Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೇಕರಿಯಲ್ಲಿ ಸಿಗುವ ಚಿಪ್ಸ್ ಮನೆಯಲ್ಲೇ ಮಾಡಿ..! 2 ವಸ್ತು ಇದ್ರೆ ಸಾಕು..! 2 ನಿಮಿಷದಲ್ಲಿ ರೆಡಿ!
ಸಂಜೆ ವೇಳೆಗೆಲ್ಲ ಸ್ನ್ಯಾಕ್ಸ್ ತಿನ್ನೋದು ಎಲ್ಲರ ರೂಢಿಯಾಗಿರುತ್ತೆ. ಟೀ ಜೊತೆಗೆ ಬಿಸ್ಕೇಟ್, ಚಿಪ್ಸ್ ಸೇರಿ ಹಲವು ರೀತಿಯ ಕರಿದ ತಂಡಿಗಳ ಸೇವಿಸಲು ಇಷ್ಟಪಡುತ್ತೇವೆ. ಆದರೆ ಮನೆಯಲ್ಲೇ ಈ ಖಾದ್ಯಗಳ ಮಾಡಿದರೆ ಹೇಗೆ ಅಲ್ವಾ? ಹೌದು ಈ ಆಲೂಗಡ್ಡೆ ಚಿಪ್ಸ್ಗಳು ಸಂಜೆ ವೇಳೆ ಸವಿಯಲು ಬೆಸ್ಟ್ ಸ್ನ್ಯಾಕ್ಸ್ ಆಗಿವೆ. ಆದ್ರೆ ಚಿಪ್ಸ್ ಅಂದ್ರೆ ನಾವು ಬೇಕರಿ ಮೂಲಕ ತಂದು ಸವಿಯುತ್ತೇವೆ. ಇಲ್ಲವೆ ಪ್ಯಾಕ್ ಮಾಡಲಾದ ಆಲೂಗಡ್ಡೆ ಚಿಪ್ಸ್ಗಳು ಸಿಗುತ್ತವೆ.

ಆದ್ರೆ ಆರೋಗ್ಯದ ದೃಷ್ಟಿಯಲ್ಲಿ ಇವು ನಮಗೆ ಒಳಿತಲ್ಲ. ಹೀಗಾಗಿ ಮನೆಯಲ್ಲೇ ಈ ಚಿಪ್ಸ್ ಮಾಡಿ ಸವಿದರೆ ರುಚಿಯೂ ಹೆಚ್ಚು ನಿಮ್ಮ ಆರೋಗ್ಯಕ್ಕೂ ಉತ್ತಮ. ಆದ್ರೆ ಬೇಕರಿ ರುಚಿಯಲ್ಲಿ ಮನೆಯಲ್ಲೇ ಆಲೂ ಚಿಪ್ಸ್ ಮಾಡೋದು ಹೇಗೆ? ಆಲೂ ಚಿಪ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ - 5
- ಖಾರದ ಪುಡಿ
- ಎಣ್ಣೆ
- ಉಪ್ಪು
ಆಲೂ ಚಿಪ್ಸ್ ಮಾಡುವುದು ಹೇಗೆ?
ಮೊದಲು 5 ಆಲೂಗಡ್ಡೆ ತೆಗೆದುಕೊಳ್ಳಿ. ಅದರ ಸಿಪ್ಪೆಯನ್ನುತೆಗೆದುಕೊಳ್ಳಿ. ಬಳಿಕ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ಆಲೂಗಡ್ಡೆಯಿಂದ ಸಂಪೂರ್ಣ ನೀರು ಹೋಗುವಂತೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಆಲೂಗಡ್ಡೆಯನ್ನ ಚೆನ್ನಾಗಿ ಸ್ಲೈಸ್ ಮಾಡಿಕೊಳ್ಳಿ. ತೆಳುವಾಗಿ ಸ್ಲೈಸ್ ಮಾಡಿಕೊಳ್ಳಬೇಕು. ಎಲ್ಲಾ ಆಲೂಗಡ್ಡೆಯನ್ನ ಸ್ಪೈಸ್ ಮಾಡಿಕೊಳ್ಳಿ.
ಈಗ ಆಲೂಗಡ್ಡೆಯಲ್ಲಿ ನೀರಿನ ಅಂಶವಿದ್ದರೆ ಅದನ್ನು ಫ್ಯಾನ್ ಅಡಿಯಲ್ಲಿ ಇಡಬೇಕು. ಇಲ್ಲವೆ ಡ್ರೈ ಮಾಡಬೇಕು. ಬಟ್ಟೆಯಿಂದ ಒರೆಸಿಕೊಂಡರು ಆಗುತ್ತದೆ. ಬಳಿಕ ಒಂದು ಪ್ಲೇಟ್ಗೆ ಹಾಕಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಕಾಯಲು ಬಿಡಿ. ಎಣ್ಣೆ ಕಾಯಲು ಬಿಟ್ಟ ಬಳಿಕ ಅದಕ್ಕೆ ಒಂದೊಂದೇ ಆಲೂಗಡ್ಡೆ ಸ್ಲೈಸ್ ಅನ್ನು ಹಾಕಿಕೊಳ್ಳಿ.

ಕಡಿಮೆ ಉರಿಯಲ್ಲಿ ಹೆಚ್ಚಾಗಿ ಇಟ್ಟುಕೊಂಡು ಕಾಯಿಸಿಕೊಳ್ಳಿ, ಆಲೂಗಡ್ಡೆಯ ಬಣ್ಣ ಬದಲಾಗುವವರೆಗೂ ಕಾಯಿಸಿಕೊಳ್ಳಿ. ಎರಡೂ ಕಡೆಗಳಲ್ಲಿ ಕಾಯಿಸಿಕೊಳ್ಳಿ. ಬಳಿಕ ಎಲ್ಲಾ ಟಿಪ್ಸ್ ಗಳನ್ನು ಒಂದು ಪಾತ್ರೆಗೆ ಹಾಕಿಕೊಂಡು ನಿಮಗೆ ಎಷ್ಟು ಬೇಕೋ ಅಷ್ಟು ಖಾರದ ಪುಡಿ ಹಾಗೂ ಉಪ್ಪನ್ನು ಚಿಪ್ಸ್ ಮೇಲೆ ಹಾಕಬೇಕು. ಬಳಿಕ ಚೆನ್ನಾಗಿ ತಿರುಗಿಸಿ ಇಲ್ಲವೆ ಅಲ್ಲಾಡಿಸಿ ಎಲ್ಲಾ ಚಿಪ್ಸ್ಗೂ ಖಾರ ಮತ್ತು ಉಪ್ಪು ಹಿಡಿಯುವಂತೆ ಮಾಡಿ. ಇಷ್ಟು ಮಾಡಿದರೆ ನಿಮ್ಮ ಮುಂದೆ ಬೇಕರಿ ರುಚಿಯ ಚಿಪ್ಸ್ ರೆಡಿಯಾಗುತ್ತದೆ.
ಈ ರೆಸಿಪಿಯನ್ನ ನೀವು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಜೊತೆಗೆ ಇದಕ್ಕೆ ಕಡಿಮೆ ವಸ್ತುಗಳು, ಕಡಿಮೆ ಸಮಯ ಹಿಡಿಯುತ್ತದೆ. ಒಮ್ಮೆ ಮಾಡಿ ಸವಿದರೆ ಮನೆ ರುಚಿಯ ಚಿಪ್ಸ್ಗೆ ನೀವು ಫಿದಾ ಆಗುತ್ತೀರಿ. ಯಾವಾಗಲೂ ಈ ಸ್ನ್ಯಾಕ್ಸ್ ಮನೆಯಲ್ಲಿಯೇ ಮಾಡಿ ಸವಿಯಲು ಮುಂದಾಗುತ್ತೀರಿ. ಬೇಕರಿ ಅಥವಾ ಅಂಗಡಿಯಲ್ಲಾದರೆ ಹಣ ಕೊಟ್ಟು ಖರೀದಿಸಬೇಕು. ಈ ಹಣವೂ ಉಳಿತಾಯವಾಗುತ್ತೆ. ನೀವು ಒಮ್ಮೆ ಮನೆಯಲ್ಲಿ ಮಾಡಿದ್ರೆ ನೀವು ಎಷ್ಟು ಹಣ ಉಳಿಸಬಹುದು ಎಂಬ ಅರಿವಾಗುತ್ತೆ.



Click it and Unblock the Notifications
