Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
Rusk: ಬೇಕರಿಗಿಂತ ರುಚಿ ಈ ರಸ್ಕ್! ಪರ್ಫೆಕ್ಟ್ ಟೀ ಟೈಮ್ ಸ್ನ್ಯಾಕ್.. ಇಂದೇ ಮನೆಯಲ್ಲಿ ಟ್ರೈ ಮಾಡಿ
ಅಡುಗೆನೇ ಬರೆದವರು ಮಾಡಬಹುದು! ನೀವು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಹೌದು, ರಸ್ಕ್ ಎಂದರೆ ನೀರೂರಿಸುವ ಖಾದ್ಯಗಳಲ್ಲಿ ಒಂದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಬಲು ಪ್ರಿಯ. ಅಂತಹವರಿಗಾಗಿಯೇ ಬೇಕರಿ ರೀತಿಯ ಮತ್ತು ಸಖತ್ ಟೇಸ್ಟಿಯಾದ ರಸ್ಕ್ (Rusk) ರೆಸಿಪಿಯನ್ನು ನಿಮಗಾಗಿ ತಂದಿದ್ದೇವೆ. ಈ ರಸ್ಕ್ ಅನ್ನು ತಯಾರಿಸುವುದು ತುಂಬಾ ಸರಳ. ಹಾಗಿದ್ರೆ, ಮನೆಯಲ್ಲಿಯೇ ರುಚಿಯಾದ ರಸ್ಕ್ (Homemade Rusk Recipe) ಹೇಗೆ ಮಾಡಬೇಕು ಅನ್ನೋದನ್ನು ತಿಳಿಯೋಣ ಬನ್ನಿ.
ಸಂಜೆಯ ಸಮಯ, ತಂಪಾದ ಗಾಳಿ ಬೀಸುತ್ತದೆ. ಅದರೊಂದಿಗೆ ಕೈಯಲ್ಲಿ ಬಿಸಿಬಿಸಿ ಟೀ ಅಥವಾ ಕಾಫಿ ಇರುತ್ತದೆ. ಇದೇ ವೇಳೆ ನಿಮಗೆ ಏನನ್ನಾದರೂ ಬೇಕು ಅನಿಸುತ್ತೆ. ಆಗ ಗರಿಗರಿಯಾದ ಅಥವಾ ರುಚಿಯಾದ ತಿಂಡಿ ಜೊತೆಗಿದ್ದರೆ ಅದರ ಮಜವೇ ಬೇರೆ. ಈ ಸಂದರ್ಭದಲ್ಲಿ ರಸ್ಕ್ ನಿಮಗೆ ಬೆಸ್ಟ್ ಚಾಯ್ಸ್. ಇದು ತಿನ್ನಲು ಸುಲಭವಲ್ಲದೆ, ಟೀ ಅಥವಾ ಕಾಫಿಯಲ್ಲಿ ಅದ್ದಿ ತಿನ್ನುವಾಗ ಖುಷಿ ನೀಡುತ್ತದೆ. ಈ ರೀತಿಯ ಮಜ ರಸ್ಕ್ ಬಿಟ್ಟರೆ, ಬೇರೆ ಯಾವುದೇ ತಿಂಡಿಯಲ್ಲಿ ಸಿಗುವುದಿಲ್ಲ.

ಸಾಮಾನ್ಯವಾಗಿ ಅಗಡಿ ಅಥವಾ ಮಾರುಕಟ್ಟೆಯಲ್ಲಿ ರಸ್ಕ್ ಲಭ್ಯವಿದೆ. ಆದರೆ, ನೀವು ಇದನ್ನು ಮನೆಯಲ್ಲಿಯೇ ಮಾಡಿದರೆ ರುಚಿಕರ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಆಗ, ಮನೆ ಮತ್ತು ಹೊರಗಿನ ರಸ್ಕ್ನಲ್ಲಿನ ವ್ಯತ್ಯಾಸ ತಿಳಿಯುತ್ತದೆ. ಮನೆಯಲ್ಲಿ ರಸ್ಕ್ಗಳನ್ನು ತಯಾರಿಸುವುದು ಅಷ್ಟು ಕಷ್ಟವಲ್ಲ. ಪ್ರಮುಖ ವಿಷಯವೆಂದರೆ, ಒಮ್ಮೆ ಮಾಡಿದ ಬಳಿಕ, ನೀವು ಇದನ್ನು ವಾರಗಟ್ಟಲೆ ಬಳಸಬಹುದು ಅಥವಾ ಸಂಗ್ರಹಿಸಬಹುದು. ಇನ್ನೇಕೆ ತಡ, ಮನೆಯಲ್ಲಿಯೇ ರಸ್ಕ್ ಮಾಡುವ ವಿಧಾನವನ್ನು ನೋಡೋಣ.
ರಸ್ಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಹಿಟ್ಟು (ಮೈದಾ)
ಬೇಕಿಂಗ್ ಪೌಡರ್
ಅಡಿಗೆ ಸೋಡಾ
ಸಕ್ಕರೆ
ಹಾಲು
ಅಡುಗೆ ಎಣ್ಣೆ ಅಥವಾ ಬೆಣ್ಣೆ
ವೆನಿಲ್ಲಾ ಎಸೆನ್ಸ್
ಏಲಕ್ಕಿ ಪುಡಿ
ರಸ್ಕ್ ಮಾಡುವ ವಿಧಾನ
ಮೊದಲು, ಕುಕ್ಕರ್ನಲ್ಲಿ ಅರ್ಧದಷ್ಟು ಉಪ್ಪು ಹರಡಿ. ಅದರ ಮೇಲೆ ಒಂದು ಸ್ಟ್ಯಾಂಡ್ ಇಡಿ. ಕುಕ್ಕರ್ನ ಮುಚ್ಚಳದಲ್ಲಿನ ವಿಜಲ್ ಮತ್ತು ರಬ್ಬರ್ ಅನ್ನು ತೆಗೆಯಿರಿ. ಬಳಿಕ ಕುಕ್ಕರ್ ಅನ್ನು ಮುಚ್ಚಿ 10 ನಿಮಿಷಗಳ ಕಾಲ ಅದನ್ನು ಕಾಯಿಸಿ. ಇದಾದ ಬಳಿಕ, 2 ಕಪ್ (ಮೈದಾ) ಹಿಟ್ಟು ತೆಗೆದುಕೊಳ್ಳಿ, ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ. ಈಗ ಒಂದು ಚಮಚ ಬೇಕಿಂಗ್ ಪೌಡರ್ ಹಾಕಿ. ಮತ್ತು 1/4 ಸ್ಪೂನ್ ಅಡಿಗೆ ಸೋಡಾ ಬಳಸಿ.
ಈಗ ಮತ್ತೊಂದು ಬಟ್ಟಲು ತೆಗೆದುಕೊಳ್ಳಿ. ಅದರಲ್ಲಿ ಒಂದೂವರೆ ಕಪ್ ಪುಡಿ ಮಾಡಿದ ಸಕ್ಕರೆ ಹಾಕಿ. ಹಾಗೆಯೇ ಅರ್ಧ ಕಪ್ ಅಡುಗೆ ಎಣ್ಣೆ ಅಥವಾ ಬೆಣ್ಣೆ ಬೆರಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅದಕ್ಕೆ 1/2 ಕಪ್ ಹಾಲು (ಬೇಯಿಸಿದ) ಮತ್ತು ಅರ್ಧ ಚಮಚ ವೆನಿಲ್ಲಾ ಎಸೆನ್ಸ್ ಹಾಕಿ ಮಿಕ್ಸ್ ಮಾಡಿ. ಇದಾದ ಬಳಿಕ, ಸ್ವಲ್ಪ ಏಲಕ್ಕಿ ಪುಡಿ ಮತ್ತು ಇನ್ನಿತರ ಪದಾರ್ಥಗಳನ್ನು ಸೇರಿಸಿ ಮತ್ತು ಬ್ಯಾಟರ್ ತಯಾರಿಸಿ.
ಇದಾದ ಬಳಿಕ ಪಾತ್ರೆಯಲ್ಲಿ ಬ್ಯಾಟರ್ ಅನ್ನು ಹಾಕಿ. ಕಾಯಿಸಿದ ಕುಕ್ಕರ್ನಲ್ಲಿ ಪಾತ್ರೆಯನ್ನು ಸ್ಟ್ಯಾಂಡ್ ಮೇಲೆ ಇಡಿ. ಈಗ ಕುಕ್ಕರ್ ಮುಚ್ಚಿ 35 ರಿಂದ 40 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಕೇಕ್ ಬೆಂದ ಬಳಿಕ ಅದನ್ನು ಹೊರತೆಗೆದು ಗಾಳಿಯಲ್ಲಿ ತಣ್ಣಗಾಗಲು ಬಿಡಿ. ನಂತರ, ಕೇಕ್ ಅನ್ನು ಹೋಳುಗಳಾಗಿ ಕತ್ತರಿಸಿ ಈ ಹೋಳುಗಳನ್ನು ಮತ್ತೆ ಕುಕ್ಕರ್ನಲ್ಲಿ ಹಾಕಿ. ಸ್ಲೈಡ್ಗಳನ್ನು ಎರಡೂ ಬದಿಗಳಲ್ಲಿ ಕಂದು ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗಿ ಹುರಿಯಿರಿ. ಇಷ್ಟು ಮಾಡಿದರೆ ಮನೆಯಲ್ಲಿಯೇ ರಸ್ಕ್ ಸಿದ್ಧವಾಗುತ್ತದೆ. ಈ ರಸ್ಕ್ಗಳು ತಣ್ಣಗಾದ ಮೇಲೆ ಒಂದು ಬಾಕ್ಸ್ ಅಥವಾ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಇದನ್ನು ಬೆಳಗ್ಗೆ ಅಥವಾ ಸಂಜೆ ಚಹಾದೊಂದಿಗೆ ಸವಿಯಬಹುದು.



Click it and Unblock the Notifications