Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚಪಾತಿ, ದೋಸೆ, ಅನ್ನಕ್ಕೆ ಈ ಬಾಳೆಕಾಯಿ ಪಲ್ಯ ಮಾಡಿ..! ಅದ್ಭುತ ರುಚಿ
ಊಟ, ತಿಂಡಿಗೆ ಏನಾದರು ಸೈಡ್ ಡಿಶ್ ಆಗಿ ಪಲ್ಯ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಅದರಲ್ಲೂ ವಿಶೇಷ ರುಚಿಯಲ್ಲಿ ವಿಭಿನ್ನವಾಗಿ ಮಾಡುವಂತಹ ಯಾವುದೇ ಪಲ್ಯ ಅಂದಿನ ಊಟದ ರುಚಿ ಹೆಚ್ಚಿಸುತ್ತೆ. ಹಾಗಾದ್ರೆ ಹಾಗೆ ಮಸಾಲೆಯುಕ್ತ ಪಲ್ಯವು ರುಚಿ ಹೆಚ್ಚಿಸುವಲ್ಲಿ ನಂಬರ್ ಒನ್
ಇಂತಹ ರುಚಿಕರ ಪಲ್ಯದಲ್ಲಿ ನಾವಿಂದು ಬಾಳೆಕಾಯಿಯಿಂದ ಮಾಡುವಂತಹ ರುಚಿಕರ ಪಲ್ಯದ ಕುರಿತು ತಿಳಿಯೋಣ. ತರಕಾರಿ ಅಂಗಡಿಗಳಲ್ಲಿ ನಾವು ನೋಡಿರುತ್ತೇವೆ ಕೆಜಿಗಟ್ಟಳೆ ಬಾಳೆಕಾಯಿ ಇಟ್ಟಿರುತ್ತಾರೆ, ಆದ್ರೆ ಕೆಲವರು ಹಬ್ಬ, ವಿಶೇಷ ಸಂದರ್ಭದಲ್ಲಿ ಬಾಳೆಕಾಯಿಯ ಪಲ್ಯ ಮಾಡುತ್ತಾರೆ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು.

ಹಾಗಾದ್ರೆ ನಾವಿಂದು ಕೂಡ ಈ ಮಸಾಲೆಯುಕ್ತ ಪಲ್ಯ ಮಾಡುವುದು ಹೇಗೆ? ಊಟಕ್ಕೆ ಈ ಪಲ್ಯ ಇದ್ದರೆ ಒಳ್ಳೆಯ ಕಾಂಬಿನೇಷನ್ ಆಗುವುದು ಖಚಿತ. ಬಾಳೆಕಾಯಿ ಪಲ್ಯವನ್ನು ಹಲವು ರೀತಿಯಲ್ಲಿ ಮಾಡಬಹುದು. ಇದರಲ್ಲಿ ಮಾಡುವ ಸಾಂಬಾರ್ ಕೂಡ ಅಷ್ಟೇ ರುಚಿಯಾಗಿರುತ್ತೆ. ಬಾಳೆಕಾಯಿಯ ಬಜ್ಜಿ ಕೂಡ ಮಾಡಿ ಸವಿಯೋದನ್ನು ನಾವು ನೋಡಿದ್ದೇವೆ. ಇದನ್ನು ದೋಸೆ, ಪೂರಿ, ಚಪಾತಿ ಸೇರಿ ಎಲ್ಲಾ ತಿಂಡಿಯ ಜೊತೆಗೂ ಸವಿಯಬಹುದು.
ಹಾಗಾದ್ರೆ ಈ ಬಾಳೆಕಾಯಿ ಪಲ್ಯ ಮಾಡುವುದು ಹೇಗ? ಬಾಳೆಕಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾಳೆಕಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬಾಳೆಕಾಯಿ- 2 ರಿಂದ 3
- ಈರುಳ್ಳಿ- 1
- ಟೊಮೊಟೋ - 1
- ತೆಂಗಿನಕಾಯಿ ತುರಿ
- ಎಣ್ಣೆ
- ಸಾಸಿವೆ
- ಜೀರಿಗೆ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಬೆಳ್ಳುಳ್ಳಿ
- ಸೋಂಪು ಕಾಳು
- ಏಲಕ್ಕಿ
- ಲವಂಗ 2
- ಚಕ್ಕೆ
- ಅರಿಶಿನದ ಪುಡಿ
- ಕಾರದ ಪುಡಿ
- ದನಿಯ ಪುಡಿ
- ಉಪ್ಪು
ಬಾಳೆಕಾಯಿ ಪಲ್ಯ ಮಾಡುವುದು ಹೇಗೆ?
ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿ. ಬಳಿಕ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಹಾಕಿ 30 ಸೆಕೆಂಡ್ ಫ್ರೈ ಮಾಡಿ, ಬಳಿಕ ಈರುಳ್ಳಿ ಹಾಕಿಕೊಂಡು 4 ನಿಮಿಷ ಫ್ರೈ ಮಾಡಿ. ಇದಾದ ನಂತರ ಒಂದು ಟೊಮೆಟೋ ಹೆಚ್ಚಿಕೊಂಡು ಇದಕ್ಕೆ ಹಾಕಿ, ಉಪ್ಪು ಸಹ ಹಾಕಿಕೊಂಡು 4 ನಿಮಿಷ ಫ್ರೈ ಮಾಡಿ. ನಂತರ ಒಲೆ ಆಫ್ ಮಾಡಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ತೆಂಗಿನ ತುರಿ, ಚೆಕ್ಕೆ, ಲವಂಗ ಏಲಕ್ಕಿ ಸೋಂಪು ಕಾಳು ಹಾಕಿ ಚೂರು ನೀರು ಹಾಕಿ ರುಬ್ಬಿಕೊಳ್ಳ. ಈ ವೇಳೆ ಮತ್ತೆ ಕುಕ್ಕರ್ಗೆ ಗ್ಯಾಸ್ ಆನ್ ಮಾಡಿಕೊಳ್ಳಿ. ನಂತರ ಖಾರದ ಪುಡಿ, ಧನಿಯಾ ಪುಡಿ, ಅರಶಿನ ಹಾಕಿ ಮಿಕ್ಸ್ ಮಾಡಿ.
ಈಗ ಕತ್ತರಿಸಿಕೊಂಡಿರುವ ಬಾಳೆಕಾಯಿಯನ್ನು ಕುಕ್ಕರ್ಗೆ ಹಾಕಿ ತಿರುಗಿಸಿಕೊಳ್ಳಿ. ಈ ಬಾಳೆಯಿಯನ್ನು ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಬೇಕು. ಈಗ ಕುಕ್ಕರ್ಗೆ ಮತ್ತೆ ಸ್ವಲ್ಪ ಉಪ್ಪು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮಿಕ್ಸಿ ಜಾರ್ನಲ್ಲಿ ರುಬ್ಬಿದ ಈ ಮಸಾಲೆಯನ್ನು ಕುಕ್ಕರ್ ಗೆ ಹಾಕಿ ತಿರುಗಿಸಿಕೊಳ್ಳಿ. ಸ್ವಲ್ಪ ನೀರು, ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ.
1 ಸೀಟಿ ಹೊಡೆದ ಬಳಿಕ ತಣ್ಣಗಾಗಲು ಬಿಡಿ ನಂತರ ಕುಕ್ಕರ್ ಮುಚ್ಚಳ ತೆರೆದು ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಿಮಗೆ ಎಷ್ಟು ಗಟ್ಟಿ ಬೇಕು ತೆಳು ಬೇಕೋ ಅಷ್ಟು ನೀರು ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ಬಾಳೆಕಾಯಿ ಪಲ್ಯ ಸಿದ್ಧವಾಗುತ್ತದೆ.



Click it and Unblock the Notifications
