Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
Breakfast Recipe: ಎರಡು ಬಾಳೆಹಣ್ಣಿದ್ದರೆ ಈ ರುಚಿಕರ ಪಡ್ಡು ರೆಡಿ..! ಹೇಗೆ ಮಾಡೋದು?
ನೀವು ನಿತ್ಯ ಒಂದೊಂದು ಹೊಸ ತಿಂಡಿ ಮಾಡುವ ಬಗ್ಗೆ ಆಸಕ್ತಿ ಹೊಂದಿರಬಹುದು. ಆದ್ರೆ ಯಾವ ತಿಂಡಿ ಮಾಡಬೇಕು? ಯಾವುದರಿಂದ ಮಾಡಬೇಕು ಎಂಬುದು ನಿಮಗೆ ತಿಳಿದಿರುವುದಿಲ್ಲ. ಇಂತಹ ನಿಮ್ಮ ಹಲವು ಗೊಂದಲ, ಪ್ರಶ್ನೆ ನಿವಾರಿಸಲು ನಾವಿಂದು ಅತ್ಯಂತ ಸುಲಭದ ಹೊಸದೊಂದು ತಿಂಡಿ ಮಾಡುವುದನ್ನು ಹೇಳುತ್ತೇವೆ ನೋಡಿ.
ಎರಡು ಬಾಳೆ ಹಣ್ಣಿನ ಮೂಲಕ ಈ ತಿಂಡಿ ಮಾಡಬಹುದು. ಬೆಳಗಿನ ಬ್ರೇಕ್ಫಾಸ್ಟ್ಗೆ ಹೇಳಿ ಮಾಡಿಸಿದ ತಿಂಡಿ ಇದು. ಮಕ್ಕಳ ತಿಂಡಿ ತಿನ್ನುವುದಿಲ್ಲ. ಹಠ ಮಾಡುತ್ತಾರೆ ಎಂಬ ನಿಮ್ಮ ದೂರು ಇದ್ದರೆ ಒಮ್ಮೆಯಾದರು ಮನೆಯಲ್ಲಿ ಈ ತಿಂಡಿಯನ್ನ ಟ್ರೈ ಮಾಡಿ ನೋಡಿ. ಇದರಿಂದ ನಿಮ್ಮ ಮಕ್ಕಳು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ನೀವು ಪಡ್ಡು ಮಾಡಿ ಸವಿದಿರುತ್ತೀರಿ. ಅಕ್ಕಿ ಹಿಟ್ಟಿನಿಂದ ಮಾಡುವ ಅತ್ಯಂತ ರುಚಿಕರ ತಿಂಡಿ ಇದಾಗಿದೆ.

ಆದ್ರೆ ನಾವಿಂದು ಬಾಳೆಹಣ್ಣಿನ ಪಡ್ಡು ಮಾಡುವುದನ್ನು ನೋಡೋಣ. ಕೇವಲ 2 ಬಾಳೆಹಣ್ಣು ಬಳಸಿಕೊಂಡು ಈ ಪಡ್ಡು ಮಾಡಬಹುದು. ಅದರಲ್ಲೂ ಪಡ್ಡು ಸವಿಯಲು ಬಹಳ ರುಚಿ ನೀಡುತ್ತದೆ. ಹಾಗೆ ಬ್ರೇಕ್ಫಾಸ್ಟ್ಗೆ ಏನಾದರು ವಿಶೇಷ ತಿಂಡಿ ಮಾಡುವ ಬಯಕೆ ನಿಮ್ಮಲ್ಲಿದ್ದರೆ ಈ ಬಾಳೆಹಣ್ಣಿನ ಪಡ್ಡು ಮಾಡಿ ಸವಿದು ನೋಡಿ.
ಹಾಗಾದ್ರೆ ಈ ಬಾಳೆಹಣ್ಣಿನ ಪಡ್ಡು ಮಾಡಲು ಯಾವ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು ಎಂಬೆಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಬಾಳೆಹಣ್ಣಿನ ಪಡ್ಡು ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು
- ಬಾಳೆ ಹಣ್ಣು
- ಚಿರೋಟಿ ರವೆ
- ಮೊಸರು
- ತುಪ್ಪ
- ಎಣ್ಣೆ
- ತೆಂಗಿನ ತುರಿ
- ತುಪ್ಪ
ಬಾಳೆಹಣ್ಣಿನ ಪಡ್ಡು ಮಾಡುವುದು ಹೇಗೆ?
ಮೊದಲು ಎರಡು ಹಣ್ಣಾಗಿರುವ ಬಾಳೆಹಣ್ಣನ್ನು ತೆಗದುಕೊಳ್ಳಿ. ಈಗ ಒಂದು ಬೌಲ್ಗೆ 1 ಕಪ್ ಅಕ್ಕಿ ಹಿಟ್ಟು ಹಾಕಿ, ಅದಕ್ಕೆ ಕಾಲು ಕಪ್ ಚಿರೋಟಿ ರವೆ, ಅರ್ಧ ಕಪ್ ಮೊಸರು, 1 ಕಪ್ ತಣ್ಣೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಗಂಟು ಇಲ್ಲದಂತೆ ಈ ಹಿಟ್ಟು ರೆಡಿಮಾಡಿಕೊಳ್ಳಿ. ಇದನ್ನು ಮುಚ್ಚಿ ಹಾಗೆಯೆ ಇಡಿ.
ಈಗ ತೆಗೆದುಕೊಂಡಿರುವ 2 ದೊಡ್ಡ ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ಸಣ್ಣದಾಗಿ ಕತ್ತರಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾನ್ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಳಿಕ ಹೆಚ್ಚಿಕೊಂಡು ಬಾಳೆಹಣ್ಣು ಹಾಕಿಕೊಳ್ಳಿ. 2 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ನಂತರ 2 ನಿಮಿಷದ ಬಳಿಕ ಅರ್ಧ ಕಪ್ ತೆಂಗಿನ ತುರಿ ಹಾಕಿ, ಹಾಗೆ ಪುಡಿ ಮಾಡಿದ ಕಾಲು ಕಪ್ ಬೆಲ್ಲ ಹಾಕಿಕೊಂಡು ಕಲಸಿಕೊಳ್ಳಿ.
ಬೆಲ್ಲ ಕರಗುವಷ್ಟು ಸಮಯ ಮಿಕ್ಸ್ ಮಾಡುತ್ತಾ ಇರಿ. ಬೆಲ್ಲ ಕರಗಿದ ಬಳಿಕ ಈ ಮಿಶ್ರಣ ಗಟ್ಟಿಯಾಗಲು ಆರಂಭಿಸುತ್ತಿದೆ ಎನಿಸಿದಾಗ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಸನ್ಣ ಸನ್ಣ ನೆಲ್ಲಿಕಾಯಿಯಂತೆ ಉಂಡೆ ಮಾಡಿ, ಅಂಗೈ ಮೇಲೆ ಇಟ್ಟು ಸ್ವಲ್ಪ ಪ್ರೆಸ್ ಮಾಡಿಟ್ಟುಕೊಳ್ಳಿ.
ಈಗ ನೆನೆಯಲು ಇಟ್ಟ ಹಿಟ್ಟಿಗೆ ಅರ್ಧ ಕಪ್ ನೀರು, ಉಪ್ಪು, ಕಾಲು ಕಪ್ ಸಕ್ಕರೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ಕೊನೆಯದಾಗಿ ಕಾಲು ಸ್ಪೂನ್ ಅಡುಗೆ ಸೋಡಾ ಸಹ ಹಾಕಿ ಕಲಸಿಕೊಳ್ಳಿ.
ಈಗ ಒಲೆ ಮೇಲೆ ಪಡ್ಡು ಅಥವಾ ಅಪ್ಪಂ ಮಾಡಲು ಬಳಸುವ ಕಾವಲಿ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಎಲ್ಲಾ ಅಚ್ಚುಗಳಿಗೂ ಹಾಕಿಕೊಳ್ಳಿ. ನಂತರ ಇದಕ್ಕೆ ತಳ ಮುಚ್ಚುವಷ್ಟು ಅಕ್ಕಿ ಹಿಟ್ಟನ್ನು ಹಾಕಿ ನಂತರ ಅದರ ಮೇಲೆ ಬಾಳೆ ಹಣ್ಣಿನ ಉಂಡೆಯನ್ನು ಇಡಿ ನಂತರ ಮತ್ತೆ ಅಕ್ಕಿ ಹಿಟ್ಟು ಅದರ ಮೇಲೆ ಹಾಕಿ. ಇದನ್ನು ಎರಡೂ ಕಡೆಗಳಲ್ಲಿ ಬೇಯಿಸಿಕೊಳ್ಳಿ. ಎರಡೂ ಕಡೆ ರೋಸ್ಟ್ ಆಗುವಂತೆ ಕಾಯಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಬ್ರೇಕ್ಫಾಸ್ಟ್ಗೆ ಬಾಳೆಹಣ್ಣಿನ ಪಡ್ಡು ರೆಡಿಯಾಗುತ್ತದೆ. ಬೆಳಗ್ಗಿನ ತಿಂಡಿಗೆ ಇದು ಬಹಳ ರುಚಿಕರವಾಗಿರುತ್ತದೆ. ಮನೆಯಲ್ಲಿ ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
