Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಾಯಿ ರುಚಿ ಹೆಚ್ಚಿಸುವ ಬಾಳೆಕಾಯಿ ಮಸಾಲೆ ಫ್ರೈ ಪಲ್ಯ..!
ನಾವು ಊಟ, ತಿಂಡಿ ಮಾಡುವಾಗ ತಿಂಡಿ ಯಾವುದನ್ನು ಮಾಡಿದ್ದಾರೆ ಎನ್ನುವುದನ್ನು ನೋಡುವುದಕ್ಕಿಂತ ತಿಂಡಿ ಸವಿಯಲು ಅದರ ಜೊತೆಗೆ ಯಾವ ಪಲ್ಯ, ಸಾಂಬಾರ್, ಚಟ್ನಿ ಇದೆ ಎಂಬುದನ್ನೇ ಹೆಚ್ಚಾಗಿ ನೋಡುತ್ತೇವೆ. ಹಾಗೆ ಊಟಕ್ಕೂ ಕೂಡ ಇದೆ ರೀತಿಯಲ್ಲಿ ಯಾವುದಾದರು ರುಚಿ ರುಚಿಯ ಪಲ್ಯ, ಸೈಡ್ ಡಿಷ್ ಇದೆಯೇ ಎಂಬುದನ್ನು ನೋಡಿಯೇ ನೋಡುತ್ತೇವೆ. ಹೀಗಾಗಿ ಮಧ್ಯಾಹ್ನದ ಊಟ, ರಾತ್ರಿ ಊಟದಲ್ಲಿ ಯಾವುದಾದರು ಪಲ್ಯ ಇದ್ದೆ ಇರುತ್ತೆ.
ಇನ್ನು ಪಲ್ಯ ಎಂದ ಮಾತ್ರಕ್ಕೆ ತರಕಾರಿಗಳಿಂದ ಮಾಡುವಂತಹ ಹತ್ತಾರು ಬಗೆಯ ಪಲ್ಯಗಳು ನಿಮ್ಮ ನೆನಪಿಗೆ ಬರಬಹುದು. ಒಂದೊಂದು ಕೂಡ ಒಂದೊಂದು ರುಚಿ ನೀಡುತ್ತಿರಬಹುದು. ಆದ್ರೆ ಯಾವುದಾದರು ವಿಶೇಷ ತರಕಾರಿಯಲ್ಲಿ ಪಲ್ಯ ಮಾಡಿದರೆ ಇಡೀ ಮನೆ ಮಂದಿ ಕುಳಿತು ಸವಿದು ಅದರ ರುಚಿಗೆ ಮಾರು ಹೋಗುತ್ತಾರೆ.

ಇಂತಹ ರುಚಿಕರ ಹಾಗೂ ವಿಶೇಷ ಖಾದ್ಯದ ಪಟ್ಟಿಯಲ್ಲಿ ಬಾಳೆಕಾಯಿ ಪಲ್ಯ ಕೂಡ ಒಂದು, ಬಾಳೆಕಾಯಿಯ ಸಾರು ನೀವು ಸವಿದರಬಹುದು. ಅದೇ ಬಾಳೆಕಾಯಿಯ ಮಾಸಾಲೆ ಭರದಿತ ಪಲ್ಯ ಮಾಡಿ ಸವಿದಿದ್ದೀರಾ? ಉಟ ತಿಂಡಿಗೆ ಇದೊಂದು ಅದ್ಭುತ ರುಚಿಯ ಖಾದ್ಯ ಆಗಿರಲಿದೆ. ಹೀಗಾಗಿ ನಾವಿಂದು ಈ ಬಾಳೆಕಾಯಿ ಮಸಾಲೆ ಫ್ರೈ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ.
ಬಾಳೆಕಾಯಿಯ ಮಸಾಲೆ ಫ್ರೈ ಮಾಡುವ ವಿಧಾನವೇನು? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟಯ ಹಿಡಿಯಲಿದೆ ಹೀಗೆ ಎಲ್ಲಾ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಬಾಳೆಕಾಯಿ ಮಸಾಲೆ ಫ್ರೈ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬಾಳೆಕಾಯಿ -4
- ಸಾಂಬಾರ್ ಈರುಳ್ಳಿ- 10
- ತೆಂಗಿನ ತುರಿ
- ಬ್ಯಾಡಗಿ ಮೆಣಸು
- ಸೋಂಪು
- ಕಾಳು ಮೆಣಸು
- ಗರಂ ಮಸಾಲೆ
- ಅರಶಿಣ
- ಖಾರದ ಪುಡಿ
- ಧನಿಯಾ ಪುಡಿ
- ಎಣ್ಣೆ
- ಕರಿಬೇವು
- ಕಾಳು ಮೆಣಸು
- ಉಪ್ಪು
- ಜೀರಿಗೆ
- ಬೆಳ್ಳುಳ್ಳಿ
- ಶುಂಠಿ
ಬಾಳೆಕಾಯಿ ಮಸಾಲೆ ಫ್ರೈ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ 10 ಸಾಂಬಾರ್ ಈರುಳ್ಳಿ ಹಾಕಿಕೊಳ್ಳಿ. ಹಾಗೆ ಇದಕ್ಕೆ ಕೊಬ್ಬರಿ ತುರಿ ಅಥವಾ ತೆಂಗಿನ ಕಾಯಿ ತುರಿ, ಬ್ಯಾಡಗಿ ಮೆಣಸು, ಸೊಂಪು, ಜೀರಿಗೆ, ಕಾಳು ಮೆಣಸು ಸಹ ಹಾಕಿಕೊಂಡು ತರಿತರಿಯಾಗಿ ರುಬ್ಬಿ. ಅನಂತರ ಮುಚ್ಚಳ ತೆಗೆದು ಮತ್ತೆ ಅದಕ್ಕೆ ಕರಿಬೇವು, ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ಈಗ ಬಾಳೆಕಾಯಿಯನ್ನು ತೆಗೆದುಕೊಂಡು ಕೈಗೆ ಎಣ್ಣೆ ಹಚ್ಚಿಕೊಂಡು ಅದರ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಪಲ್ಯ ಮಾಡುವ ಹದಕ್ಕೆ ಕತ್ತರಿಸಿಕೊಳ್ಳಿ. ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ನಂತರ ಹೆಚ್ಚಿಕೊಂಡಿರುವ ಬಾಳೆಕಾಯಿಯನ್ನು ಇದರೊಳಗೆ ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ಬಾಳೆಕಾಯಿಯನ್ನು ತೆಗೆದಿಟ್ಟುಕೊಂಡು ಅದೇ ಬಾಣಲೆಗೆ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿ. ಇದಕ್ಕೆ ಕರಿ ಬೇವು ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಬಳಿಕ ಖಾರದ ಪುಡಿ, ಧನಿಯಾ ಪುಡಿ, ಅರಶಿಣ ಹಾಕಿ ಪ್ರೈ ಮಾಡಿ. 1 ನಿಮಿಷದ ಬಳಿಕ ಮೊದಲು ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ, ಉಪ್ಪು ಹಾಕಿ 1 ನಿಮಿಷ ಮಿಕ್ಸ್ ಮಾಡಿಕೊಳ್ಳಿ.
ಈಗ ಹುರಿದಿಟ್ಟುಕೊಂಡಿರುವ ಬಾಳೆಕಾಯಿಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು, ಎಲ್ಲಾ ಮಸಾಲೆಯು ಚೆನ್ನಾಗಿ ಫ್ರೈ ಆಗಬೇಕು. 3 ನಿಮಿಷ ಫ್ರೈ ಮಾಡಬೇಕು. ಬೇಕಾದರೆ ಚೂರೇ ಚೂರು ನೀರು ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ಇದಕ್ಕೆ ಗಂ ಮಸಾಲೆ ಹಾಕಿ 30 ಸೆಕೆಂಡ್ ಫ್ರೈ ಮಾಡಿ ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಬಾಳೆಕಾಯಿ ಮಸಾಲೆ ಫ್ರೈ ಪಲ್ಯ ರೆಡಿಯಾಗುತ್ತದೆ.



Click it and Unblock the Notifications
