Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
2 ವಸ್ತು ಬಳಸಿ ಬೇಕರಿ ಸ್ವೀಟ್ ಮನೆಯಲ್ಲಿ ರೆಡಿ ಮಾಡಿ! ಬಹಳ ಸುಲಭದ ರೆಸಿಪಿ!
ನೀವು ಬೇಕರಿಗಳತ್ತ ಸುಮ್ಮನೆ ಕಣ್ಣ ಹಾಯಿಸಿದರೆ ಅಲ್ಲಿ ಸಾಲು ಸಾಲು ಸಿಹಿಗಳ ನೋಡಬಹುದು. ತರ ತರದ ಸಿಹಿ ತಿಂಡಿಗಳು ನಿಮ್ಮ ಬಾಯಲ್ಲಿ ನೀರು ತರಿಸುತ್ತವೆ. ಆದ್ರೆ ಅಲ್ಲಿನ ದರ ನಿಮ್ಮ ಜೇಬು ಸುಡುವುದು ಅಷ್ಟೇ ಸತ್ಯ. ಹಾಗೆ ಬೇಕರಿ ತಿಂಡಿಗಳನ್ನು ನೀವು ಖರೀದಿಸಿ ಮನೆಗೆ ತಂದು ಸವಿಯುವಾಗ ಅದನ್ನು ನೀವು ಕೂಡ ಮಾಡಿ ಸವಿಯಬೇಕು ಅಂದುಕೊಳ್ಳೋದು ನೊಡಬಹುದು.
ಹಾಗೆ ಬೇಕರಿಯಲ್ಲಿ ಸಿಗುವಂತಹ ರುಚಿ ರುಚಿಯ ತಿಂಡಿಗನ್ನು ಮನೆಯಲ್ಲಿಯೂ ಮಾಡಿ ಸವಿಯಬಹುದು. ಇನ್ನು ಕಡಿಮೆ ವಸ್ತುಗಳ ಬಳಸಿಕೊಂಡ ಮಾಡಬಹುದಾದ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹೀಗಾಗಿ ನಾವಿಂದು ದುಬಾರಿ ಬೆಲೆ ನೀಡಿ ಬೇಕರಿಯಲ್ಲಿ ಸವಿಯುವಂತಹ ತಿಂಡಿಯನ್ನು ಮನೆಯಲ್ಲೇ ಮಾಡಿ ಸವಿದು ನೋಡೋಣ.

ಅದ್ರಲ್ಲು ದ್ರಾಕ್ಷಿ ಗೋಡಂಬಿ ಹಾಕಿ ಮಾಡುವ ವಿಭಿನ್ನ ರುಚಿಯಲ್ಲಿನ ಬರ್ಫಿ ರೀತಿಯ ಸಿಹಿ ತಿಂಡಿ ಮಾಡಿ ಸವಿಯುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಹಾಗಾದ್ರೆ ಸ್ಪೆಷಲ್ ರುಚಿಯ ಹಾಲಿನ ಸ್ವೀಟ್ ಮಾಡಿ ಸವಿಯುವ. ಈ ಸ್ವೀಟ್ ಮಾಡೋಕೆ 2ರಿಂದ3 ವಸ್ತು ನಿಮ್ಮಲ್ಲಿದ್ದರೆ ಸಾಕಾಗುತ್ತದೆ.
ಈ ರುಚಿ ರುಚಿಯ ಸಿಹಿ ತಿಂಡಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.
ಬೇಕರಿ ರುಚಿಯ ಸಿಹಿ ತಿಂಡಿ ಮನೆಯಲ್ಲೇ ಮಾಡಲು ಬೇಕಾಗುವ ವಸ್ತುಗಳು
ಹಾಲು
ತುಪ್ಪ
ಮೈದಾ ಹಿಟ್ಟು
ಬಾದಾಮಿ
ಏಲಕ್ಕಿ ಪುಡಿ
ಸಕ್ಕರೆ ಪುಡಿ
ಪಿಸ್ತಾ
ಬೇಕರಿ ರುಚಿಯ ಸಿಹಿ ತಿಂಡಿ ಮನೆಯಲ್ಲೇ ಮಾಡುವ ವಿಧಾನ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಿಸಿಯಾದಾಗ ಅದಕ್ಕೆ ಮೈದಾ ಹಿಟ್ಟು ಹಾಕಿಕೊಂಡು ಹುರಿದುಕೊಳ್ಳಿ. ಮೈದಾ ಹಿಟ್ಟು ಚೆನ್ನಾಗಿ ಹುರಿಯಬೇಕು. ಗರಿ ಗರಿಯಾಗಿ ಹಿಟ್ಟು ಬರಬೇಕು. 10 ನಿಮಿಷ ರೋಸ್ಟ್ ಮಾಡಿಕೊಂಡ ನಂತರ ಇದಕ್ಕೆ ಸಕ್ಕರೆ ಪುಡಿ ಹಾಕಿಕೊಳ್ಳಿ. ಹಾಗೆ ಏಲಕ್ಕಿ ಪುಡಿ ಸಹ ಹಾಕಿಕೊಳ್ಳಿ.
ನಂತರ ಹಾಲು ಕೂಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಬೆಣ್ಣೆಯಂತಹ ಹದವಾಗಿ ಮೃದುವಾಗಿ ಬಂದಾಗ ಒಲೆ ಆಫ್ ಮಾಡಿಕೊಳ್ಳಿ. ನಂತರ ಒಂದು ಟಿಫಿನ್ ಬಾಕ್ಸ್ಗೆ ತುಪ್ಪ ಸವರಿಕೊಂಡು ಬಾಕ್ಸ್ ತಳದಲ್ಲಿ ಬಾದಾಮಿ ಪಿಸ್ತಾ ಪುಡಿ ಇಲ್ಲವೆ ಕತ್ತರಿಸಿಕೊಂಡು ಸಣ್ಣ ಸಣ್ಣ ಚೂರುಗಳ ಕೆಳಗೆ ಹಾಕಿಕೊಳ್ಳಿ.
ನಂತರ ಬಾಣಲೆಯಲ್ಲಿನ ಮಿಶ್ರಣವನ್ನು ಈ ಟಿಫಿನ್ ಬಾಕ್ಸ್ಗೆ ಹಾಕಿ ಮೇಲಿಂದ ಚೆನ್ನಾಗಿ ಒತ್ತಿಕೊಳ್ಳಿ. ನಂತರ ತಣ್ಣಗಾಗಲು ಬಡಬೇಕು. ಒಂದು ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಬಾಕ್ಸ್ ಇಡಿ. ಇಲ್ಲವೆ ಫ್ರಿಡ್ಜ್ನಲ್ಲಿ ಇಟ್ಟರೂ ನಡೆಯುತ್ತದೆ. ಅರ್ಧ ಗಂಟೆ ಇಟ್ಟು ಬಳಿಕ ಚಾಕುವಿನಿಂದ ಕತ್ತರಿಸಿಕೊಂಡು ತೆಗೆಯಬಹುದು, ಇಲ್ಲವೇ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸಿಹಿ ತಿಂಡಿ ಸಿದ್ದವಾಗುತ್ತೆ. ನೀವು ಕೂಡ ಮಾಡಿ ನೋಡಿ.
ಮನೆಯಲ್ಲಿ ಇದನ್ನು ಮಾಡಿದ್ರೆ ಮಕ್ಕಳಿಗೆ ಬಹಳ ಇಷ್ಟವಾಗುತ್ತೆ. ನೀವು ಸಹ ಮಾಡಿ ಸವಿದು ನೋಡಿ. ಹಾಗೆ ಒಂದಿಷ್ಟು ದಿನ ಇದನ್ನು ಸಂಗ್ರಹಿಸಿಟ್ಟು ಕೂಡ ಸವಿದು ನೋಡಿ.



Click it and Unblock the Notifications
