Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವಾರದಲ್ಲಿ ತೂಕ ಹೆಚ್ಚಿಸುವ ಬಾಳೆಹಣ್ಣಿನ ಪ್ರೋಟೀನ್ ಶೇಕ್: ಮನೆಯಲ್ಲೇ ಮಾಡೋದು ಹೇಗೆ?
ನೀವು ಬಹಳ ತೆಳ್ಳಗಿದ್ದರೆ ದಪ್ಪ ಆಗಲು ಅಥವಾ ತೂಕ ಹೆಚ್ಚಿಸಿಕೊಳ್ಳಲು ಹಲವು ರೀತಿಯ ಉಪಾಯಗಳ ಮಾಡಿರುತ್ತೀರಿ. ಅದ್ರಲ್ಲೂ ಹಲವು ರೀತಿಯ ಔಷಧಿಗಳಿಂದ ಹಿಡಿದು ಆಹಾರಗಳ ಸೇವಿಸುವುದು ನೋಡಬಹುದು. ದಪ್ಪ ಆಗಲೆಂದೇ ಹಲವರು ವಿಶೇಷ ರೀತಿಯ ಖಾದ್ಯಗಳ ಸೇವಿಸುವುದು ಸಾವಿರಾರು ರೂಪಾಯಿ ಖರ್ಚು ಮಾಡುವುದು ನೋಡಬಹುದು.
ಹಾಗೆ ಹಲವು ರೀತಿಯ ಫುಡ್ ಸೇವನೆ ಮೂಲಕ ನೀವು ತೂಕ ಹೆಚ್ಚಿಸಿಕೊಳ್ಳಲು ಮುಂದಾಗುವುದು ನೋಡಬಹುದು. ಹಾಗೆ ಕೆಲವರು ಯಾವುದೇ ಫುಡ್ ಸೇವಿಸದೆ ಇದ್ದರೂ ತೂಕ ಹೆಚ್ಚಳ ಆಗೋದು ನೋಡಬಹುದು. ಇನ್ನು ಇಂದು ನಾವು ಕಡಿಮೆ ತೂಕ ಇರುವ ಮಂದಿ ಮನೆಯಲ್ಲಿ ಕುಳಿತು ಹೇಗೆ ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಅದ್ರಲ್ಲೂ ಮನೆಯಲ್ಲೇ ನಾವು ತಯಾರಿಸುವ ಈ ಒಂದು ಪ್ರೋಟೀನ್ ಶೇಕ್‌ನಿಂದ ತೂಕ ಹೆಚ್ಚಿಸಿಕೊಳ್ಳುವ ಕುರಿತು ತಿಳಿಯೋಣ. ಬಾಳೆಹಣ್ಣಿನ ಈ ಶೇಕ್ ಮಾಡಿ ಸವಿದರೆ ನಿಮ್ಮ ತೂಕ ವಾರದಲ್ಲಿ ಹೆಚ್ಚಾಗೋದು ಖಚಿತ. ಆದ್ರೆ ಇದನ್ನು ಸರಿಯಾದ ಪ್ರಮಾಣದಲ್ಲಿ ಮಾಡಿ ಸವಿಯಬೇಕು. ಹಾಗಾದ್ರೆ ಸುಲಭದ ಹಾಗೆ ಬಹಳ ಕಡಿಮೆ ಸಮಯದಲ್ಲಿ ಮಾಡಬಹುದಾದ ಬಾಳೆಹಣ್ಣಿನ ಪ್ರೋಟೀನ್ ಶೇಕ್ ಮಾಡುವುದು ಹೇಗೆ?
ಬಾಳೆಹಣ್ಣಿನ ಪ್ರೋಟೀನ್ ಶೇಕ್ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಂಬುದನ್ನು ನೋಡಿ.
ಬಾಳೆಹಣ್ಣಿನ ಪ್ರೋಟೀನ್ ಶೇಕ್ ಮಾಡಲು ಬೇಕಾಗುವ ಪದಾರ್ಥಗಳು
- ಬಾಳೆಹಣ್ಣು
- ಪಿಸ್ತಾ
- ವಾಲ್ನಟ್
- ಗೋಡಂಬಿ
- ಹಾಲು
- ಓಟ್ಸ್
- ಸಕ್ಕರೆ/ಬೆಲ್ಲ
ಬಾಳೆಹಣ್ಣಿನ ಪ್ರೋಟೀನ್ ಶೇಕ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಗೋಡಂಬಿ, ಪಿಸ್ತಾ, ವಾಲ್ನಟ್, ಕಲ್ಲಂಗಡಿ ಬೀಜ ಹಾಕಿ ಸಣ್ಣ ಉರಿಯಲ್ಲಿ 2ರಿಂದ 3 ನಿಮಿಷ ಚೆನ್ನಾಗಿ ಹುರಿದುಕೊಳ್ಳಬೇಕು. ಈಗ 2 ಸ್ಪೂನ್ ಓಟ್ಸ್ ಹಾಕಿಕೊಂಡು ಮತ್ತೆ 1 ನಿಮಿಷ ಹುರಿದುಕೊಂಡು ಒಲೆ ಆಫ್ ಮಾಡಿಕೊಳ್ಳಿ.
ನಂತರ ಇದನ್ನು ತಣ್ಣಗಾಗಲು ಬಿಡಿ. ಈಗ ಒಂದು ಬೌಲ್‌ಗೆ ಸಿಪ್ಪೆ ಬಿಡಿಸಿದ 2 ಬಾಳೆಹಣ್ಣು ಹಾಕಿಕೊಂಡು ಅದನ್ನು ಪುಡಿ ಮಾಡಿಕೊಳ್ಳಿ. ಚಮಚದ ಸಹಾಯದಿಂದ ಪುಡಿ ಪುಡಿ ಮಾಡಿಕೊಳ್ಳಿ. ಮೆತ್ತಗಾದ ಬಳಿಕ ಇದಕ್ಕೆ ಹುರಿದುಕೊಂಡ ಎಲ್ಲಾ ಡ್ರೈ ಫ್ರೂಟ್ಸ್ ಅನ್ನು ಈ ಬೌಲ್‌ಗೆ ಹಾಕಿಕೊಳ್ಳಿ.
ಈಗ ಕುದಿಸಿ ತಣ್ಣಗೆ ಮಾಡಿದ ಹಾಲನ್ನು ಇದಕ್ಕೆ ಹಾಕಿಕೊಳ್ಳಿ. ಸಿಹಿ ಬೇಕಾದರೆ ಸಕ್ಕರೆ, ಬೆಲ್ಲ ಹಾಕಬಹುದು. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಪ್ರೋಟೀಸ್ ಶೇಕ್ ರೆಡಿಯಾಗುತ್ತದೆ. ಆದ್ರೆ ಇದರಲ್ಲಿನ ಡ್ರೈ ಫ್ರೂಟ್ಸ್ ಇನ್ನು ನುಣ್ಣಗೆ ಆಗಬೇಕಾದರೆ ಬಾಳೆ ಹಣ್ಣಿಗೆ ಹಾಕಿದ ಬಳಿಕ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಕುಡಿಯಬಹುದು. ಇದನ್ನು ನಿತ್ಯ ನೀವು ಸೇವಿಸಲು ಮುಂದಾದರೆ ಒಂದು ವಾರದಲ್ಲಿ ನಿಮ್ಮ ತೂಕ ಹೆಚ್ಚಳ ಆಗುತ್ತಿರುವುದು ನೀವು ಗಮನಿಸಬಹುದು.
ಈ ರೀತಿಯ ಪ್ರೋಟೀನ್ ಶೇಕ್ ಅನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಹೆಚ್ಚು ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಅನ್ನು ನೀವು ಹುರಿದು ಇಟ್ಟುಕೊಂಡಿದ್ದರೆ ಬಾಳೆಹಣ್ಣನ್ನು ಮಿಕ್ಸಿಯೊಂದಿಗೆ ಹಾಕಿ 5 ನಿಮಿಷದಲ್ಲಿ ಈ ಪ್ರೋಟೀನ್ ಶೇಕ್ ಸೇವಿಸಬಹುದು. ಅಂಗಡಿಗಳಲ್ಲಿ ಸಿಗುವಂತಹ ರುಚಿಯಲ್ಲಿಯೇ ಮಾಡಬಹುದು. ಬಹಳ ಕಡಿಮೆ ತೂಕ ಹೊಂದಿರುವ ಮಂದಿಗೆ ಇದು ಅನುಕೂಲಕರವಾಗಲಿದೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನಿಮ್ಮ ತೂಕ ಹೆಚ್ಚಾಗುವುದನ್ನು ನೀವೇ ಗಮನಿಸಬಹುದು.



Click it and Unblock the Notifications
