಡಿ ಸವಿಯೋದು ನೋಡಬಹುದು. ಹಾಗೆ ಈ ರೈಸ್ ರೆಸಿಪಿಗಳ ಪೈಕಿ ನಾವಿಂದು ವಿಶೇಷ ರೀತಿಯ ಬ್ರೇಕ್ ಫಾಸ್ಟ್ ಮಾಡುವ ಕುರಿತು ತಿಳಿದುಕೊಳ್ಳೋಣ.
ಇನ್ನು ತಿಂಡಿಗೆ ವಿಶೇಷವಾಗಿ ಮಾಡುವಂತಹ ರುಚಿಯಲ್ಲಿ ನಾವಿಂದು ಬಾಳೆಕಾಯಿಯನ್ನು ಬಳಸಿಕೊಂಡು ಮಾಡುವ ವಿಭಿನ್ನ ಖಾದ್ಯ ಕುರಿತು ಹೇಳಲಿದ್ದೇವೆ. ಅದ್ರಲ್ಲೂ ಈ ಬಾಳೆಕಾಯಿ ರೈಸ್ ನೀವು ಒಮ್ಮೆ ಸವಿದರೆ ಪದೇ ಪದೇ ಮನೆಯಲ್ಲಿ ಮಾಡಿ ಸವಿಯೋದು ಖಚಿತ. ಇದರ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮಧ್ಯಾಹ್ನದ ಬಾಕ್ಸ್ಗೆ ಹೇಳಿ ಮಾಡಿಸಿದ ಖಾದ್ಯ ಇದು. ನೀವು ಬಾಳೆಕಾಯಿಯಿಂದ ಪಲ್ಯ ಹಾಗೂ ಸಾಂಬಾರ್ ಮಾಡಿರಬಹುದು, ಆದ್ರೆ ಈ ರೀತಿಯಲ್ಲಿ ಬಾಳೆಕಾಯಿ ರೈಸ್ ಮಾಡಿದ್ದೀರಾ?

ಬಾಳೆಕಾಯಿ ರೈಸ್ ವಿಭಿನ್ನ ರುಚಿ ನಿಡುವ ಖಾದ್ಯ. ಹಾಗಾದ್ರೆ ಮನೆಯಲ್ಲಿ ನಾವಿಂದು ಬಾಳೆಕಾಯಿಯ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಬಾಳೆಕಾಯಿ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಾಳೆಕಾಯಿ ರೈಸ್ ಮಾಡಲು ಬೇಕಾಗುವ ವಸ್ತುಗಳು
- ಬಾಳೆಕಾಯಿ
- ರೈಸ್
- ಉದ್ದಿನ ಬೇಳೆ
- ಕಡಲೆ ಬೇಳೆ
- ಒಣ ಮೆಣಸು
- ಜೀರಿಗೆ
- ಕಾಳು ಮೆಣಸು
- ಬಿಳಿ ಎಳ್ಳು
- ಸಾಸಿವೆ
- ಬೆಳ್ಳುಳ್ಳಿ
- ಈರುಳ್ಳಿ
- ಕರಿಬೇವು
- ಇಂಗು
- ಅರಿಶಿನ ಪುಡಿ
- ತುಪ್ಪ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬಾಳೆಕಾಯಿ ರೈಸ್ ಮಾಡುವ ವಿಧಾನವೇನು?
ಮೊದಲಿಗೆ ಬಾಳೆಕಾಯಿಯನ್ನು ತೊಳೆದುಕೊಂಡು ಸಿಪ್ಪೆ ತೆಗದುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ. 2 ನಿಮಿಷ ಬಿಟ್ಟು ಒಣ ಮೆಣಸು, ಕಾಳು ಮೆಣಸು, ಜೀರಿಗೆ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಎಳ್ಳು ಹಾಕಿ ಒಲೆ ಆಫ್ ಮಾಡಿ ಇಳಿಸಿಕೊಂಡು ತಣ್ಣಗಾಗಲು ಬಿಡಿ.
ಈಗ ಇದೇ ಬಾಣಲೆಗೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ಇದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿ. ನಂತರ ಒಣ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಕರಿಬೇವು ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ಈಗ ಸಿಪ್ಪೆ ತೆಗೆದಿರುವ ಬಾಳೆಕಾಯಿಯನ್ನು ಚೌಕಾಕಾರವಾಗಿ ಸಣ್ಣದಾಗಿ ಕತ್ತರಿಸಿಕೊಳ್ಳಿ ದೊಡ್ಡದಾಗಿದ್ದರೆ ಹೆಚ್ಚು ಸಮಯ ಬೇಯಿಸಬೇಕಾಗುತ್ತದೆ. ಈ ಬಾಳೆಕಾಯಿ ಹಾಕಿ ಬಳಿಕ ಉಪ್ಪು ಹಾಗೆ ಅರಶಿಣ ಪುಡಿ, ಇಂಗು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಚೆನ್ನಾಗಿ ಬೇಯಿಸಿಕೊಳ್ಳಬೇಕು. ಈ ಸಮಯದಲ್ಲಿ ಮೊದಲು ಹುರಿದುಕೊಂಡ ಮಸಾಲೆಗಳನ್ನು ಮಿಕ್ಸಿ ಜಾರ್ಗೆ ಹಾಕಿ ತರಿ ತರಿಯಾದ ಪುಡಿ ಮಾಡಿಟ್ಟುಕೊಳ್ಳಿ. ಈಗ ಮೊದಲೇ ಮಾಡಿರುವ ಅನ್ನವನ್ನು ಬಾಳೆಕಾಯಿ ಬೆಂದಿದ್ದರೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಹಾಗೆ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಯನ್ನು ಸಹ ಇದಕ್ಕೆ ಹಾಕಿಕೊಂಡು 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಕೊನೆಯಲ್ಲಿ ತುಪ್ಪ ಹಾಕಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪು ಸಹ ಹಾಕಿ ಇಳಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಬಾಳೆಕಾಯಿ ರೈಸ್ ಸಿದ್ದವಾಗುತ್ತೆ. ಬ್ರೇಕ್ಫಾಸ್ಟ್ಗೆ ಇದು ಅದ್ಭುತ ರುಚಿ ನೀಡುವಂತಹ ಖಾದ್ಯ ಆಗಿರಲಿದೆ.



Click it and Unblock the Notifications
