Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೈಸೂರು ಬೋಂಡಾ ಅಲ್ಲ ಈ ರುಚಿಯ ಬಾಳೆಹಣ್ಣಿನ ಬೋಂಡಾ ಮಾಡಿ! 5 ನಿಮಿಷದಲ್ಲಿ ರೆಡಿ!
ನೀವು ಮನೆಯಲ್ಲಿ ತಿಂಡಿಗೆ ಹಾಗೆ ಹಾಗೆ ಸಂಜೆ ಸಮಯದಲ್ಲಿ ಸವಿಯಲು ರುಚಿ ರುಚಿಯಾದ ಬೋಂಡಾಗಳ ಮಾಡುವುದು ಕಾಮನ್. ಅದ್ರಲ್ಲೂ ಯಾವಾಗಲು ಅಂಗಡಿಗಳಲ್ಲಿ, ರಸ್ತೆ ಬದಿಯಲ್ಲಿ ನೀವು ಬಾಯಿ ಚಪ್ಪರಿಸಿ ವಿವಿಧ ಬಗೆಯ ಬೋಂಡಾಗಳನ್ನು ಸವಿದಿರುತ್ತೀರಿ. ಹಾಗೆ ಈ ಬೋಂಡಾ ಸವಿಯೋಕೆ ಎಲ್ಲರು ಇಷ್ಟಪಡುತ್ತಾರೆ. ಅದ್ರಲ್ಲೂ ಮಕ್ಕಳಿಗೆ ರುಚಿ ರುಚಿ ಬೋಂಡಾ ಮಾಡಿ ಕೊಟ್ಟದರೆ ಎಲ್ಲವನ್ನು ಖಾಲಿ ಮಾಡುತ್ತಾರೆ.
ಇಂತಹ ಹಲವು ರುಚಿಯ ಬೋಂಡಾಗಳಲ್ಲಿ ನಾವಿಂದು ಸುಲಭವಾಗಿ ಯಾರು ಬೇಕಾದರು ಮಾಡಬಹುದಾದ ಬಾಳೆಹಣ್ಣಿನ ಬೋಂಡಾ ಮಾಡುವ ಕುರಿತು ತಿಳಿದುಕೊಳ್ಳೋಣ. ಒಂದೇ ಒಂದು ಬಾಳೆಹಣ್ಣನ್ನು ಬಳಸಿಕೊಂಡು ಮಾಡುವಂತಹ ಈ ಬೋಂಡಾ ರುಚಿಯಲ್ಲಿ ಅದ್ಭುತವಾಗಿರುತ್ತೆ, ಹಾಗೆ ಮತ್ತೆ ಮತ್ತೆ ಸವಿಯಬೇಕು ಎನಿಸುತ್ತೆ.

ನೀವು ಕೂಡ ರಸ್ತೆಯ ಬದಿ, ಹೋಟೆಲ್, ಕ್ಯಾಂಟೀನ್‌ನಲ್ಲಿ ಮೈಸೂರು ಬೋಂಡಾ ಸವಿದಿರುತ್ತೀರಿ. ಅದೇ ರೀತಿ ಈ ಬಾಳೆ ಹಣ್ಣಿನ ಬೋಂಡಾ ಕೂಡ ರುಚಿ ನೀಡಲಿದೆ. ನೀವು ಈ ಬೋಂಡಾವನ್ನು ಬೆಳಗ್ಗೆ ತಿಂಡಿಗೆ ಸಂಜೆ ಸ್ನ್ಯಾಕ್ಸ್ ಆಗಿ ಹಾಗೆ ವಿಶೇಷ ದಿನಗಳಲ್ಲಿಯೂ ಮಾಡಿ ಸವಿದಿರುತ್ತೀರಿ. ಹಾಗೆ ನಾವಿಂದು ಈ ಬಾಳೆಹಣ್ಣಿನ ಬೋಂಡಾ ಮಾಡಿ ಸವಿಯವ ಕುರಿತು ತಿಳಿದುಕೊಳ್ಳೋಣ.
ಮೈಸೂರು ಬೋಂಡಾದಂತೆ ಈ ಬಾಳೆಹಣ್ಣಿನ ಬೋಂಡಾ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಾಳೆಹಣ್ಣಿನ ಬೋಂಡಾ ಮಾಡಲು ಬೇಕಾಗುವ ವಸ್ತುಗಳು
- ಬಾಳೆಹಣ್ಣಿ- 2
- ಮೈದಾ - 1 ಕಪ್
- ಅಡುಗೆ ಸೋಡಾ - 1/4 ಟೀಸ್ಪೂನ್
- ಏಲಕ್ಕಿ ಪುಡಿ - 1/4 ಟೀಸ್ಪೂನ್
- ಸಕ್ಕರೆ - 3 ಟೀಸ್ಪೂನ್
- ತೆಂಗಿನಕಾಯಿ ಪುಡಿ - 2 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಬಾಳೆಹಣ್ಣಿನ ಬೋಂಡಾ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್‌ಗೆ 2 ಬಾಳೆಹಣ್ಣನ್ನು ಬಿಡಿಸಿ ಹಾಕಿ, ಸಕ್ಕರೆ ಹಾಕಿಕೊಂಡು ರುಬ್ಬಿ ಪೇಸ್ಟ್ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಇದಕ್ಕೆ ಜೀರಿಗೆ ಪುಡಿ, ಕೊಬ್ಬರಿ ಪುಡಿ, ಸೋಡಾ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸ್ವಲ್ಪ ಮೈದಾ ಹಿಟ್ಟು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡುತ್ತಾ ಇರಿ. ಗಟ್ಟಿಯಾದರೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಹಿಟ್ಟು ರೆಡಿ ಮಾಡಿಕೊಳ್ಳಿ.
ಈ ಹಿಟ್ಟು ಗಟ್ಟಿಯಾಗಿ ಬರಬೇಕು. ವಡೆ ಮಾಡುವಂತಹ ಹದಕ್ಕೆ ಈ ಹಿಟ್ಟು ಬರಬೇಕು. ತೆಳುವಾಗಿದ್ದರೆ ಮೈದಾ ಹಿಟ್ಟು ಹಾಕಿ ಗಟ್ಟಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಬೇಕು. ನಂತರ ಈ ಹಿಟ್ಟನ್ನು ನಲ್ಲಿಕಾಯಿ ಗಾತ್ರದಲ್ಲಿ ತೆಗೆದುಕೊಂಡು ನೇರವಾಗಿ ಎಣ್ಣೆಗೆ ಬಿಡಬೇಕು.
ಮಧ್ಯಮ ಉರಿಯಲ್ಲಿ 2ರಿಂದ 3 ನಿಮಿಷ ಕಾಯಿಸಬೇಕು. ಇದು ಬಣ್ಣ ಕಂದು ಬಣ್ಣಕ್ಕೆ ಬರುವವರೆಗೂ ಕರಿದುಕೊಳ್ಳಬೇಕು. ಇದು ಸ್ವಲ್ಪ ದಪ್ಪವಾಗಿ ಊದಿಕೊಳ್ಳಲಿದೆ. ನಂತರ ತೆಗೆದು ಜರಡಿಯಲ್ಲಿ ಹಾಕಿಡಿ. ಇಷ್ಟಾದರೆ ನಿಮ್ಮ ಮುಂದೆ ಮೃದುವಾದ ಬಾಳೆಹಣ್ಣಿನ ಬೋಂಡಾ ಸಿದ್ದವಾಗುತ್ತೆ. ಇದರ ಜೊತೆಗೆ ಒಂದು ತೆಂಗಿನಕಾಯಿ ಚಟ್ನಿ ಮಾಡಿದರೆ 5 ಅಥವಾ 6 ಬೋಂಡಾ ಸವಿಯುತ್ತೀರಿ.
ಹಾಗಾದ್ರೆ ನೀವು ಸಹ ಬೆಳಗ್ಗೆ ತಿಂಡಿಗೆ ಅಥವಾ ಸಂಜೆ ಸ್ನ್ಯಾಕ್ಸ್‌ಗೆ ಈ ಮೃದುವಾದ ಸಿಹಿ ಸಿಹಿಯ ಬಾಳೆಹಣ್ಣಿನ ಬೋಂಡಾ ಮಾಡಿ ಸವಿದು ನೋಡಿ. ಮನೆಯವರೆಲ್ಲಾ ಇಷ್ಟಪಟ್ಟು ಸವಿಯುವಂತಹ ತಿಂಡಿ ಇದಾಗಿರಲಿದೆ.



Click it and Unblock the Notifications
