Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಅಯ್ಯಂಗಾರ್ ಬೇಕರಿಯ ಈ ಮಿಕ್ಸರ್ ಖಾರ ಮನೆಯಲ್ಲೇ ಮಾಡಿ..!
ಸಂಜೆ ಸಮಯದಲ್ಲಿ ನಾವು ಟೀ ಜೊತೆಗೆ ಒಂದಿಷ್ಟು ಬೇಕರಿ ತಿಂಡಿ ಸವಿಯುತ್ತೇವೆ. ಬಾಯಿ ರುಚಿ ಹೆಚ್ಚಿಸುವಂತಹ ಹಲವು ರೀತಿಯ ತಿಂಡಿಯನ್ನು ನಾವು ಮನೆಯಲ್ಲೇ ಮಾಡಿ ಸವಿಯುತ್ತೇವೆ. ಇಂತಹ ಹಲವು ತಿಂಡಿಗಳ ಪೈಕಿ ಮಿಕ್ಸರ್ ಕೂಡ ಒಂದಾಗಿದೆ. ಅಂಗಡಿ, ಬೇಕರಿಯಲ್ಲಿ ಸಿಗುವಂತ ಖಾರ ಮಿಕ್ಸರ್ ಬಾಯಿ ರುಚಿ ಹೆಚ್ಚಿಸುತ್ತೆ.
ಬಾಯಿಗೆ ಖಾರ ಖಾರವಾಗಿ ಸಿಗುವಂತಹ ಈ ಮಿಕ್ಸರ್ ಅನ್ನು ಬೇಕರಿಯಲ್ಲಿ ಹೇಗೆ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಾ?, ಮಿಷನ್ ಬಳಸಿ ಬೇಕರಿಯಲ್ಲಿ ಕಡಿಮೆ ಸಮಯದಲ್ಲಿ ಇದನ್ನು ಮಾಡುತ್ತಾರೆ. ಹೀಗಾಗಿ ಈ ಖಾರ ಮಿಕ್ಸರ್ ಸವಿಯಲು ಜನರು ಬಹಳ ಇಷ್ಟಡುತ್ತಾರೆ. ಸಂಜೆ ಸಮಯದಲ್ಲಿ ಮನೆಯಲ್ಲಿ ತಿನ್ನಲು ಅಥವಾ ಅತಿಥಿಗಳು ಯಾರಾದರು ಬಂದಾಗ ಅವರಿಗೆ ನೀಡಲು ಕೂಡ ಇದು ಬಹಳ ಮುಖ್ಯವಾಗಿದೆ.

ಹಾಗಾದ್ರೆ ಅಯ್ಯಂಗಾರ್ ಬೇಕರಿ ರುಚಿಯ ಈ ಖಾರ ಮಿಕ್ಸರ್ ಅನ್ನು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅಯ್ಯಂಗಾರ್ ಬೇಕರಿ ರುಚಿಯ ಮಿಕ್ಸರ್ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಹಿಟ್ಟು
- ಅರಶಿಣ
- ಜೀರಿಗೆ
- ಕರಿಬೇವು
- ಖಾರದ ಪುಡಿ
- ಉಪ್ಪು
- ಎಣ್ಣೆ
- ಕಡಲೆ ಬೀಜ
ಅಯ್ಯಂಗಾರ್ ಬೇಕರಿ ರುಚಿಯ ಮಿಕ್ಸರ್ ಮಾಡುವ ವಿಧಾನವೇನು?
ಮೊದಲು ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿಕೊಂಡು ಇಟ್ಟುಕೊಳ್ಳಿ, ಅನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಕಪ್ ಕಡಲೆ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ ಖಾರದ ಪುಡಿ, ಉಪ್ಪ, ಸೋಡಾ, ಅರಶಿಣ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಮೂರು ಚಮಚ ಎಣ್ಣೆ ಹಾಕಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಇದಕ್ಕೆ ಜೀರಿಗೆ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ರೆಡಿ ಮಾಡಿಕೊಳ್ಳಿ. ಹಿಟ್ಟು ಹದವಾಗಿ ಬರುವಂತೆ ಕಲಸಿಕೊಳ್ಳಬೇಕು. ಹಿಟ್ಟು ದಪ್ಪವಾಗಿ ಇರಬಾರದು ಹಾಗೆ ತೆಳುವಾಗಿರಬಾರದು, ಮೇಲೆ ಎತ್ತಿ ಹಿಡಿದರೆ ನಿಧಾನವಾಗಿ ದಾರವಾಗಿ ಕೆಳಗೆ ಬೀಳಬೇಕು.
ಈಗ ನೀವು ಮನೆಯಲ್ಲಿ ಈ ಮಿಕ್ಸರ್ ಮಾಡುವ ಯಂತ್ರ ಇಲ್ಲ ಎಂದರೆ ಅನ್ನ ಬೆಂದಿದೆಯೇ ಎಂದು ನೋಡಲು ತೂತುಗಳಿರುವ ಸೌಟು ಬಳಸುತ್ತೀರಿ, ಅದನ್ನೇ ಬಳಸಿದರೆ ಆಯಿತು. ಅದರಲ್ಲೂ ಸಣ್ಣ ಸಣ್ಣ ತೂತುಗಳಿರುತ್ತವೆ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಟ್ಟುಕೊಳ್ಳಿ.
ಎಣ್ಣೆ ಕಾದ ಬಳಿಕ ಈ ತೂತು ಇರುವ ಸೌಟನ್ನು ಎಣ್ಣೆಯ ಮೇಲೆ ಹಿಡಿದುಕೊಂಡು ಅನಂರ ಹಿಟ್ಟನ್ನು ಸೌಟಿನ ಮಳೆ ಇಟ್ಟುಕೊಂಡು ಕೈಯಿಂದ ಒತ್ತಿಕೊಳ್ಳಿ. ಈ ಹಿಟ್ಟು ನಿಧಾನವಾಗಿ ಎಣ್ಣೆಗೆ ಬೀಳಲು ಆರಂಭಿಸುತ್ತದೆ. ಹಿಟ್ಟು ಎಣ್ಣೆಗೆ ಬಿದ್ದ ಬಳಿಕ ತಿರುಗಿಸಲು ಹೋಗಬೇಡಿ. 3 ನಿಮಿಷ ಹಾಗೆ ಬಿಟ್ಟು ಚೆನ್ನಾಗಿ ತಿರುಗಿಸಿಕೊಳ್ಳಿ.
ಒಟ್ಟು 5 ನಿಮಿಷ ಎಣ್ಣೆಯಲ್ಲಿ ಬೆಂದರೆ ಸಾಕಾಗುತ್ತದೆ. ಇದೇ ರೀತಿ ಎಲ್ಲಾ ಹಿಟ್ಟನ್ನು ಕೂಡ ಮಾಡಿಕೊಳ್ಳಿ. ಇಷ್ಟಾದರೆ ಮಿಕ್ಸರ್ ಖಾರ ರೆಡಿಯಾಗುತ್ತದೆ. ನೀವು ಕೊನೆಯಾದಗಿ ಈ ಎಣ್ಣೆಗೆ ಕಡಲೆ ಬೀಜ ಹಾಕಿ ಹುರಿದುಕೊಂಡು ಎಣ್ಣೆಯಿಂದ ತೆಗೆದು ಬಳಿಕ ಕರಿಬೇವು ಕೂಡ ಹಾಕಿ ಕರಿದುಕೊಂಡು ಎರಡು ಪದಾರ್ಥವನ್ನು ಮಿಕ್ಸರ್ಗೆ ಹಾಕಿ.
ಈಗ ಸಣ್ಣ ಬೌಲ್ನ್ಲಿ ಖಾರದ ಪುಡಿ ಹಾಗೂ ಉಪ್ಪು ಮಿಕ್ಸ್ ಮಾಡಿಕೊಂಡು ಮಿಕ್ಸರ್ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಅಯ್ಯಂಗಾರ್ ಬೇಕರಿಯ ಈ ಮಿಕ್ಸರ್ ರೆಡಿಯಾಗುತ್ತದೆ.



Click it and Unblock the Notifications
