Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಾಳೆಹಣ್ಣಿನ ಪಡ್ಡು ತುಂಬಾ ರುಚಿಯಾಗಿರುತ್ತದೆ, ಮಾಡುವುದು ಕೂಡ ಸುಲಭ ನೋಡಿ
ಪಡ್ಡು ಎಷ್ಟು ರುಚಿಯಾಗಿರುತ್ತೆ ಅಲ್ವಾ, ಅದರ ಹತ್ತು ಪಟ್ಟು ರುಚಿಯಾಗಿರುತ್ತದೆ ಬಾಳೆಹಣ್ಣಿನ ಪಡ್ಡು ರೆಸಿಪಿ. ಈ ಸಿಹಿ ಪಡ್ಡು ಸವಿಯುತ್ತಿದ್ದರೆ ಹೊಟ್ಟೆ ತುಂಬಿದರೂ ಬಾಯಿ ಮಾತ್ರ ಸಾಕು ಎನ್ನಲ್ಲ ಅಷ್ಟೊಂದು ರುಚಿಯಾಗಿರುತ್ತದೆ. ಬಾಳೆಹಣ್ಣಿನ ಪಡ್ಡು ನೀವು ತಕ್ಷಣ ಮಾಡಬಹುದು. ಮನೆಯಲ್ಲಿ ತುಂಬಾ ಹಣ್ಣಾದ ಬಾಳೆಹಣ್ಣಿದ್ದರೆ ಪಡ್ಡು ತಯಾರಿಸಿ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಗೋಧಿ ಹಿಟ್ಟು
2-3 ಬಾಳೆಹಣ್ಣು
2 ಚಮಚ ಅಕ್ಕಿ ಹಿಟ್ಟು
ತೆಂಗಿನಕಾಯಿ ಚಿಕ್ಕ-ಚಿಕ್ಕ ಚೂರುಗಳು
1/2 ಕಪ್ ಪುಡಿ ಬೆಲ್ಲ
1/2 ಕಪ್ ನೀರು
ಚಿಟಿಕೆಯಷ್ಟು ಸೋಡಾ
ಸ್ವಲ್ಪ ಏಲಕ್ಕಿ
ಹಿಟ್ಟು ಕಲೆಸಲು ನೀರು ಬೇಕಿದ್ದರೆ ಸ್ವಲ್ಪ ನೀರು
ತಯಾರಿ ವಿಧಾನ
ಮೊದಲಿಗೆ ಬೆಲ್ಲದ ಪಾಕ ತಯಾರಿಸಿ, ನೀರನ್ನು ಕುದಿಸಿ ಅದಕ್ಕೆ ಬೆಲ್ಲದ ಪುಡಿ ಹಾಕಿ
ಕಲೆಸಿ ಪಾಕ ರೀತಿಯಾದಾಗ ಒಂದು ಕಡೆ ಇಡಿ.
* ಒಂದು ಬೌಲ್‌ನಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ
* ಅದಕ್ಕೆ ತೆಂಗನಕಾಯಿ ಚೂರುಗಳನ್ನು ಸೇರಿಸಿ.
* ಅದಕ್ಕೆ ಗೋಧಿ ಹಿಟ್ಟು ಹಾಗೂ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ.
* ಚಿಟಿಕೆಯಷ್ಟು ಅಡುಗೆ ಸೋಡಾ ಹಾಕಿ ಚೆನ್ನಾಗಿ, ಹಿಟ್ಟು ಗಂಟು ಗಂಟಾಗಬಾರದು
* ನೀರು ಬೇಕಿದ್ದರೆ ಸ್ವಲ್ಪ ನೀರು ಹಾಕಿ ಕಲೆಸಿ. ಹಿಟ್ಟು ದೋಸೆ ಹಿಟ್ಟಿನಂತೆ
ಇರಬೇಕು
ಮಾಡುವ ವಿಧಾನ
ಪಡ್ಡು ಮಾಡುವ ತವಾವವನ್ನು ಗ್ಯಾಸ್ ಉರಿ ಮೇಲಿಟ್ಟು ತುಪ್ಪ ಸವರಿ, ನಂತರ
ಹಿಟ್ಟನ್ನು ಹಾಕಿ, ಪಡ್ಡು ಕಲ್ಲಿನ ಗುಂಡಿಯ ಅರ್ಧದಷ್ಟು ಮಾತ್ರ ಹಾಕಿ, ನಂತರ
ಪಡ್ಡು ಮಗುಚಿ ಹಾಕುವಂತೆ ಹಾಕಿ.
* ಎರಡೂ ಬದಿ ಚೆನ್ನಾಗಿ ಬೇಯುವವರೆಗೆ ಹಾಕಿ.
ಬಿಸಿ ಬಿಸಿ ಬಾಳೆಹಣ್ಣಿನ ಪಡ್ಡು ಸವಿಯಿರಿ.



Click it and Unblock the Notifications
