Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹತ್ತರಿಂದ ಹದಿನೈದು ನಿಮಿಷ ಸಾಕು ಬಾಳೆ ಹಣ್ಣಿನ ಬೋಂಡಾ ರೆಡಿ
ಈ ಬಾಳೆಹಣ್ಣು ಬೋಂಡಾ ತುಂಬಾ ರುಚಿಯಾಗಿರುತ್ತದೆ, ಇದನ್ನು ಮಾಡುವುದು ತುಂಬಾ ಸುಲಭ, ಇದನ್ನು ಮಾಡಲು ನೇಂದ್ರ ಬಾಳೆಹಣ್ಣು ಬಳಸಬೇಕು, ನೇಂದ್ರ ಬಾಳೆಹಣ್ಣು ಎಲ್ಲಾ ಕಡೆ ಸಿಗುತ್ತದೆ, ಬೆಂಗಳೂರಿನ ಮಾರುಕಟ್ಟೆಯಲ್ಲಿ ಸಿಗುವುದು, ಸೂಪರ್ ಮಾರ್ಕೆಟ್ಗಳಲ್ಲಿ ದೊರೆಯುವುದು. ಬೇರೆ ಬಾಳೆಹಣ್ಣಿನಿಂದ ಮಾಡುಬಹುದು, ಆದರೆ ಬಾಳೆಹಣ್ಣಿನ ಬೋಂಡಾ ತುಂಬಾ ಟೇಸ್ಟ್ ಆಗಿರಬೇಕೆಂದರೆ ನೇಂದ್ರ ಬಾಳೆಹಣ್ಣು ಬಳಸಬೇಕು, ಈ ಸ್ನ್ಯಾಕ್ಸ್ ತುಂಬಾ ಸುಲಭವಾಗಿ ಮಾಡಬಹುದು ನೋಡಿ:

ಬೇಕಾಗುವ ಸಾಮಗ್ರಿ
ನೇಂದ್ರಬಾಳೆಹಣ್ಣು ಅರ್ಧ ಕೆಜಿ
ಕಡ್ಲೆಹಿಟ್ಟು ಒಂದು ಕಪ್
ಮೈದಾ 1/4 ಕಪ್(ಬಳಸದೆಯೂ ಇರಬಹುದು)
ಮೆಣಸಿನ ಪುಡಿ
1 ಚಮಚ ಸಕ್ಕರೆ
ಉಪ್ಪು
ಮಾಡುವ ವಿಧಾನ
ಒಂದು ಬೌಲ್ಗೆ ಕಡ್ಲೆಹಿಟ್ಟು, ಮೈದಾ ಹಿಟ್ಟು ಹಾಕಿ ಮಿಕ್ಸ್ ಮಾಡಿ, ನಂತರ 1/2
ಚಮಚ ಮೆಣಸಿನ ಪುಡಿ, ಸ್ವಲ್ಪ ಉಪ್ಪು ಸೇರಿಸಿ.
ಈಗ ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ, (ಉಪ್ಪು ಚಿಟಿಕೆಯಷ್ಟು ಉಪ್ಪು
ಸೇರಿಸಿದರೆ ಸಾಕು).
ಸಕ್ಕರೆ ಕೂಡ ಸೇರಿಸಿ ಮಿಕ್ಸ್ ಮಾಡಿ, ನೀರು ಹಾಕಿ ಮಿಕ್ಸ್ ಮಾಡಿ, ನೀರು ತುಂಬಾ
ಹಾಕಬೇಡಿ, ಹಿಟ್ಟಿನಲ್ಲಿ ಬಾಳೆಹಣ್ಣನ್ನು
ಅದ್ದಿದಾಗ ಬಾಳೆಹಣ್ಣಿಗೆ ಅಂಟಿಕೊಳ್ಳುವಷ್ಟು ಗಟ್ಟಿಯಾಗಿರಬೇಕು.
ಈಗ ಬಾಳೆಹಣ್ಣನ್ನು ನೀವು 2 ಅಥವಾ 3 ಭಾಗ ಮಾಡಿ
ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ
ಎಣ್ಣೆ ಕಾದಾಗ ಬಾಳೆಹಣ್ಣನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಕಂದು ಬಣ್ಣ
ಬರುವಾಗ ತೆಗೆಯಿರಿ
ರುಚಿ ರುಚಿಯಾದ ಬಾಳೆಹಣ್ಣಿನ ಬೋಂಡ ರೆಡಿ.
ಇನ್ನು ಸ್ವಲ್ಪ ಭಿನ್ನ ರುಚಿಯಲ್ಲಿಯೂ ಮಾಡಬಹುದು
ಅದಕ್ಕೆ ಸ್ವಲ್ಪ ತೆಂಗಿನ ತುರಿ ಸೇರಿಸಬಹುದು, ರುಚಿ ಸೂಪರ್ ಆಗಿರುತ್ತದೆ.
ಬಾಳೆಹಣ್ಣ ಕತ್ತರಿಸಿ ಅದಕ್ಕೆ ತೆಂಗಿನತುರಿ ಹರಡಿ, ಅದರ ಮೇಲೆ ಸಕ್ಕರೆ ಅಥವಾ
ಬೆಲ್ಲ ಹಾಕಿ, ಅದನ್ನು ಹಿಟ್ಟಿನಲ್ಲಿ ಅದ್ದಿ ನಂತರ ಎಣ್ಣೆಗೆ ಹಾಕಬಹುದು.
ಇದು ತುಂಬಾ ಸಿಹಿಯಾಗಿ ತುಂಬಾ ರುಚಿಯಾಗಿರುತ್ತದೆ.
ಇತರ ಸಲಹೆ
- ನೇಂದ್ರ ಬಾಳೆಹಣ್ಣು ಹಣ್ಣಾದಷ್ಟು ರುಚಿ ಹೆಚ್ಚು
- ಒಂದು ವೇಳೆ ಸಿಪ್ಪೆ ಕಪ್ಪಾಗಿದ್ದರೆ ಆ ಬಾಳೆಹಣ್ಣು ಇನ್ನೂ ಟೇಸ್ಟ್ ಆಗಿರುತ್ತದೆ, ನೇಂದ್ರ ಬಾಳೆಹಣ್ಣು ಇತರ ಬಾಳೆಹಣ್ಣಿನಂತೆ ಅಲ್ಲ, ಎಷ್ಟೇ ಹಣ್ಣಾದರೂ ತುಂಬಾ ಮೃದುವಾಗಲ್ಲ
- ಇನ್ನು ಇದನ್ನು ದಪ್ಪವಾಗಿ ಕತ್ತರಿಸುವುದಕ್ಕೆ ತೆಳುವಾಗಿ ಕತ್ತರಿಸಿ
- ಒಂದು ಬಾಳೆ ಹಣ್ಣು ಬಳಸಿ 3 ಅಥವಾ ಅದರ ಮಧ್ಯಭಾಗ ಕತ್ತರಿಸಿ 6 ಬಜ್ಜಿ ಮಾಡಬಹುದು
- ಟ್ರಾವೆಲ್ ಮಾಡುವಾಗ ಮಾಡಿ ಕೊಂಡೊಯ್ಯಬಹುದು, ಇಂದು ಮಾಡಿದ್ದು ನಾಳೆಯೂ ಸವಿಯಬಹುದು, ಆದರೆ ಬಿಸಿ ಬಿಸಿ ಸವಿದರೆ ರುಚಿ ಹೆಚ್ಚು
ನೇಂದ್ರ ಬಾಳೆಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಅಲ್ಲದೆ ನೇಂದ್ರ ಬಾಳೆಹಣ್ಣು ತಿಂದಾಗ ಬೇಗನೆ ಹೊಟ್ಟೆ ತುಂಬುವುದು.
ನಿಮಗೆ ಈ ಬಾಳೆಹಣ್ಣು ಬೋಂಡಾ ಮಾಡಿ ತಿನ್ನುವುದು ಇಷ್ಟವಿಲ್ಲ ಎಂದಾದರೆ ಇದನ್ನು ರೌಂಡಾಗಿ ಕತ್ತರಿಸಿ ತವಾದಲ್ಲಿ ಸ್ವಲ್ಪ ತುಪ್ಪ ಸವರಿ ಎರಡೂ ಬದಿ ಬಿಸಿ ಮಾಡಿ ತಿಂದು ನೋಡಿ ರುಚಿ ಬೊಂಬಾಟ್ ಆಗಿರುತ್ತದೆ.



Click it and Unblock the Notifications
