Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಹಬ್ಬದ ಸಂಭ್ರಮ ಹೆಚ್ಚಿಸಲು ಬೇಕರಿ ಲಾಡು ಮನೆಯಲ್ಲೇ ಮಾಡಿ! 2 ವಸ್ತು ಇದ್ರೆ ಸಾಕು
ನವರಾತ್ರಿ ಹಾಗೆ ಆಯುಧಪೂಜೆ, ವಿಜಯದಶಮಿ ಹಬ್ಬದಲ್ಲಿ ಸಿಹಿ ತಿಂಡಿ ಮಾಡಿ ಸವಿಯೋದು ಎಲ್ಲರು ಮಾಡುವ ಕೆಲಸ. ಅದ್ರಲ್ಲೂ ಈ ಎರಡು ದಿನಗಳ ಆಚರಣೆಯಲ್ಲಿ ಸಿಹಿ ತಿಂಡಿ ಇಲ್ಲದೆ ಹಬ್ಬ ಪೂರ್ಣ ಆಗೋದೆ ಇಲ್ಲ. ಬಹುತೇಕರು ಈ ಸಮಯದಲ್ಲಿ ಬೇಕರಿಯಿಂದ ಸಿಹಿಗಳ ತಂದು ಪೂಜೆಯಲ್ಲಿ ಇಟ್ಟು ಅನಂತರ ಸವಿಯುತ್ತಾರೆ. ಹಾಗೆ ಊಟದೊಂದಿಗೆ ಸವಿಯಲು ಯಾವುದಾದರು ಸಿಹಿಯನ್ನು ಮನೆಯಲ್ಲೇ ಮಾಡುವುದು ಕೂಡ ನೋಡಬಹುದು.
ಅದ್ರಲ್ಲೂ ಈ ಗಡಿಬಿಡಿಯ ಸಮಯದಲ್ಲಿ ಎಲ್ಲರು ಸುಲಭವಾದ ಸಿಹಿ ತಿಂಡಿ ಮಾಡಿ ಸವಿಯುವ ಕುರಿತಾಗಿಯೇ ಆಲೋಚಿಸುತ್ತಾರೆ. ಹಾಗೆ ಸುಲಭವಾಗಿ ಮಾಡಿ ಮುಗಿಸುವಂತಹ ರುಚಿ ರುಚಿಯಾದ ಸಿಹಿ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲಿ ನಾವಿಂದು ಕೇವಲ 2 ವಸ್ತುಗಳ ಬಳಸಿ ಮನೆಯಲ್ಲಿ ಮಾಡುವಂತಹ ಬೇಕರಿ ಲಾಡು ಕುರಿತು ತಿಳಿಯೋಣ.

ನೀವು ಬೇಕರಿಗಳಿಗೆ ಭೇಟಿ ನೀಡಿದಾಗ ನಿಮ್ಮ ಕಣ್ಣಿಗೆ ಕಾಣುವಂತಹ ಸಿಹಿ ತಿಂಡಿಗಳಲ್ಲಿ ಲಾಡು ಬಹುಬೇಗ ನಿಮ್ಮ ಗಮನ ಸೆಳೆದುಬಿಡುತ್ತದೆ. ಈಗ ಹಲವು ಬಗೆಯ ಲಾಡುಗಳನ್ನು ನೋಡಬಹುದು. ಕೆಲವೊಂದು ರುಚಿಯಲ್ಲಿ ಅದ್ಭುತವಾಗಿದ್ದರೆ ಮತ್ತೆ ಕೆಲವರು ನೋಡಲು ಕೂಡ ಅಷ್ಟೇ ಇಷ್ಟವಾಗುತ್ತವೆ.
ಆದ್ರೆ ನಾವಿಂದು ಮನೆಯಲ್ಲಿ ಕಡಿಮೆ ವಸ್ತುಗಳ ಬಳಸಿ ಬೇಕರಿ ಲಾಡು ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ಹೇಳಲಿದ್ದೇವೆ. ಈ ಬೇಕರಿ ಲಾಡು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೇಕರಿ ಲಾಡು ಮಾಡಲು ಬೇಕಾಗುವ ವಸ್ತುಗಳು
ಕೊಬ್ಬರಿ ಪುಡಿ
ಹಾಲು
ಸಕ್ಕರೆ
ಹಳದಿ ಬಣ್ಣ
ತುಪ್ಪ - 1 ಚಮಚ
ಏಲಕ್ಕಿ ಪುಡಿ - 1/4 ಚಮಚ
ಬೇಕರಿ ಲಾಡು ಮಾಡುವ ಸುಲಭದ ವಿಧಾನ ಇಲ್ಲಿದೆ
ಮೊದಲು ಒಂದು ಅಳತೆ ಕಪ್ನಲ್ಲಿ 3 ಕಪ್ ಕೊಬ್ಬರಿ ಪುಡಿ ತೆಗೆದುಕೊಂಡು ಬಾಣಲೆಗೆ ಹಾಕಿಕೊಳ್ಳಿ. ಈಗ ಅದೇ ಕಪ್ನಲ್ಲಿ 3 ಕಪ್ ಹಾಲು ಕೂಡ ಹಾಕಿಕೊಂಡು ಮಿಕ್ಸ್ ಮಾಡಬೇಕು. ಇದು ಸ್ವಲ್ಪ ಗಟ್ಟಿಯಾಗಲು ಆರಂಭಿಸುತ್ತದೆ. 3 ನಿಮಿಷಗಳ ಕಾಲ ಫ್ರೈ ಮಾಡಿದ ಬಳಿಕ ಇದಕ್ಕೆ 1 ಕಪ್ ಸಕ್ಕರೆ ಹಾಕಿಕೊಂಡು ಮಿಶ್ರಣ ಮಾಡಿ.
ಸಕ್ಕರೆ ಕರಗುವ ವರೆಗೂ ಮಧ್ಯಮ ಉರಿಯಲ್ಲಿ ಮಿಕ್ಸ್ ಮಾಡಿ. ಈಗ ಹಾಲಿನಲ್ಲಿ ಮಿಕ್ಸ್ ಮಾಡಿಕೊಂಡ ಹಳದಿ ಬಣ್ಣವನ್ನು ಹಾಕಿಕೊಳ್ಳಿ. ಬಣ್ಣ ಹಾಕದೆ ಇದ್ದರೂ ನಡೆಯುತ್ತದೆ. ಆದ್ರೆ ಲಾಡು ಬಿಳಿ ಬಣ್ಣದಲ್ಲಿ ಬರಲಿದೆ. ಈಗ ಕಾಲು ಸ್ಪೂನ್ ಏಲಕ್ಕಿ ಪುಡಿ ಹಾಕಿಕೊಳ್ಳಿ. ಈಗ ಒಂದು ಸ್ಪೂನ್ ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇದು ಕೇಸರಿ ಬಾತ್ನಂತೆ ಹದಕ್ಕೆ ಬರಲಿದೆ. ಉಂಡೆ ಕಟ್ಟುವಂತಹ ಹದಕ್ಕೆ ಬಂದಾಗ ಒಲೆ ಆಫ್ ಮಾಡಿಕೊಳ್ಳಿ. ಬಳಿಕ 2 ನಿಮಿಷ ತಣ್ಣಗಾಲು ಬಿಡಿ. ನಂತರ ಮತ್ತೊಂದು ಬೌಲ್ಗೆ ಹಾಕಿಕೊಂಡು ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿಕೊಳ್ಳಿ. ಉಂಡೆ ಕಟ್ಟಿಕೊಂಡ ಬಳಿಕ ಲಾಡನ್ನು ಕೊಬ್ಬರಿ ಪುಡಿಯಲ್ಲಿ ಉರುಳಿಸಿಕೊಳ್ಳಿ. ನಂತರ ಒಂದು ಒಣ ದ್ರಾಕ್ಷಿಯನ್ನು ಮಧ್ಯದಲ್ಲಿ ಇಟ್ಟು ಒತ್ತಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಬೇಕರಿ ಲಾಡು ರೆಡಿಯಾಗುತ್ತದೆ. ಇದನ್ನು ಮಾಡೋದು ಬಹಳ ಸುಲಭ ಹಾಗೆ ರುಚಿಯೂ ಕೂಡ ಅದ್ಭುತವಾಗಿರಲಿದೆ.
ಈ ಹಬ್ಬದ ಸಮಯದಲ್ಲಿ ಈ ರೀತಿ ಸುಲಭವಾಗಿ ಸಿಹಿ ಮಾಡಿದ್ದರೆ ಮನೆ ಮಂದಿಯಲ್ಲ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ಗಡಿಬಿಡಿಯಲ್ಲಿ ಇದ್ದಾಗಲು ಇದನ್ನು ಮಾಡಿ ಸವಿಯಬಹುದು.



Click it and Unblock the Notifications