Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
ಟೋಸ್ಟ್, ಪಕೋಡ ಬೇಡ! ಬ್ರೆಡ್ನಿಂದ ಮನೆಯಲ್ಲೇ ಚಾಟ್ ಮಾಡಿ.. ಬೇಕರಿಗಿಂತ ಸೂಪರ್ ಇರುತ್ತೆ
ಕೇವಲ ಐದು ಬ್ರೆಡ್ ಇದ್ದರೆ ಸಾಕು! ಅಯ್ಯಂಗಾರ್ ಬೇಕರಿ ಸ್ಟೈಲ್ ಬ್ರೆಡ್ ಚಾಟ್ ರೆಡಿ. ಹೌದು, ಇಂದು ನಾವು ನಿಮಗೆ ಈ ಲೇಖನದಲ್ಲಿ ಬ್ರೆಡ್ನಿಂದ ಟೋಸ್ಟ್ ಮತ್ತು ಪಕೋಡಗಳನ್ನು ಹೇಗೆ ತಯಾರಿಸುವುದು ಅಂತ ಹೇಳಲ್ಲ. ಬದಲಿಗೆ ಬ್ರೆಡ್ನಿಂದ ಚಾಟ್ (Bread Chaat) ತಯಾರಿಸುವುದು ಹೇಗೆ ಅಂತ ಹೇಳುತ್ತೇವೆ. ಇದು ತಿನ್ನಲು ತುಂಬಾ ರುಚಿಕರ ಮತ್ತು ಸಖತ್ ಮಜಾ ನೀಡುತ್ತದೆ. ನಿಮಗೆ ಯಾವಾಗಲಾದರೂ ಲಘು ಮತ್ತು ರುಚಿಕರವಾದ ಏನನ್ನಾದರೂ ತಿನ್ನಲು ಬಯಸಿದರೆ, ಬ್ರೆಡ್ ಚಾಟ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಮಕ್ಕಳಿಗೆ ಮತ್ತು ವಯಸ್ಕರಿಗೆ ಒಂದು ಉತ್ತಮ ತಿಂಡಿಯಾಗಿದೆ. ನೀವು ಮನೆಯಲ್ಲಿ ಬ್ರೆಡ್ನಿಂದ ಬೇಕರಿಯಂತೆ ರುಚಿಕರವಾದ ಚಾಟ್ ಮಾಡಬಹುದು.
ನಮ್ಮಲ್ಲಿ ಹಲವು ವಿಧದ ಚಾಟ್ಗಳಿವೆ. ಆಲೂ ಚಾಟ್, ಪಾಪಡಿ ಚಾಟ್, ಸಮೋಸಾ ಚಾಟ್ ಮತ್ತು ಇನ್ನೂ ಅನೇಕ ಮಾಡಬಹುದು. ಆದರೆ, ಬೇಗ ಮತ್ತು ಸುಲಭವಾಗಿ ತಯಾರಿಸಬಹುದಾದ ಚಾಟ್ ವಿಷಯಕ್ಕೆ ಬಂದರೆ, ಬ್ರೆಡ್ ಚಾಟ್ ವಿಭಿನ್ನ ಟೇಸ್ಟ್ ನೀಡುತ್ತದೆ. ನೀವು ಒಮ್ಮೆ ಬ್ರೆಡ್ನಿಂದ ಚಾಟ್ ತಯಾರಿಸಿದರೆ, ಬ್ರೆಡ್ ಟೋಸ್ಟ್ ಮತ್ತು ಬ್ರೆಡ್ ಪಕೋಡವನ್ನು ಬಿಟ್ಟು ಪ್ರತಿದಿನ ಚಾಟ್ ಮಾಡುತ್ತೀರಿ. ಇನ್ನೇಕೆ ತಡ, ಬ್ರೆಡ್ ಚಾಟ್ ತಯಾರಿಸುವ (Bread Chaat Recipe) ವಿಧಾನವನ್ನು ತಿಳಿಯೋಣ ಬನ್ನಿ.

ಬ್ರೆಡ್ ಚಾಟ್ ಮಾಡಲು ಬೇಕಾಗುವ ಪದಾರ್ಥಗಳು
• ಬ್ರೆಡ್ - ಬಿಳಿ ಅಥವಾ ಬ್ರೌನ್ ಬಣ್ಣದ 4 ರಿಂದ 5 ಹೋಳು
• ಆಲೂಗಡ್ಡೆ - 1 (ಬೇಯಿಸಿದ ಮತ್ತು ಸಿಪ್ಪೆ ತೆಗೆದದ್ದು)
• ಈರುಳ್ಳಿ - 1 (ಸಣ್ಣ ತುಂಡುಗಳಾಗಿ ಕತ್ತರಿಸಿದ್ದು)
• ಟೊಮೆಟೊ - ಸಣ್ಣ ತುಂಡುಗಳಾಗಿ ಕತ್ತರಿಸಿದ್ದು 1
• ಹಸಿರು ಚಟ್ನಿ - 1 ಸ್ಪೂನ್ (ಪುದೀನ ಮತ್ತು ಕೊತ್ತಂಬರಿ)
• ಹುಣಸೆ ಹಣ್ಣಿನ ಸಿಹಿ ಚಟ್ನಿ - 1 ಸ್ಪೂನ್
• ಮೊಸರು - 1 ಕಪ್
• ಚಾಟ್ ಮಸಾಲಾ - 1 ಸ್ಪೂನ್
• ಹುರಿದ ಜೀರಿಗೆ ಪುಡಿ - 1 ಸ್ಪೂನ್
• ಕೆಂಪು ಮೆಣಸಿನ ಪುಡಿ - ಸ್ವಲ್ಪ
• ಉಪ್ಪು - ರುಚಿಗೆ ತಕ್ಕಂತೆ
• ಸೇವ್ - ಅಗತ್ಯಕ್ಕೆ ತಕ್ಕಂತೆ
• ಕೊತ್ತಂಬರಿ ಸೊಪ್ಪು - ಕತ್ತರಿಸಿದ್ದು ಸ್ವಲ್ಪ
• ದಾಳಿಂಬೆ ಬೀಜಗಳು - ಸ್ವಲ್ಪ (ಅಲಂಕಾರಕ್ಕೆ ಬೇಕಿದ್ದರೆ)
ಬ್ರೆಡ್ ಚಾಟ್ ತಯಾರಿಸುವ ವಿಧಾನ
ಮೊದಲಿಗೆ ಬ್ರೆಡ್ ಅನ್ನು ಸಿದ್ಧಪಡಿಸಿ. ಬ್ರೆಡ್ ಅನ್ನು ತವಾದಲ್ಲಿ ಗರಿಗರಿಯಾಗುವವರೆಗೆ ಫ್ರೈ ಮಾಡಿ. ಬಳಿಕ, ಪ್ರತಿ ಹೋಳು ಅಥವಾ ಸ್ಲೈಸ್ ಅನ್ನು 4 ಸಣ್ಣ ತುಂಡುಗಳಾಗಿ ಕತ್ತರಿಸಿ (ಚೌಕಾಕಾರವಾಗಿ ಕತ್ತರಿಸಿ). ಈಗ ಒಂದು ತಟ್ಟೆಯಲ್ಲಿ ಬ್ರೆಡ್ ತುಂಡುಗಳನ್ನು ಇಡಿ. ನಂತರ ಅದಕ್ಕೆ ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಟೊಮೆಟೊವನ್ನು ಸ್ವಲ್ಪ ಸ್ವಲ್ಪ ಹಾಕಿ. ಇದಾದ ನಂತರ ಪ್ರತಿ ಹೋಳಿನ ಮೇಲೆ ಹಸಿರು ಚಟ್ನಿ ಮತ್ತು ಹುಣಸೆ ಹಣ್ಣಿನ ಸಿಹಿ ಚಟ್ನಿ ಹಾಕಿ. ಬಳಿಕ ಕಡೆದ ಮೊಸರನ್ನು ಹಾಕಿ.

ಈಗ ಅದರ ಮೇಲೆ ಚಾಟ್ ಮಸಾಲಾ, ಹುರಿದ ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಚಿಮುಕಿಸಿ. ಬಳಿಕ ಅದರ ಮೇಲೆ ಸೇವ್ ಹಾಕಿ. ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಬೀಜಗಳಿಂದ ಅಲಂಕರಿಸಿ. ಇಷ್ಟು ಮಾಡಿದರೆ ಬ್ರೆಡ್ ಚಾಟ್ ಸವಿಯಲು ಸಿದ್ಧವಾಗುತ್ತದೆ. ನೆನಪಿಡಿ, ತಯಾರಾದ ಬ್ರೆಡ್ ಚಾಟ್ ಅನ್ನು ತಕ್ಷಣವೇ ಸವಿಯಬೇಕು. ಇಲ್ಲದಿದ್ದರೆ ಬ್ರೆಡ್ ಮೃದುವಾಗಬಹುದು. ಈ ಬ್ರೆಡ್ ಚಾಟ್ ತಿನ್ನಲು ಬಹಳ ರುಚಿಕರವಾಗಿರುತ್ತದೆ ಮತ್ತು ಇದನ್ನು ತಯಾರಿಸಲು ಹೆಚ್ಚು ಸಮಯ ಬೇಕಿಲ್ಲ. ಮನೆಯಲ್ಲಿಯೇ ಲಭ್ಯವಿರುವ ಅಲ್ಪ ಪದಾರ್ಥಗಳನ್ನು ಬಳಸಿಕೊಂಡು ಇದನ್ನು ಸುಲಭವಾಗಿ ತಯಾರಿಸಬಹುದು.



Click it and Unblock the Notifications
